ದಿನವೇ ಸುದಿನವು ಧ್ಯಾನಮಾಳ್ಪ ಜನವೇ ಸುಜನವು ಪ
ಘನತರ ಹರಷದಿ ಮನದಣವಂದದಿ
ಮನಸಿಜನಯ್ಯನ ಮಹಿಮೆಯ ಪಾಡುತ ಅ.ಪ
ಯುಕ್ತದಿ ಕೂಡಿ ಅಯುಕ್ತ ವಿರಕ್ತಿಯ ಮಾಡಿ
ಭುಕ್ತಿಗಾಗಲಿ ಭವಮುಕ್ತಿಗಾಲಿ ಹರಿ
ಭಕ್ತರ ನೋಡಗೂಡಿ ರಕ್ತಿಲಿ ಪಾಡುವ 1
ತಾಳ ತಂಬೂರಿಯ ತಪ್ಪದೆ ತಂದು ಮೈಳೈಸಿಶ್ರುತಿಯ
ಶ್ರೀಲಾಲಮನ ಕಥೆ ಪೇಳುವ ಕೇಳುವ 2
ಅರ್ಥಾಪೇಕ್ಷೆಯಲಿ ಕಾಲಗಳನು ವ್ಯರ್ಥಮಾಡದಲೆ
ಪಾರ್ಥಸಾರಥಿಯನ್ನು ಪ್ರಾರ್ಥನೆ ಮಾಡುವ 3
ಕಾಮಕ್ರೋಧಗಳ ಕಳೆವ ರಘು ರಾಮ ನಾಮಗಳ
ಪ್ರೇಮದಿಂ ಪಾಡುತ್ತ ರೋಮಾಂಚದೊಡಗೂಡಿ
ಭವ ತಾಮಸ ಕಳೆಯುವ 4
ಹರಿವಾಸರವನು ಸಾಧಿಸಿ ಮುರಹರ ನಾಮಗಳು
ಹರಿದಾಸರೊಡಗೂಡಿ ಹರಷದಿಂದೆಚ್ಚತ್ತು
ವರದ ವಿಠಲ ನರಹರಿಯೆಂದು ಪಾಡುವ 5