ಗರುಡನೇರಿ ಬಂದ ಸಿರಿರಮಣನು ತಾನು ಪ
ಗರುಡನೇರಿ ಬಂದ ಸಿರಿರಮಣನು ತನ್ನ
ಶರಣ ಕರುಣದಿ ಪೊರೆಯಲೋಸುಗ ಭರದಿ ಅ.ಪ.
ಕರಿರಾಜನು ಅಂದು ಕ್ರೂರ ನಕ್ರಗೆ ಸಿಲ್ಕಿ
ತೆರವಿಲ್ಲದೆ ಕೂಗುತ ಚೀರುತಿರಲು
ಸುರರು ಮೊದಲಾಗಿ ಸತಿಸುತ ಬಾಂಧವರು
ಅರಿತು ಅರಿಯದಂತೆ ತ್ರಾನದಿಂದ್ದಾಗ 1
ಉತ್ತಾನಪಾದನು ಚಿತ್ತದಿ ಮರುಗದೆ
ಮತ್ತೆ ಬÁಲನ ಕರೆದು ಮನ್ನಿಸದೆ
ಅತ್ತ ಸಾರೆಂದು ಸುರುಚಿ ನೂಕಿದ ಮೇಲೆ
ಚಿತ್ತಜನಯ್ಯನ ಸ್ಮರಿಸಿದ ಮಾತ್ರದಿ 2
ನೀಚ ರುಕ್ಮನು ತನ್ನನುಜಾತೆಯನಂದು
ಮಾಚಿಸಿ ಶಿಶುಪಾಲಗೀವೆನೆಂದು
ಯೋಚಿಸಿ ಮನದೊಳು ಹರಿಯ ದೂರುತಲಿರೆ
ತಾ ಚಿಂತೆ ತಾಳಿದ ರುಕ್ಮಿಣಿಯ ಕೈಪಿಡಿಯಲು 3
ಅಕ್ಷಯ ಪಾತ್ರೆಯ ತೊಳೆದು ಪಾಂಚಾಲೆ
ಪಕ್ಷಿದೇರನ ಧ್ಯಾನದೊಳು ಕುಳಿತಿರಲು
ಭಿಕ್ಷೆ ಬೇಡುತ ಬಂದು ದೂರ್ವಾಸ ಮುನಿಪನು
ಶಿಕ್ಷಿಸೆನೆಂದಾಗ ಸತಿಗೆ ಮುಂದೋರದಂದು 4
ಗರುವ ಪಾರ್ಥನು ಅಂದು ಗಂಗಾ ಶಾಪದಲಿ ಅಸುವ
ತೊರೆದು ರಣದೊಳು ಬಿದ್ದಿರಲು
ಅರಿತು ಮನದೊಳು ಅನಿಲಜನೊಡಗೂಡಿ
ಸಿರಿ ರಂಗೇಶವಿಠಲನು 5