ಮಾಲಕೌಸ್ತುಭ ಸತ್ಯಭಾಮಲೋಲ ನೀಲಶಾಮಸುಂದರ
ಕಾಲಕಾಲದಿ ಬಿಡದೆ ಎನ್ನ ಪಾಲಿಸಭವನೆ ಪ
ಭುವನವೀರೇಳು ಸೂತ್ರಧಾರ ಭವದರೋಗಕ್ವೈದ್ಯ
ಭಕ್ತಭಯ ಪರಿಹಾರ ಸತ್ಯ ಬುವಿಜಾಮನೋಹರ 1
ಕೋಮಲಾಂಗ ಭಜಕಜನರ ಕಾಮಿತಾರ್ಥ ಕೊಡುವ ಸುರ
ಕಾಮಧೇನು ಕಲ್ಪವೃಕ್ಷ ಸ್ವಾಮಿ ದಯಾಕರ 2
ಸಾರ ಮಾಯಾಮೋಹವಿದೂರ ಕೇಶವ 3
ಪರಕೆ ಪರಮ ಪರಾತ್ಪರ ಮರಣರಹಿತ ಮಾರಮಣ
ಉರಗಶಾಯಿ ಪರಮಪುರುಷ ಶರಣು ಸುಖಕರ 4
ನಿಗಮವೇದ್ಯ ನಿರುಪಮಾತ್ಮ ಅಗಣಿತಗಣಿತಗಮ್ಯಚರಿತ
ಸುಗುಣ ಶಾಂತಾಕಾರ ಮೂರು ಜಗದ ಪಾಲಯಾ 5
ಸಕಲವಿಘ್ನದೂರ ನಿನ್ನ ಭಕುತಿಯಿಂದ ಭಜಿಸಿಬೇಡ್ವೆ
ಮುಕುತಿಸಂಪದ ನೀಡಿ ಸಲಹು ಭಕ್ತವತ್ಸಲ 6
ಕಂದಮಾಡಿದಪರಾಧಗಳ ತಂದೆ ದಯದಿ ಕ್ಷಮಿಸಿ ಬಂದ
ಬಂಧಗಳನು ಪರಿಹರಿಸಯ್ಯ ಸಿಂಧುಮಂದಿರ 7
ನಾನಾಯೋನಿಯೊಳಗೆ ಪುಟ್ಟಿ ಜ್ಞಾನಗೆಟ್ಟು ಬಳಲುವಂಥ
ಹೀನ ಬವಣೆ ತಪ್ಪಿಸಯ್ಯ ದೀನಪಾಲ 8
ನಿರುತ ನಿನ್ನ ಚರಣದೆಡೆಗೆ ಬರುವ ಸುಲಭಮಾರ್ಗ ಆವು
ದ್ವರವ ಪಾಲಿಸೊಲಿದು ಎನಗೆ ಕರುಣಸಾಗರ 9
ದೋಷದಾರಿದ್ರ್ಯಗಳೆಲ್ಲ ನಾಶಗೈದು ಹರಿಯೆ ನಿಮ್ಮ
ದಾಸನೆನಿಸುದ್ಧಾರಮಾಡು ದೋಷನಾಶನ 10
ಮರೆಯಬಿದ್ದ ತರಳನನ್ನು ಕರುಣದೃಷ್ಟಿಯಿಂದ ನೋಡಿ
ಸರ್ವಭಯ ಪರಿಹಾರಮಾಡು ಹರಿಸರ್ವೋತ್ತಮ 11
ನಿನ್ನ ಒಲವು ಬಲವು ಎನಗೆ ಅನ್ಯಬಲವ ಒಲ್ಲೆಸ್ವಾಮಿ
ಮನ್ನಿಸಬೇಕಿನ್ನು ಮಗನ ಸನ್ನುತಾಂಗನೆ 12
ನಂಬಿ ಭಜಿಪ ಬಕ್ತಜನರ ಇಂಬುದಾಯಕ ನೀನು
ಇಂಬುಗೊಟ್ಟು ಸಲಹು ಎನ್ನ ಅಂಬುಜಾಕ್ಷನೆ 13
ಏನುತಪ್ಪು ಇರಲು ನೀನೆ ದಯದಿ ಕ್ಷಮಿಸಿ ಇನ್ನು
ನಾನಾಬೇನೆ ಕಳೆದು ಕಾಯೊ ಜಾನಕೀಶನೆ 14
ಚಾರುವೇದ ಪೊಗಳುವಂಥಪಾರ ನಿನ್ನ ದಿವ್ಯಮೂರ್ತಿ
ತೋರಿಧನ್ಯನೆನಿಸು ಎನ್ನ ನಾರಸಿಂಹನೆ 15
ಭಾರ ನಿನ್ನದಯ್ಯ ಬಂದ ಘೋರ ತಾಪತ್ರಯಂಗಳಿಂದ
ಪಾರುಮಾಡಿ ಕಾಯುವುದು ಕಾರುಣ್ಯ ನಿಧೆ 16
ಪ್ರಾಣಹಾರಿ ಹೋಗಲು ನಿನ್ನ ಧ್ಯಾನವಗಲದಂತೆ ಎನಗೆ
ತ್ರಾಣಪಾಲಿಸಯ್ಯ ಮೊದಲು ಧ್ಯಾನದಾಯಕ 17
ದಾಸನರಿಕೆ ದಯದಿ ಪೂರೈಸಿ ಕಾಯಬೇಕು ದೇವ
ಘಾಸಿಗೈಯದೆ ರಕ್ಷಿಸಯ್ಯ ದಾಸಪ್ರಿಯನೆ 18
ಕೆಟ್ಟಶಕುನರಿಷ್ಟ ಸ್ವಪ್ನ ತಟ್ಟಬೇಕೆ ನಿನ್ನ ಪಾದ
ನಿಷ್ಠೆಯಿಂದ ಭಜಿಪರ್ಗೆ ಸೃಷ್ಟಿಕರ್ತನೆ 19
ನಿತ್ಯ ನಿರ್ಮಲಾತ್ಮ ನಿನ್ನ ನಿತ್ಯಭಕ್ತಿ ಸುಖವನಿತ್ತು
ಸತ್ಯಸಂಧನೆನಿಸು ಎನ್ನ ಸತ್ಯರಾಧಾರ 20
ಮರವೆ ತರಿದು ಹರಿಯೆ ನಿಮ್ಮ ಕರುಣ ನೀಡಿ
ಮರಣ ಭಯವ ಪರಿಹರಿಸಯ್ಯ ಸಿರಿಯವಲ್ಲಭ 21
ಭಾನುಕೋಟಿಪ್ರಕಾಶ ನಿನ್ನ ಧ್ಯಾನಿಸಿ ಮರೆಹೊಕ್ಕೆ
ನಾನಾಬೇನೆ ಗೆಲಿಸಿ ಕಾಯೊ ದಾನವಾಂತಕ 22