ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನೇನು ಬಲ್ಲವನು ನಾನಲ್ಲ ಹರಿಯೆ ನಿನ್ನ ಧ್ಯಾನಧಿಕೆಂಬುದೊಂದೆ ನಾ ಬಲ್ಲೆ ಪ ನಿನ್ನ ಧ್ಯಾನವೆ ಮರೆವ ತರಿದ್ಹಾಕುವುದೆಂಬೆ ನಿನ್ನ ಧ್ಯಾನವೆ ಅರಿವ ಸ್ಥಿರ ಮಾಳ್ಪುದೆಂಬೆ ಶರಧಿ ಹೀರುವುದೆಂಬೆ ಸಿರಿ ನೀಡ್ವುದೆಂಬೆ 1 ನಿನ್ನ ಧ್ಯಾನವೆ ದು:ಖದೂರ ಮಾಡುವುದೆಂಬೆ ನಿನ್ನ ಧ್ಯಾನವೆ ಸುಖದ ವಾರಿಧಿಯೆಂಬೆ ನಿನ್ನ ಧ್ಯಾನವೆ ಮುಖ್ಯ ಚಾರುವೇದಗಳೆಂಬೆ ನಿನ್ನ ಧ್ಯಾನವೆ ಜ್ಞಾನಮೂಲಸಾರೆಂಬೆ 2 ನಿನ್ನ ಧ್ಯಾನವೆ ತತ್ವರೂಪವಾಗಿಹ್ಯದೆಂಬೆ ನಿನ್ನ ಧ್ಯಾನವೆ ಮುಕ್ತಿಮೂಲಾಧಾರೆಂಬೆ ನಿನ್ನ ಧ್ಯಾನವೆ ಭಕ್ತ ಜನಪ್ರಾಣಪದಕೆಂಬೆ ಎನ್ನಯ್ಯ ಶ್ರೀರಾಮ ನಿನ್ನಿಂದೆ ನಾನೆಂಬೆ 3
--------------
ರಾಮದಾಸರು