ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾರೋ ಮನೆಗೆ ಗೋವಿಂದ ನಿನ್ನಂಘ್ರಿ ಕಮಲವತೋರೋ ಎನಗೆ ಮುಕುಂದ ನಲಿದಾಡು ಮನದಲಿಮಾರಪಿತ ಆನಂದನಂದನ್ನ ಕಂದ ಪ ಭವ ಘೋರ ನಾಶನವಾರಿಜಾಸನ ವಂದ್ಯ ನೀರಜಸಾರ ಸದ್ಗುಣ ಹೇ ರÀಮಾಪತೆ ಅ.ಪ. ನೋಡೋ ದಯದಿಂದೆನ್ನ-ಕರಪದುಮ ಶಿರದಲಿನೀಡೋ ಭಕ್ತಪ್ರಸನ್ನ-ನಲಿದಾಡೊ ಮನದಲಿಬೇಡಿಕೊಂಬೆನೊ ನಿನ್ನ-ಆನಂದ ಘನ್ನಮಾಡದಿರು ಅನುಮಾನವನು ಕೊಂ -ಡಾಡುವೆನು ತವ ಪಾದಮಹಿಮೆಗಳನುಜೋಡಿಸುವೆ ಕರಗಳನು ಚರಣಕೆಕೂಡಿಸೊ ತವ ದಾಸಜನರೊಳು 1 ಹೇಸಿ ವಿಷಯಗಳಲ್ಲಿ-ತೊಳಲ್ಯಾಡಿ ನಾ ಬಲುಕ್ಲೇಶ ಪಡುವುದು ಬಲ್ಲಿ-ಘನಯುವತಿಯರ ಸುಖಲೇಸು ಎಂಬುದನ್ನು ಕೊಲ್ಲಿ-ಆಸೆ ಬಿಡಿಸಿಲ್ಲಿಏಸು ಜನುಮದ ದೋಷದಿಂದಲಿಈಸುವೆನು ಇದರೊಳಗೆ-ಇಂದಿಗೆಮೋಸವಾಯಿತು ಆದುದಾಗಲಿಶ್ರೀಶ ನೀ ಕೈಪಿಡಿದು ರಕ್ಷಿಸು 2 ನೀನೆ ಗತಿಯೆನಗಿಂದು ಉದ್ಧರಿಸೊ ಬ್ಯಾಗನೆದೀನ ಜನರಿಗೆ ಬಂಧು-ನಾ ನಿನ್ನ ಸೇವಕಶ್ರೀನಿವಾಸ ಎಂದೆಂದು-ಕಾರುಣ್ಯ ಸಿಂಧುಪ್ರಾಣಪತಿ ಹೃದಯಾಬ್ಜಮಂಟಪ-ಸ್ಥಾನದೊಳಗಭಿವ್ಯಾಪ್ತ ಚಿನುಮಯಧ್ಯಾನಗೋಚರನಾಗಿ ಕಣ್ಣಿಗೆಕಾಣಿಸುವೆ ಶ್ರೀರಂಗವಿಠಲ 3
--------------
ಶ್ರೀಪಾದರಾಜರು
ಮುಕುಂದ ಹರಿ ವಿಠಲ | ಸಾಕ ಬೇಕಿವನಾ ಪ ಅಕಳಂಕ ಚರಿತ ಹರಿ | ವಿಖನ ಸಾಂಡೊಡೆಯ ಅ.ಪ. ಮೋದಮುನಿ ಸನ್ಮಾರ್ಗ | ಬೋದೆಯುಳ್ಳವನಿವನುವಾದಿರಾಜರ ಕರುಣ | ಪಾತ್ರನಿಹ ನೀತಾಸಾಧು ಸನ್ಮಾರ್ಗದಲಿ | ಆದರಣೆಯುಳ್ಳವನುಕಾರುಕೊ ಬಿಡದಿವನ | ಬಾದರಾಯಣನೇ 1 ಜ್ಞಾನಿಗಳ ವಂಶದಲಿ | ಜನುಮಪೊತ್ತಿಹನೀತಜ್ಞಾನಾನು ಸಂಧಾನ | ಪಾಲಿಸೀ ಇವಗೇಮೌನಿಗಳ ಸಹವಾಸ | ಸಾನುಕೂಲಿಸಿ ಹರಿಯೆಧ್ಯಾನಗೋಚರನಾಗೊ | ವೇಣುಗೋಪಾಲ 2 ಪಾದ | ಸದ್ಭಜಕ ನೆನಿಸೋಅಧ್ವೈತ ಪ್ರಕ್ರಿಯವ | ಪ್ರಧ್ವಂಸಗೈವಂಥಶುದ್ಧ ಮತಿಯನೆ ಇತ್ತು | ಉದ್ದರಿಸೊ ಇವನಾ 3 ಅಚ್ಯುತಾನಂತ ಹರಿ | ಉಚ್ಚರೊಳು ಉಚ್ಚನಿಹಉಚ್ಚ ನೀಚಗಳೆಂದು | ಸರ್ವ ಜೀವರೊಳುಸ್ವಚ್ಛ ತರತಮ ಬೇಧ | ಪಂಚಕವ ತಿಳಿಸಿವಗೆಸಚ್ಚಿದಾನಂದಾತ್ಮ | ಮಚ್ಛಾದಿ ವಪುಷಾ 4 ಭಾವುಕರ ಪರಿಪಾಲ | ದೇವರಾತನಿಗೊಲಿದೆಜೀವರಂತರ್ಯಾಮಿ | ವಿವಿಧ ರೂಪಾತ್ಮಾನೀವೊಲಿದು ಇವನೀಗೆ | ಸರ್ವದಾ ಪೊರೆಯಂದುದೇವ ಭಿನ್ನವಿಪೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಶ್ರೀವಾಯು ದೇವರು ಅನುದಿನ ಸ್ತುತಿಸುವೆ ದೀನಮನುಜನ ಜನುಮಗಳಳಿಸೋ ಪ ವಾಣಿವಂದಿತ ಪಾದಪದ್ಮನೆ ಕಾಯೋ ಈಗಲೇ ಅ.ಪ. ಜಾನಕೀರಮಣನ ಪ್ರಿಯ ದಾನವಾಂತಕ ಕಾಯ ಮಣಿಮಂತಾದಿಗಳ ಶೂಲ ಘನ ಪರಾಕ್ರಮ ಭೀಮ ಜ್ಞಾನದಾಯಕ ವಪುಷ ಆನಂದ ತೀರ್ಥಪ್ರಖ್ಯಾತ ಮೌನಿಮಾನಸ ಚಂದ್ರ ಅನಿಮಿಶೇಷಗಳಾದಿಗೊಡೆಯ ಭಾನುಕುಲತಿಲಕ ದೂತನೆ ಭಾನುಕೋಟಿತೇಜರೂಪನೆ ಗಣಿಸಲಾಗದ ಸತ್ವಮಂದಿರ ಮೌನಿಗಳ ಕಲಶ ಪ್ರಾಯನೆ ಕನಕವರ್ಣದಶುಭಗಾತ್ರನೆ ಧ್ಯಾನಗೋಚರ ವಿಶ್ವರೂಪನೆ ಮಾನದಿಂದಲಿ ಪಾಲಿಸಯ್ಯ 1 ವಾರಿಧಿ ದಾಟಿದಶೂರ ಭಾರಿವನವ ಕಿತ್ತವೀರ ಜರಾಸಂಧನ ಕೊಂದ ಧೀರ ವೈರಿತಿಮಿರಕೆ ಸೂರ್ಯ ಹರಿಯ ಹರಡಿದ ರಾಯ ಪರಾಶರಾತ್ಮಜಪ್ರಿಯ ಕರಿರಾಜವರದನೆ ಪ್ರಥಮಾಂಗ ಭಾರತಿ ರಮಣಮುಖ್ಯಪ್ರಾಣ ಹರಿಯು ಆಗಿ ಹರಿಯ ಒಲಿಸಿದೆ ವೀರಮಾರುತಿ ದೇವ ದೇವನೆ ಬಗೆದು ಧರಿಸಿ ಮೆರೆದೇ ಎಂದು ಸಾರಿದೆ ತೋರಿಸಿ ಕಾಯೊ ಸೂತ್ರನೆ 2 ಅಕ್ಷಯನ ಕೊಂದು ಮೆರೆದ ಲಕ್ಷ್ಮಣನ ಪ್ರಾಣವನುಳಿದ ರುಕ್ಮಿಣೀ ಪತಿಯ ಕಿಂಕರನಾದ ಲಕ್ಷ್ಯವಿಲ್ಲದೆ ಸೈನ್ಯಗಳಳಿದಾ ಪಕ್ಷವಾಹನನೆ ದೈವವೆಂದ ಮೋಕ್ಷಸಾಧನಗಳ ತೋರಿನಿಂದ ವೈರಿ ಅನಿಲ ರಕ್ಷಿಸು ರಕ್ಷಿಸು ತತ್ವೇಶರೊಡೆಯ ಲಕ್ಷ್ಮಿಮಾತೆಯಕಂಡುವಂದಿಸಿ ಲಂಕೆ ಸುಟ್ಟು ಸೊಕ್ಕೂ ಮುರಿದೆ ಅಕ್ಷನಾಟವ ಸೋತುನಟಿಸಿ ಕಾಂತೆಗಭಯವ ನೀಡಿ ಪೊರೆದೆ ಅಕ್ಷರೇಡ್ಯನ ಕರುಣದಿಂದಲಿ ಸೂತ್ರಭಾಷ್ಯವ ರಚಿಸಿ ಮೆರೆದೇ ಇಕ್ಷುಚಾಪನ ಪಿತನ ತೋರಿಸೋ ದಕ್ಷಿಣಾಕ್ಷಿಗವತ್ಸರೂಪಿಯೆ 3 ವಿಷಉಂಡುಪೊರೆದ ರೋಮರೋಮಕೆ ಕೋಟಿ ಲಿಂಗಗಳುದುರಿಸಿ ಬಂದ ಧಾಮಸಕಲ ಗುಣಕೆಂದೆನಿಕೊಂಡ ಅನಾದಿ ಅಪರೋಕ್ಷದೇವ ರಾಮಭಕ್ತಾಗ್ರೇಸರನೆನಿಸಿದ ತಾಮಸಾಂತಕ ವಿಜಯರಥಧ್ವಜ ಭಾಮೆಯರೂಪವ ತಾಳಿಮೆರೆದ ಭೀಮವಿಕ್ರಮ ಸಪ್ತಶಿವಧರ ಸಾಮಗಾಯನ ಲೋಲ ಕೃಷ್ಣನ ಪ್ರಿಯದಾಸ ಮೋದಮುನಿಯೆ ಎನಿಸಿಮೆರೆಯುವೆ 4 ವಾನರರೂಪಿಲಿ ಬಂದ ಜಾನಕಿ ಗುಂಗುರಕೊಟ್ಟು ನಿಂದ ರಾಜಸೂಯವ ಮಾಡಿನಿಂದ ಹರಿಯು ಎಂದ ವನಜನಾಭನಮುಖ್ಯ ಪ್ರತಿಬಿಂಬ ಕ್ಷಣದಿ ಸಂಜೀವನವ ತಂದೆ ವಾನರರ ಪ್ರಾಣ ಉಳಿಸಿದೆ ದ್ರೋಣಸುತನ ಅಸ್ತ್ರನಿಲಿಸಿದೆ ಸಾಮ ದೂರ ಖ್ಯಾತನಾಮನೆ ವಾಯು ಅಂತರ ವಿಶ್ವ ಚರಣ ನಂಬಿದೇ 5
--------------
ಕೃಷ್ಣವಿಠಲದಾಸರು
ಸತಿ ಸಹಿತ ಕಶ್ಯಪರು ರತುನದಾರತಿ ಪಿಡಿದು ರತಿಪತಿಪಿತನಿಗೆ ಅತಿಹರುಷದಿ ಅತಿಶಯದ ಮಹಿಮೆಗಳ ಪೊಗಳುತಲಿ ಶ್ರೀಹರಿಗೆ ಕುಶಲದಾರತಿ ಎತ್ತಿಬೆಳಗಿದರು ನಿತ್ಯ ಶುಭ ಮಂಗಳಂ 1 ಅನಸೂಯ ಸಹಿತ ಅತ್ರಿಯರು ಬೇಗನೆ ಬಂದು ನಳಿನಾಕ್ಷನ ಚರಣಕ್ಕೆರಗಿ ನಿಂದು ವಿಧವಿಧದ ಆಟಗಳ ಆಡಿದ ಶ್ರೀಹರಿಗೆ ಪದುಮದಾರತಿ ಎತ್ತಿ ಬೆಳಗಿದರು ನಿತ್ಯ ಶುಭಮಂಗಳಂ 2 ಶೀಲವತಿಯಾದ ಸುಶೀಲೆ ಸಹಿತ ಭಾರದ್ವಾಜ ಋಷಿಗಳು ತಮ್ಮ ಆಶ್ರಮದಲಿ ಶ್ರೀಲಕುಮಿವಲ್ಲಭಗೆ ಶೀಘ್ರದಿಂದಲಿ ತಾವು ಗೋಮೇಧಿಕದಾರುತಿ ಬೆಳಗಿದರು ನಿತ್ಯ ಶುಭಮಂಗಳಂ 3 ಕುಮುದ್ವತಿ ಸಹಿತ ವಿಶ್ವಾಮಿತ್ರ ಋಷಿಗಳು ಕನಕ ಮಂಟಪದಿ ಮೆರೆಯುವ ದೇವಗೆ ಸನಕಾದಿವಂದ್ಯನಿಗೆ ವನಜಾಕ್ಷಿಯರಸನಿಗೆ ಕನಕದಾರತಿ ಎತ್ತಿ ಬೆಳಗಿದರು ನಿತ್ಯ ಶುಭಮಂಗಳಂ 4 ಪ್ರಹ್ಲಾದವರದನಿಗೆ ಅಹಲ್ಯೆಯ ಸಹಿತದಿ ಫುಲ್ಲಲೋಚನಪ್ರಿಯಗೆ ಋಷಿಗೌತಮ ಮಲ್ಲಿಗೆಹಾರಗಳು ಧರಿಸಿ ಶೋಭಿಪ ಹರಿಗೆ ಚಲ್ವನವರತ್ನದಾರತಿ ಎತ್ತುತಾ ನಿತ್ಯ ಶುಭಮಂಗಳಂ 5 ರೇಣುಕಾ ಸಹಿತ ಜಗದಗ್ನಿ ಋಷಿಗಳು ತಮ್ಮ ಧ್ಯಾನಗೋಚರನಾದ ಪರಮಾತ್ಮನ ಮಾನಿನಿಮಣಿ ಲಕುಮಿಯೊಡನೆ ಶ್ರೀಕೃಷ್ಣನಿಗೆ ನೀಲಮಾಣಿಕ್ಯದ ಆರತಿ ಎತ್ತುತ ನಿತ್ಯ ಶುಭಮಂಗಳಂ 6 ಸತಿ ಸಹಿತ ವಶಿಷ್ಠ ಋಷಿಗಳು ಇಷ್ಟಮೂರುತಿಯಾದ ವರಕಮಲನಾಭ ವಿಠ್ಠಲನ ಸ್ಮರಿಸುತ ನಿತ್ಯ ನವರತ್ನದಾರತಿ ಬೆಳಗಿದರು ನಿತ್ಯ ಶುಭಮಂಗಳಂ 7 ಮಂಗಳಂ ಸಪ್ತಋಷಿಗಳು ಪರ್ಣಶಾಲೆಯೊಳು ಗಾಂಗೇಯನುತನ ಪೂಜಿಸಿ ಹರುಷದಿ ಸಂಗೀತಲೋಲನಿಗೆ ಶೃಂಗಾರ ಪುರುಷನಿಗೆ ರಂಗಿನಾರತಿಯೆತ್ತಿ ಬೆಳಗಿದರು ನಿತ್ಯ ಶುಭಮಂಗಳಂ 8
--------------
ನಿಡಗುರುಕಿ ಜೀವೂಬಾಯಿ
ಕರ್ಮಬಂಧನ ಛೇದನ - ಶ್ರೀ - |ರಾಮನ ನಾಮವ ನೆನೆ ಮನವೆ ಪ.ಅರ್ಚಿಸಲರಿಯೆನು ಪೂಜಿಸಲರಿಯೆನು |ಮೆಚ್ಚಿಸಲರಿಯೆನೆಂದೆನ ಬೇಡ ||ಅಚ್ಯುತಾನಂತ ಗೋವಿಂದನ ನಾಮವ |ಇಚ್ಛೆ ಬಂದಾಗಲೆ ನೆನೆ ಮನವೆ 1ಸ್ನಾನವನರಿಯೆನು ಧ್ಯಾನವನರಿಯೆನು |ಏನನು ಅರಿಯೆನೆಂದೆನಬೇಡ ||ಜಾನಕಿರಮಣನ ದಶರಥನಂದನ |ದಾನವನಾಶನ ನೆನೆ ಮನವೆ 2ಮಂತ್ರವನರಿಯೆನು ತಂತ್ರವನರಿಯೆನು |ಎಂತು ಅರಿಯೆನೆಂದೆನಬೇಡ ||ಸಂತತಾನಂತ ಗೋವಿಂದನ ನಾಮವ |ಅಂತರಂಗದೊಳು ನೆನೆ ಮನವೆ 3ಜಪವ ನಾನರಿಯೆನು ತಪವ ನಾನರಿಯೆನು |ಉಪವಾಸವರಿಯೆನೆಂದೆನಬೇಡ ||ಅಪರಿಮಿತ ಗುಣಗಳ ಅನಂತಮಹಿಮನ |ಕೃಪೆಯ ಸಮುದ್ರನ ನೆನೆ ಮನವೆ 4ಕಲಿಯುಗದೊಳು ಹರಿನಾಮವ ನೆನೆದರೆ |ಕುಲಕೋಟಿಗಳುದ್ಧರಿಸುವುವು ||ಸುಲಲಿತ ಭಕ್ತಿಗೆ ಸುಲಭನೆಂದೆನಿಸುವ |ಜಲರುಹನಾಭನ ನೆನೆ ಮನವೆ 5ತಾಪತ್ರಯಗಳ ತಪ್ಪಿಸಿ ಸುಜನರ |ಪಾಪಗಳೆಲ್ಲವ ಪರಿಹರಿಸುವುದು ||ಶ್ರೀಪತಿ ಸದಮಲಧ್ಯಾನಗೋಚರನ |ಗೋಪೀನಾಥನ ನೆನೆ ಮನವೆ 6ವರದ ವೀರನಾರಾಯಣ ಸ್ವಾಮಿಯು |ಪರಮಪಾವನನು ಹಿತನಾಗಿ ||ಹರಿಯದ ಇಹಪರ ಕೊಡುವ ಸುಖಂಗಳ |ಪುರಂದರವಿಠಲನ ನೆನೆ ಮನವೆ 7
--------------
ಪುರಂದರದಾಸರು
ಭೇರಿಬಾರಿಸುತಿದೆಭೂರಿದ್ವಾರಕೆ ಅರಸನಾಗರ ದ್ವಾರದ ಮುಂದೆಕ್ರೂರ ಖಳರ ಎದೆ ದಾರಿಸುವುದು ಯದುವೀರರಭೇರಿಮುರಾರಿಯ ಪಾಳೆಯಭೇರಿಪ.ಅನಂತಾಸನವಿದೇ ಅನಾದಿ ಶ್ರೀವೈಕುಂಠಅನಂತಶ್ವೇತದ್ವೀಪಸ್ಥಾನಈ ನಂದನಸೂನುಆನಂದಮಯಬ್ರಹ್ಮಮೌನಿ ಸುರನಿಕರ ಧ್ಯಾನಗೋಚರನೆಂದು 1ಬ್ರಹ್ಮ ರುದ್ರೇಂದ್ರಾದಿ ಸುಮ್ಮನಸರನಾಳ್ವರಮ್ಮೆಯರಸ ಸರ್ವೋತ್ತಮಧರ್ಮೋದ್ಧಾರ ಅಧರ್ಮಸಂಹರಪರಬ್ರಹ್ಮವಾಸುದೇವಬ್ರಹ್ಮಣ್ಯದೇವನೆಂದು2ಸೂತ್ರರಾಮಾಯಣ ಪವಿತ್ರೋಪನಿಷದ್ವೇದಗೋತ್ರಭಾರತ ಪಂಚರಾತ್ರಶಾಸ್ತ್ರೌಘ ಸನ್ಯಾಯಶಾಸ್ತ್ರ ಸ್ಮøತಿನಿಕರಸ್ತೋತ್ರಕ ಯಜÕ ಗೋಪೀ ಪುತ್ರ ಶ್ರೀಕೃಷ್ಣನೆಂದು 3ಮಂಗಳಾನಂತ ಗುಣಂಗಳಬುಧಿ ತ್ರಿಗುಣಂಗಳಿಂದೆಂದಿಗಸಂಗಗಂಗೆಯರ್ಚಿತ ಗಂಗಾನ್ವಿತಪದತುಂಗವಿಕ್ರಮಯಜ್ಞಾಂಗಾಚ್ಯುತನೆಂದು4ನೂರೆಂಟುವೆಗ್ಗಳಹದಿನಾರು ಸಾವಿರ ದಿವ್ಯನಾರಿಯರಾಳುವಶೌರಿನಾರದನಿದರ ವಿಚಾರ ಮಾಡಲಿ ಬರೆಮೂರುತಿ ಅನಂತ ತೋರಿ ಬೆರೆತರೆಂದು 5ಸೃಷ್ಟ್ಯಾದಿ ಕಾರಣ ಶಿಷ್ಟ ಸಂರಕ್ಷಣದುಷ್ಟಮಥನ ಪೂರ್ಣತುಷ್ಟಕಷ್ಟ ಜರಾಮೃತ್ಯು ನಷ್ಟಕರ ಏಕೌವಿಷ್ಣು ವರಿಷ್ಠ ವಿಶಿಷ್ಠ ಸುಖದನೆಂದು 6ವೇದೋದ್ಧಾರ ಕ್ಷೀರೋದಧಿಮಥನ ಧರಾಧರ ಹಿರಣ್ಯಕಸೂದನಪಾದತ್ರಯ ಖಳಛೇದಕ ಯಶೋಧರಮಾಧವಬುದ್ಧಕಲಿರೋಧ ಕಾರಣನೆಂದು7ಪಾಂಡವ ಸ್ಥಾಪಕ ಲೆಂಡಕೌರವ ಹರ್ತಗಾಂಡೀವಿಸಖಸುರಶೌಂಡಚಂಡ ಚಂದ್ರ್ರಾನಂತಾಖಂಡ ಪ್ರಕಾಶಮತಪೌಂಡ್ರಕ ಸಾಲ್ವಮತ ಖಂಡಾನಂತನೆಂದು 8ಧಾಂ ಧಾಂ ಧಿಮಿಕಿಟ ಧಾಂದಂದಳ ದಂದಳ ಧಿಮಿಕಿಟಧಾಂತಾಂಧಿ ಮದಾಂಧರಿಗೆ ಅಂಧಂತಾಮರ ಸಧಾಂಧೊಂದೊಂದೊಂತು ಪ್ರಸನ್ನವೆಂಕಟಮಂದಿರಾನಂದನಿಲಯಭಕ್ತವತ್ಸಲನೆಂದು9
--------------
ಪ್ರಸನ್ನವೆಂಕಟದಾಸರು