ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೊಡುಜಡಜಾಕ್ಷ ನಿಮ್ಮಡಿ ಧ್ಯಾನಮೃತ ಕಡುದಯದೆನ್ನಯ ಜೆಹ್ವೆಗೆ ಸತತ ಪ ದುರುಳ ದಾನವರೊದೆದ ಸುರರನುದ್ಧರಿಸಿದ ಪರಮಪಾವನ ಪಾದಸ್ಮರಣಸಂಜೀವನ 1 ಅತ್ರಿಮುನಿಯ ಕಾಯ್ದ ಸತ್ರಾಜಿತನ ಪೊರೆದ ಸತ್ಯವ್ರತೆಗೆ ವರವಿತ್ತ ಅಮಿತಪುರುಷ 2 ಭಕ್ತರಾಪತ್ತು ಕಳೆದು ಅರ್ಥಿಯಿಂ ಕಾಯ್ವ ಪ ವಿತ್ರ ಶ್ರೀರಾಮನಾಮ ಮುಕ್ತಿ ಸಂಪದಸಿದ್ಧಿ 3
--------------
ರಾಮದಾಸರು
ನೀನೆ ನಿಜಗುರುವಾಗುಎನಗೆ ಮಾಧವ ಪ ಮರವೆಯೆಂಬ ಪರದೆ ಹರಿದು ಅರಿವುಯೆಂಬಾಲಯದೊಳಿರಿಸಿ ದುರಿತಪರ್ವತ ತರಿದು ಪೊರೆಯುವ ಚರಣದಾಸರ ಭಾಗ್ಯನಿಧಿಯೆ 1 ಹೀನಸಂಸಾರೆಂಬುವ ಮಹ ಕಾನನದಿ ಬಳಲಿಸದೆ ಅನುದಿನ ಧ್ಯಾನಮೃತ ಪಾನಗೈಸುವ ಧ್ಯಾನಿಪರ ಮಹಪ್ರಾಣದರಸೇ 2 ಆವಕಾಲದಿ ಬಿಡದೆ ನಿಮಿಷ ಜೀವ ಭಕುತರ ಭಾವದ್ವಾಸಿಸಿ ಜಾವ ಜಾವಕೆ ಬುದ್ಧಿ ಕಲಿಸುವ ದೇವದೇವರ ದಿವ್ಯದೇವರೆ 3 ಸಕಲಕೋಟಿಮಂತ್ರಗಳಿಗೆ ನಿಖಿಲ ನೀನೆ ಆಧಾರನಾಗಿ ಅಖಿಲರೂಪದಿ ಜಗವ ಬೆಳಗುವ ಭಕುತಿದಾಯಕ ಸುಖದ ಶರಧಿಯೆ 4 ಸಾರಿ ಭಜಕರ ಭಾರವಹಿಸಿ ಘೋರಭವಸಾಗರವ ಗೆಲಿಸಿ ಧೀರ ಶ್ರೀಗುರುರಾಮ ಪ್ರಭುವೇ 5
--------------
ರಾಮದಾಸರು