ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾನು ನಿನ್ನ ಏನು ಅಂದೆನೊ ರಂಗರಾಯಾ ನಾನು ನಿನ್ನ ಏನು ಅಂದೆ ನಾಲ್ಕು ದಿಕ್ಕಿನೊಳಗೆ ನಿಮ್ಮ ಧ್ಯಾನಪಥವು ದೊಡ್ಡದೆಂದು ದೃಢವು ಮಾಡಿ ಹೇಳ್ದೆನಲ್ಲದೆ ಪ ಕುಂಡಲೀಶ ಶಯನನಾದ ಪುಂಡಲೀಕವರದ ಬ್ರ ಹ್ಮಾಂಡವೆಲ್ಲ ನಿಮ್ಮ ಉದರ ಅಂಡದಲ್ಲಿ ಇರುವುದೆಂದೆ ಮಂಡಿಗೊರಳನು ಇದೆವೆಂದನೆ ಮತ್ತೆ ಮತ್ತೆ ಕುಂಡಗೊಳರ [ಪುಂಡಗೊಲ್ಲರ] ಕುಲದೈವವೆಂದೆನೆ ಹಿಂಡುಲೋಕಗಳಿಗೆಲ್ಲ ಹಿರಿಯ ನೀನೆಯಂದೆನಲ್ಲದೆ 1 ಸಕಲಯೋಗಿ ಜನರ ಹೃದಯ ನಿಖರವಾಗಿ ನಿಂತು ಎಲ್ಲ ಭಕುತರನ್ನು ರಕ್ಷಿಸುವ ಲಕುಮಿರಮಣಾನಂದೆ ನಲ್ಲದೆ ಕಕುಲಾತಿಯ ಮಾಡೆನೆಂದೆನೆ ಅಕಳಂಕ ಮಹಿಮನಾದ ಆದಿ ಮೂರುತಿ ಎಂದೆನಲ್ಲದೆ 2 ಬೊಟ್ಟಿನಿಂದ ಧರೆಯನೆತ್ತಿ ಚೇಷ್ಟೆಜನರ ಉರಳಿಸಿದ ಕೃಷ್ಣ ಮೂರುತಿನೀನೆಯೆಂದು ಇಷ್ಟದಿಂದ ಪಾಡುವೆನಲ್ಲದೆ ಸೃಷ್ಟಿನೀಟಗೊಲ್ಲನೆಂದೆನೆ ನಿನ್ನ ಮಗನ ಸುಟ್ಟು ಅವನ ಮಿತ್ರನೆಂದೆನೆ ಸೃಷ್ಟಿಗಧಿಕವಾದ `ಹೊನ್ನವಿಠ್ಠಲ' ರಾಯನಂದೆನಲ್ಲದೆ 3
--------------
ಹೆನ್ನೆರಂಗದಾಸರು