ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲಿಗ್ಹೋಗಿ ತಡಮಾಡಿದ್ಯೋ ಫುಲ್ಲಲೋಚನ ಕೃಷ್ಣ ನೀ ಎಲ್ಲಡಗಿದ್ಯೊ ಧ್ರುವ ಬಲ್ಲವರಿಗೆ ಬಲ್ಲತನದೋರ ಹೋಗಿದ್ಯೊ ಅಲ್ಲಿ ಅವರ ಸಹಕಾರ ನೀನಾದ್ಯೊ ಸುಲ್ಲಭವಾಗಿ ಜ್ಞಾನಕೆ ನೀ ಸಿಲುಕಿದ್ಯೋ ಒಲ್ಲದ್ಹಾಂಗ್ಹೋಗಿ ಎಲ್ಲರಿಗಾಗಿದ್ಯೊ 1 ಙÁ್ಞನಿಗಳಿಗೆ ಙÁ್ಞನಸಮುದ್ರ ನಾಗಿದ್ಯೊ ಧ್ಯಾನಮಾಡುವರ ಧ್ಯಾನವೆ ಅಗಿದ್ಯೊ ಮುನಿಜನರೊಡನೆ ಮಾನಸ ಹಂಸನಾಗಿದ್ಯೊ ಖೂನದೋರಲು ಹೋಗಿ ನೀನೆ ಆಗಿದ್ಯೊ 2 ಧೃಢಭಕ್ತರೊಡನೆ ಭಿಡಿಯೊಳಗಾಗಿದ್ಯೊ ಕಡಿಗಾಗದ್ಹಾಂಗ ಕೈಯೊಳಗಾಗಿದ್ಯೊ ಎಡಬಲಕವರೆಂದು ಬಿಡದ್ಹಾಂಗಾಗಿದ್ಯೊ ಒಡಲ ಹೊಕ್ಕವರ ಒಡಿಯನಾಗಿದ್ಯೊ 3 ಪ್ರೇಮ ಉಳ್ಳವರ ಪ್ರೀತಿಯೊಳಗಾಗಿದ್ಯೊ ಸ್ವಾಮಿತನದಲಿ ಸಮೀಪನಾಗಿದ್ಯೊ ಕಾಮ ಪೂರಿಸಲಿಕೆ ನೇಮವ ಪಿಡಿದ್ಯೊ ಮಾಮನೋಹರ ನೀ ಸುಗಮವಾಗಿದ್ಯೊ 4 ಇಂದು ನೆನಪಾಯಿತೆಂದು ಓಡಿ ನೀ ಬಂದ್ಯೊ ಚಂಚವಾಗೆನ್ನೊಳಗಾದ್ಯೊ ನೀ ಬಂದ್ಯೊ ಕಂದಮಹಿಪತಿಗನುಭವದೋರ ನೀ ಬಂದ್ಯೊ ತಂದೆ ಸದ್ಗುರು ಅನಂದವ ತಂದ್ಯೊ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪ್ರಾಣದೇವನೆ ನಿನ್ನ ಧ್ಯಾನಿಸದೆ ಮನದಿ ಬಲು ಹೀನನಾದೆನೊ ಲೋಕದಿ ಪ ಪಾದ ಧ್ಯಾನಮಾಡುವ ಮುಖ್ಯ- ಪ್ರಾಣನೀನೆಂದು ಮನಸಾರ ಪೂಜಿಸದೆ ಶ್ರೀ ಅ.ಪ ಶರಧಿ ಬಂಧಿಸಿ ದಶಶಿರನಳಿದ ಪಾದ ಸ್ಮರಣೆ ಮಾಡುತಲಿ ನಿತ್ಯ ಧರಣಿಸುತೆಯಳ ತಂದು ಪರಮ ಸಂಭ್ರಮದಿಂದ ಮೆರೆವದೇವನ ಸ್ಮರಿಸುತ ನರರೂಪದಿಂದ ದಶರಥನ ಪುರದಲಿ ನಿಂತ ಪರಮಾತ್ಮನಿಗೆ ನಮಿಸುತ ಸುರರು ಸ್ತುತಿಸಲು ಪರಮಹರುಷದಿಂದಾಲಿಸುತ ಹರಿಯ ಮೆಚ್ಚಿಪ ನಮ್ಮ ಗುರುಪವಮಾನ ಶ್ರೀ 1 ಅಂದು ಆ ಬಕನ ಭಯದಿಂದ ಸಜ್ಜನರೆಲ್ಲ ಕುಂದಿರಲು ಭಯವ ಹರಿಸಿ ಅಂಧಕನ ಸುತನ ಬಂಧಿಸುತ ರಣದೊಳಗೆ ಯದು- ನಂದನಗೆ ಪ್ರೀತಿ ಪಡಿಸಿ ಕೊಂದು ಬಿಸುಡಲು ಜರಾಸಂಧನನು ವಸುದೇವ ಕಂದ ನೋಡುತಲಿ ಸುಖಿಸಿ ಇಂದಿರಾರಮಣ ಮುಕುಂದನನು ಪೂಜಿಸುವ ಸುಂದರ ಭೀಮ ನಿಸ್ಸೀಮನಹುದೆಂದು ಶ್ರೀ2 ಪತಿತ ಸಂಕರದಿಂದ ಮತವೆಲ್ಲ ಕೆಡಲು ಶ್ರೀ- ಪತಿಯ ಧ್ಯಾನವು ಮಾಡುತ ಯತಿ ಶಿರೋಮಣಿಯಾಗಿ ಶ್ರುತಿ ಸ್ಮøತಿಗಳಣಿ ಮಾಡಿ ಹಿತವ ಜನರಿಗೆ ತೋರುತ ಎಸೆವ ಘನಗಿರಿಯಲ್ಲಿ ಅಸದಳ ಹನುಮರೆಂ- ದೆಸೆದು ಮಿಗೆ ಶೋಭಿಸುತಲಿ ವಾರಿ ದಡದಲಿ ಕಮಲನಾಭ ವಿಠ್ಠಲನ ಸ್ಮರಿಸಿ ಧೀರ ಹನುಮಂತನಪಾರ ಮಹಿಮನೆಂದು ವನಗಿರಿಯ ಗುಹೆಗಳಲಿ ಹನುಮಂತನೆಂದೆನುತ ಎಣಿಸಲಳವಲ್ಲವೋ ಘನಪರಾಕ್ರಮಿ ಮುಖ್ಯ 3
--------------
ನಿಡಗುರುಕಿ ಜೀವೂಬಾಯಿ
ಬೇಡ ಬೇಡ ಹೋಗೆಂದು ಕಾಡದಿರು ಕೃಪೆಯೊಂದ ಬೇಡದಿರಲಾರೆ ಮಾಂಗಿರಿಯರಂಗ ಪ ಬೇಡುವನ ಕೈ ಕೀಳು ನೀಡುವನ ಕೈ ಮೇಲು ಬೇಡಿದಲ್ಲದೆ ಕೃಪೆಯ ಮಾಡನೈರಂಗಾ ಅ.ಪ ಗಾನಕೆ ನಲಿಯುವೆಯೋ ಧ್ಯಾನಕೆ ಒಲಿಯುವೆಯೋ ಜ್ಞಾನಕೆ ಸಿಗುವೆಯೋ ನಾನರಿಯೆನು ಗಾನದರಿವೆನಗಿಲ್ಲ ಧ್ಯಾನಮಾಡುವನಲ್ಲ ಜ್ಞಾನಾನುಭವವಿಲ್ಲ ಆಧಾರವಿಲ್ಲ 1 ನೀನೆನ್ನ ಕಡೆಗಣಿಸಿ ಹೀನ ಹೋಗೆಂದೆನಲು ನಾನಳುವೆನನವರತ ಶ್ವಾನದಂತೆ ಸೂನು ಬಾ ಬಾರೆಂದು ಸಾನುರಾಗದಿ ರಮಾದೇವಿ ಸಂತೈಪಳು 2 ಎನ್ನಮ್ಮ ಕೃಪೆಯಿಂದ ನಿನ್ನ ಕಾಲ್ವಿಡಿಯೆಂದು ಎನ್ನ ಕಳುಹುತ ನಿನಗೆ ಎನ್ನ ತೋರ್ದು ಎನ್ನನತಿಕೃಪೆಯಿಂದ ಮನ್ನಿಸೆನ್ನುವಳಾಗ ನಿನ್ನ ಕೃಪೆ ಯೆನಗುಂಟು ಮಾಂಗಿರೀಶಾ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸೃಷ್ಟೀಶ ಕೃಪೆದೋರಿದ ಬಾಲನಮಾನನಷ್ಟವ ಜಾರಿಸಿದ ಪ ನ್ಯಾಯಕೆ ಪೋಪಕಾಲದಿ ಪುಟ್ಟಯಾಖ್ಯನ ಸ್ವಪ್ನದಲಿ ತಾಂ- ಬಿಟ್ಟು ಬನ್ನಿರಿಯೆನುತಪೇಳ್ದಾ ಅ.ಪ ಎಲ್ಲಾರ ನಿನ್ನೊಳಗೆ ಸೇರಿಸಿ ಮುಂದೆ- ಉಲ್ಲಾಸಕೊಡುವೆ ನಿನಗೆ ಕಲ್ಲಿನಂದದಿ ಮೌನಧರಿಸುತ- ಖುಲ್ಲಮನುಜರ ಸಂಗವರ್ಜಿಸಿ ನಿಲ್ಲಿಸು ಮನವನೆನುತಲಿ 1 ಗುರುತು ಕಾಣುವದೆಂದಿಗೆ ಪರಮ ತಿರುಮಂತ್ರಾರ್ಥ ಅಷ್ಟಾ- ಕ್ಷರಿಯ ಜಪತಪಧ್ಯಾನಮಾಡುವ ದೊರಯದೆಂದಿಗು ಕೀರ್ತಿ ಎನುತಲಿ 2 ಮತಧರ್ಮಜ್ಞಾನಿಗಳು ಪೇಳಿರುವಂತ ಮತಶಾಸ್ತ್ರವೀಕ್ಷಿಸದೆ ಸತತದೂಷಣೆಗೈದು ಸುಜನರ - ಕ್ಷಿತಿಯ ಭೋಗವನಂಬಿ ಗರ್ವದಿ ಹಿತವತಪ್ಪಿಸಿ ಕರವಪಿಡಿಯುತ 3 ಸ್ಥಿರವಲ್ಲಕಾಯವೆಂದು ಸಾತ್ವಿಕಶೃತಿಯೊ- ಳಿರುವ ಸತ್ಯ ನೋಡೆಂದು ನಿರುತಬೋಧಿಸಿ ಜನನಮರಣವ ತರಿದು ಎನ್ನನೆ ಯಜಿಸು ಯೆನುತಲಿ- ಹರಸಿ ಮೋಕ್ಷವನಿತ್ತ ಆರ್ಯನು 4 ಬಿಟ್ಟು ಸತಿಸುತರೆಲ್ಲರ ಎನ್ನೊಳುಮನವ ನಿಟ್ಟುನಂಬಿದಭಕ್ತರ ಬಿಟ್ಟುಕೊಡೆನಾನೆಂದು ಹೃದಯಾ- ಧಿಷ್ಟಿತನು ತಾನಾಗಿ ಅಭಯವ ಇಷ್ಟಶ್ರೀಗುರುರಂಗನೀಕ್ಷಿಸಿ 5
--------------
ರಂಗದಾಸರು