ಧ್ಯಾನದ ತುತೂರಿ ಹಿಡಿಯೊ
ಸಾಗರ ಶಾಯಿಯೆ ಮೂಜಗ ಧಣಿಯೆಂದು
ಜಾಗಟೆ ಡÀಣ್ ಡಣ್ ಬಡಿಯೊ ಪ
ಅನುದಿನ ಮನಮುಟ್ಟು ನೆನೆಯುವ ಭಕ್ತರ
ಮನದೆಣಿಕೆಯನು ನೀಡುವ
ಕನಿಕರದಿಂ ಕಾಪಾಡುವ
ಜನಕಜೆವಲ್ಲಭ ತನ್ನವರನು ಬಿಟ್ಟು
ಕ್ಷಣ ಅಗಲಿರೆನಾ ವನಜನಾಭನೆಂದು 1
ಎಡೆಬಿಡದೊಡತೊಳ ಧೃಢದಿಂ ಭಜಿಪರ
ಕಡುದಯಾದೃಷ್ಟಿಯಿಂ ನೋಡುವ
ಸಡಗರದವರೋಳಾಡುವ
ಮೃಡವಂದಿತ ತನ್ನಡಿಯ ದಾಸರ ಕರಪಿಡಿದು
ಬಿಡದೆ ಕಾಯ್ವ ಸಡಗರದೊಡನೆಂದು 2
ನರಹರಿ ಚರಣವ ಪರಿಪರಿ ಸ್ಮರಿಪರ
ದುರಿತರಾಸಿ ದೂರ ಮಾಡುವ
ಬರುವ ಸಂಕಟ ನಿವಾರಿಸುವ
ಜರಾಮರಣ ದೂರಮಾಡಿ ಪರಮ ಪರತರ
ಸಿರಿಸೌಭಾಗ್ಯ ಕರುಣಿಪ ಸ್ಥಿರವೆಂದು 3
ಚಿತ್ತಜತಾಪನ ಸಚ್ಚರಿತವನು
ನಿತ್ಯ ಬಿಡದೆ ಕೊಂಡಾಡುವರ
ಭಕ್ತ ಜನರ ನೋಡಿ ಬಾಗುವರ
ಮೃತ್ಯುಬಾಧೆ ಗೆಲಿ ಸತ್ಯಾನಂದವ
ನಿತ್ತು ಪೊರೆವ ಹರಿ ಸತ್ಯ ಸತ್ಯವೆಂದು 4
ದೀನರಾಪ್ತನಾದ ಧ್ಯಾನಮೂರುತಿ ತನ್ನ
ಧ್ಯಾನಿಸುವರ ಬೆಂಬಲಿಸುವ
ಮಾನದಿಂದ ಭವಗೆಲಿಸುವ
ಏನು ಬೇಡಲಾನಂದ ದೀಯ್ವನು
ಪ್ರಾಣೇಶ ಶ್ರೀರಾಮ ದೇವ ದೇವನೆಂದು 5