ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರ್ಮಬಂಧನ ಛೇದನ - ಶ್ರೀ - |ರಾಮನ ನಾಮವ ನೆನೆ ಮನವೆ ಪ.ಅರ್ಚಿಸಲರಿಯೆನು ಪೂಜಿಸಲರಿಯೆನು |ಮೆಚ್ಚಿಸಲರಿಯೆನೆಂದೆನ ಬೇಡ ||ಅಚ್ಯುತಾನಂತ ಗೋವಿಂದನ ನಾಮವ |ಇಚ್ಛೆ ಬಂದಾಗಲೆ ನೆನೆ ಮನವೆ 1ಸ್ನಾನವನರಿಯೆನು ಧ್ಯಾನವನರಿಯೆನು |ಏನನು ಅರಿಯೆನೆಂದೆನಬೇಡ ||ಜಾನಕಿರಮಣನ ದಶರಥನಂದನ |ದಾನವನಾಶನ ನೆನೆ ಮನವೆ 2ಮಂತ್ರವನರಿಯೆನು ತಂತ್ರವನರಿಯೆನು |ಎಂತು ಅರಿಯೆನೆಂದೆನಬೇಡ ||ಸಂತತಾನಂತ ಗೋವಿಂದನ ನಾಮವ |ಅಂತರಂಗದೊಳು ನೆನೆ ಮನವೆ 3ಜಪವ ನಾನರಿಯೆನು ತಪವ ನಾನರಿಯೆನು |ಉಪವಾಸವರಿಯೆನೆಂದೆನಬೇಡ ||ಅಪರಿಮಿತ ಗುಣಗಳ ಅನಂತಮಹಿಮನ |ಕೃಪೆಯ ಸಮುದ್ರನ ನೆನೆ ಮನವೆ 4ಕಲಿಯುಗದೊಳು ಹರಿನಾಮವ ನೆನೆದರೆ |ಕುಲಕೋಟಿಗಳುದ್ಧರಿಸುವುವು ||ಸುಲಲಿತ ಭಕ್ತಿಗೆ ಸುಲಭನೆಂದೆನಿಸುವ |ಜಲರುಹನಾಭನ ನೆನೆ ಮನವೆ 5ತಾಪತ್ರಯಗಳ ತಪ್ಪಿಸಿ ಸುಜನರ |ಪಾಪಗಳೆಲ್ಲವ ಪರಿಹರಿಸುವುದು ||ಶ್ರೀಪತಿ ಸದಮಲಧ್ಯಾನಗೋಚರನ |ಗೋಪೀನಾಥನ ನೆನೆ ಮನವೆ 6ವರದ ವೀರನಾರಾಯಣ ಸ್ವಾಮಿಯು |ಪರಮಪಾವನನು ಹಿತನಾಗಿ ||ಹರಿಯದ ಇಹಪರ ಕೊಡುವ ಸುಖಂಗಳ |ಪುರಂದರವಿಠಲನ ನೆನೆ ಮನವೆ 7
--------------
ಪುರಂದರದಾಸರು