ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೂರಮಾಡು ದೂರಮಾಡು ದುರ್ಜನ ನೆರೆಯ ಸಾರಸಾಕ್ಷನೆ ಬೇಗ ದುಷ್ಟಸಂಗತಿಯ ಪ ಸೇಂದಿ ಸೆರೆ ಕುಡಿದು ಮನಬಂದಂತೆ ಕುಣದಾಡಿ ನಿಂದಿಸಿ ಕಂಡವರಿಂ ತಿಂದು ಲತ್ತೆಯನು ಮಂದಿಯೋಳ್ಮುಖದೋರ್ವ ಹಂದಿಮನುಜರ ದರ್ಶ ನೆಂದೆಂದು ಬೇಡೆನಗೆ ಮಂದರಾದ್ರಿನಿಲಯ 1 ನೂತನದ ಮಾತಾಡಿ ಖ್ಯಾತಿಯಿಂ ತೋರ್ಪಡಿಸಿ ಮಾತುಮಾತಿಗೆ ವಂಚಿಸಾತುರಕೆ ಪರರ ಘಾತಗೈಯುವ ಮಹಪಾತಕರ ಸಂಗ ಮಮ ದಾತ ಜಗನ್ನಾಥ 2 ಧ್ಯಾನದಾಸರ ಕಂಡು ಜ್ಞಾನವಿಲ್ಲದೆ ತುಸು ಹೀನಮಾತುಗಳಾಡಿ ಏನುಕಾಣದಲೆ ಶ್ವಾನನಂದದಿ ಚರಿಪ ಮಾನಹೀನರ ನೆರಳು ಏನಿರಲುಬೇಡ ಮಮಪ್ರಾಣ ಶ್ರೀರಾಮ 3
--------------
ರಾಮದಾಸರು
ಭಜಿಸುವೆ ನಾ ಯಶೋದೆ ಬಾಲನ ಪ ವಶಮಾಡಿಕೊಂಡು ರಾಧೆ ಕುಸುಮನಾಭ ಅಸಮಲೀಲನ ಎಸೆವ ಮೊಗದೋಳ್ಮೊಗವಿಟ್ಟು ಅಸಮಸುಖವ ಪಡೆದಳೆಂದು 1 ಭಾವಜನಯ್ಯ ಭಕುತೋದ್ಧಾರ ದೇವ ದಿವ್ಯಮಹಿಮನ ಗೋವಳರೆಲ್ಲ ಒಲಿಸಿ ಬಿಡದೆ ಗೋವುಕಾಯಿಸಿಕೊಂಡರೆಂದು 2 ದೀನನಾಥ ಕುಜನ ಕುಠಾರ ಗಾನಲೋಲ ವೇಣುಗೋಪಾಲ ಪ್ರಾಣೇಶ ಶ್ರೀರಾಮ ತನ್ನ ಧ್ಯಾನದಾಸರರಸನೆಂದು 3
--------------
ರಾಮದಾಸರು