ನಾನೇನಿನಗಂದೆನೋ ಬಿಡದೆ ಪವ
ಮಾನ ಪಾಲಿಸೋ ಎನ್ನನು ಪ
ದೀನರ ಪಾಲಿಪ ದಾನವಾಂತಕ ಎನ್ನ
ಜ್ಞಾನಾನಂದದ ನಾಮ ಧ್ಯಾನವಗೈದೆನೊ ಅ.ಪ
ಶರಧಿ ಲಂಘಿಸಿ ರಘು
ವರನ ಕುಶಲವಾರ್ತೆಧರೆಜಾತೆಗೆ
ಅರುಹಿ ದಶಾಶ್ಯನ ಪುರವ ದಹಿಸಿದಂಥ
ಪರಮಸಮರ್ಥನೆಂದರಿತ ಕೊಂಡಾಡಿದೆನಲ್ಲದೆ ||
ತರು ಚರುವರನೆಂದಿನೆ | ಶಿರದಿ ಕಲ್ಲು
ಧರಿಸಿ ತಂದವನೆಂದಿನೆ | ಬ್ರಹ್ಮಾಸ್ತ್ರಕೆ
ಭರದಿ ಸಿಲ್ಕಿದಿ ಎಂದೆನೆ ಭಕ್ತೀಲಿ ಭಾವಿ
ಸರಸಿಜಾಸ್ರನನೆಂದು ಸ್ಮರಿಸಿದೆನಲ್ಲದೆ 1
ಕೃತಯುಗದಲಿ ಕುಂತಿಸುತನಾಗಿ ಜನಿಸುತ
ಪತಿ ಪಿತನಂಘ್ರಿ ಭಜಿಸುತಲಿ
ಕ್ಷಿತಿ ಭಾರಕೆ ಖಳ ತತಿಯ ಸಂಹರಿಸಿದಾ
ಪ್ರತಿಮಲ್ಲ ನೀನೆಂದು ಸ್ತುತಿಸಿದೆ ನಲ್ಲದೆ
ಖತಿವಂತ ನೀನೆಂದಿನೆ ದುನುಜಾತೆಗೆ
ಪತಿಯಾದವನೆಂದಿನೆ ಅವಳ ಕೂಡಿ
ಸುತನ ಪೆತ್ತವನೆಂದನೆ ಯಾಮಿನಿಯಲಿ
ಸತಿಯೆನಿನದವ ನೆಂದೆನೇ ನಿನ್ನನು ಬಿಟ್ಟು
ಗತಿನಮಗಿಲ್ಲೆಂದು | ನುತಿಸಿದೆ ನಲ್ಲದೆ 2
ನಡುಮನಿಸುತನಾ ಪೊಡವಿಯೊಳಗೆ ಪುಟ್ಟ
ಉಡುಪಿ ಕ್ಷೇತ್ರದಿ ಶಾಮಸಂದರನ
ಧೃಡವಾಗಿ ಸ್ಥಾವಿಸಿ | ಜಡ ಕುಮಾಯ್ಗಳಗೆದ್ದ
ಸಡಗರ ಮುನಿಸುತನಾಗಿ ಪೊಡೆವಿಯೊಳಗೆ ಪುಟ್ಟ
ಉಡುಪಿ ಕ್ಷೇತ್ರದಿ ಶಾಮಸುಂದರನ
ಧೃಡವಾಗಿ ಸ್ಥಾಪಿಸಿ | ಜಡ ಕುಮಾಯ್ಗಳಗೆದ್ದ
ಸಡಗರ ಮುನಿ ಎಂದು ನುಡಿದೆನಲ್ಲದೆ ಹುರಳಿಮೆದ್ದ
ಬಡದ್ವಿಜ ಶಿಶುವೇದಿನೆ | ಎತ್ತಿನ ಬಾಲ ಪಿಡಿದೋಡಿ
ದವನೆಂದಿನೆ | ಬೆಸರದಿಂದ ಮಡದಿ ಬಿಟ್ಟವ
ನೆಂದಿನೆ ಕಡಿಗೆ ಬೋರಿ ಗಿಡವ ಸೇರಿದಿ
ತೋರೆಂದು ಅಡಿಗಳಿಗೆರಗಿದೆ ನಲ್ಲದೆ 3