ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರತಿಯ ಬೆಳಗಬನ್ನಿರೆ ಆರತಿಯ ಬೆಳಗಬನ್ನಿರೆ ಪಾರ್ವತಿದೇವಿಯರಿಗೆ ಕೀರುತಿ ಕೊಂಡಾಡುತಲಿ ಪರ್ವತರಾಜನ ಮಗಳಿಗೆ ಆರತಿಯ ಬೆಳಗಬನ್ನಿರೆ ಪ ವಾಲೆ ಕಠಾಣಿ ಚಿಂತಾಕು ಮ್ಯಾಲೆ ಸರಿಗೆ ಸರ ಮುತ್ತುಗಳು ಕಾಲಗೆಜ್ಜೆಸರಪಳಿನಿಟ್ಟ ಫಾಲಾಕ್ಷನ ಮಡದಿಗೆ 1 ರಂಗುಮಾಣಿಕ್ಯದ ಹೆರಳು ಬಂಗಾರದಾಭರಣವಿಟ್ಟು ದುಂಡುಮಲ್ಲಿಗೆ ಮುಡಿದು ಕುಳಿತ ಮಂಗಳಾದೇವಿಯರಿಗೆ 2 ದುಂಡುಮುತ್ತಿನ ಮುಕುರ್ಯವು ಚಂದ್ರ ಬಾಳ್ಯಬುಗುಡಿನಿಟ್ಟು ದುಂಡು ಹರಡಿ ಕಂಕಣಕಮಲ ದ್ವಾರ್ಯನಿಟ್ಟ ವಾರಿಜಾಕ್ಷಿಗೆ 3 ಜಾತಿಮಾಣಿಕ್ಯದ ವಂಕಿ ನೂತನಾದ ನಾಗಮುರಿಗೆ ಪ್ರೀತಿಯಲಿ ಪೀತಾಂಬ್ರನುಟ್ಟು ಜ್ಯೋತಿಯಂತೆ ಹೊಳೆವೊ ಗೌರಿಗೆ 4 ನೀಲವರ್ಣ ಭೀಮೇಶಕೃಷ್ಣ ಧ್ಯಾನಮಾಡುತ ಕೃಷ್ಣನ ನೀಲಕಂಠನ ಸಹಿತ ಕುಳಿತ್ವಿಶಾಲನೇತ್ರೆ ಪಾರ್ವತಿಗೆ5
--------------
ಹರಪನಹಳ್ಳಿಭೀಮವ್ವ
ಸತ್ಯಧರ್ಮ ಸದ್ಗುರುವರ ರಕ್ಷಿಸು ಪ ಭೃತ್ಯ ನೀನಾಗೆಂದು ಕೃತ್ಯ ವಿಪರ್ಯಯ ವೆತ್ತಣಿಸದೆ ಕೃತಕೃತ್ಯನ ಮಾಡಿಂದು ಅ.ಪ ಸತ್ಯವರರ ವರ ಕುವರನೆ ನೀನತ್ಯುತ್ತಮ ಸುಖ ಚಿನ್ನ ಯತ್ಯಾಶ್ರಮ ಸದ್ಧರ್ಮಾಚರಣದಿ ನಿತ್ಯಾರ್ಜಿತ ರಾಮ ಭೃತ್ಯಜನಕೆ ಸದ್ಬುದ್ಧಿ ಬೋಧಿಸಿ ಕೃತಕೃತ್ಯರ ಮಾಡುತಲಿ ಸುನಾಮ ಯಥಾರ್ಥಪಡಿಸಿ ಕ್ಷಿತಿಗುತ್ತಮನೆಸಿದ 1 ಭದ್ರಾತೀರನೆ ಇತ್ತು ಸುಭದ್ರಗಳ್ ನಿದ್ರಾರಹಿತರಿಗೆ ಆದ್ರಾಂತಃಕರುಣನೆ ಸೌಹಾರ್ದದಿ ಭದ್ರಾರಮಣನಲಿ ಛಿದ್ರರಹಿತ ಶಿಲೆ ಮಧ್ಯದಿ ಪಡೆದು ಸುಭದ್ರಾಪತಿ ಸಖ ಮುದ್ರಾಧರನೆ 2 ಶ್ರೀ ನರಹರಿ ಪದ ನೀನನುದಿನದಲಿ ಧ್ಯಾನಮಾಡುತ ಬಾಹ್ಯ ಜ್ಞಾನವಿಲ್ಲದೆ ಅನುಮಾನ ವಿಪರ್ಯಯ ಹೀನಗೈಸಿ ಸಾಕ್ಷಿ ಮಾನದಿಂದ ಕೊಟ್ಯಾರ್ಭುದ ರವಿಪ್ರಭೆ ಕಾಣುತ ಪ್ರತಿಮುಖವೋಲ್ ಏನು ಇದಕೆ ಅನುಮಾನವಿಲ್ಲ ಹಂ ಮನಿಯವನೆನ್ನುವೆ ನೀ ಸರಿಲಿಂಗರೂಪಧರ3
--------------
ಪ್ರದ್ಯುಮ್ನತೀರ್ಥರು
ಸುಮ್ಮನಿರಬಾರದೆ ಮನವೆ ನೀನು ಸುಮ್ಮನಿರಬಾರದೆ ಹಮ್ಮುಅಹಂಕಾರ ಹೆಮ್ಮೆಗಳೆದು ಪನ್ನಗಾದ್ರಿಯ ಧ್ಯಾನಮಾಡುತ್ತ ಪ ಚಿಂತೆಯನು ತೊರೆದು ಮನವೆ ಲಕ್ಷೀಕಾಂತನೊಳು ಬೆರೆದು ಅಂತರಂಗದಿ ಕಂತುಜನಕನ ಸಂತತವಿಟ್ಟು ಪಂತವನು ಬಿಟ್ಟು 1 ಆಸೆಯನು ತೊರೆದು ಮನವೆ ನೀ ಶ್ರೀಶನೋಳು ಬೆರೆದು ಘಾಸಿಯಾಗದೆ ವಾಸುದೇವನ ದಾಸನಾಗಿ ಉಲ್ಲಾಸದಿಂದಲೆ 2 ಯಾರು ಬೈದರೇನು ಈ ದೇಹ ಇನ್ಯಾರು ಕೊಯ್ದರೇನು ಘೋರಮಾಯೆ ದೂರಮಾಡಿ ನೀ ವಾರಿಜಾಕ್ಷನ ಪಾದವನು ಸೇರಿ 3 ಎಲ್ಲರಲ್ಲಿ ವಾಸುದೇವನಿಲ್ಲದಿಲ್ಲೆನುತ ಹುಲ್ಲು ಹುಳುವಿನೊಳು ಸೊಲ್ಲು ಪಾಡುತ್ತ 4 ಸೃಷ್ಟಿಯೊಳಗಧಿಕ ಮೂಡಲಗಿರಿ ಬೆಟ್ಟದೊಳಗಿರುವ ದಿಟ್ಟವೆಂಕಟನ ಮುಟ್ಟಿ ಭಜಿಸಿ ನೀ ಮಾಡಿದಷ್ಟು ಪಾಪವ ನಷ್ಟ ಮಾಡುತ್ತ 5
--------------
ಯದುಗಿರಿಯಮ್ಮ