ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀಹರಿಗೆ ಪ್ರಥಮಾಂಗ ಮಧ್ವಮೂರ್ತಿ ಪ ದೇಹ ಚತುರದಿ ಇದ್ದು ಜಗವ ಸಲಹುವೆ ದೊರೆಯೆ ಅ.ಪ. ಅಮೃತರೂಪನೆ ಹರಿಯ ಅಮೃತಮಯ ಭಕ್ತಿಯೊಳು ರಮೆ ಸಹಿತ ರಾಜಿಪನ ಅಚ್ಛಿನ್ನ ಅರ್ಚಕನೆ ಸಮರರಿಯೆ ನಿನಗಿನ್ನು ಅಜನುಳಿದು ಜೀವರೊಳು 1 ನಿನ್ನ ನಾಮಸ್ಮರಣೆ ನಿಸ್ವಾರ್ಥಿಯ ಕಥನ ನಿನ್ನ ವೈಭವ ಧ್ಯಾನ ಅಮೃತಪಾನ ನಿನ್ನ ಗುಣ ಕ್ರಿಯ ರೂಪ ನೆನೆನೆನೆದು ಸುಖಿಸುವನು ಧನ್ಯ ಸುರಕುಲದವನು ಜೀವನ್ಮುಕ್ತನವನಿಯೊಳು 2 ನಿನ್ನಲ್ಲಿ ಹರಿ ಇದ್ದು ಜಗವ ನಡೆಸುವ ತಾನು ನಿನ್ನಲ್ಲಿ ಶ್ರೀಹರಿಯ ಒಲುಮೆ ಅಮಿತ ನಿನ್ನ ಕರವಶ ಮುಕ್ತಿ ಮಾಡಿಹನು ಯದುಪತಿಯು ನಿನ್ನ ದಾಸರೆ ಹರಿಯ ಪುರವಾಸಿಗಳು ಸ್ವಾಮಿ3 ಜ್ಞಾನ ಬಲ ಭಕ್ತಿ ವೈರಾಗ್ಯ ಲಾಘವ ಶಕ್ತಿ ಧ್ಯಾನ ವಿದ್ಯಾ ಬುದ್ಧಿ ಕುಶಲ ತೇಜ ಪೂರ್ಣಪ್ರಾಜ್ಞತೆ ಸಿರಿಯ ಮಾಧುರ್ಯ ಶುಭವಾಕು ಪೂರ್ಣಧೈರ್ಯವು ಕಾರ್ಯ ಪೂರ್ಣ ನಿನ್ನಲಿ ಅಭಯ 4 ವಾಣಿ ಭಾರತಿ ನಿನ್ನ ವೈಭವವ ನೆನೆನೆನೆದು ಧೇನಿಸುತ ಆನಂದಮಗ್ನರಾಗಿ ಕಾಣದಲೆ ಕೊನೆ ಮೊದಲು ತತ್ವದ ಕಮಲದಲಿ ಜೇನಾಗಿ ಕ್ರೀಡಿಪರೊ ಮೈಮರೆದು ಸುಖ ಸುರಿದು 5 ಶಿವ ಶೇಷ ದ್ವಿಜ ರಾಜ ಸುರರಾಜ ಮೊದಲಾದ ಕಮಲ ರಜವ ಲವ ಬಿಡದೆ ಪೊತ್ತಿಹರೊ ಆನಂದ ಶರಧಿಯಲಿ 6 ಅಮಿತ ವೈಭವ ಗಾತ್ರ ಕಾಳಕೂಟವನುಂಡು ಮೆರೆದ ಮಹಿಮ ಶ್ರೀಲೋಲ ನಿನ್ನಲ್ಲಿ ಆನಂದ ಲೀಲೆಗಳ ಕೊಲಾಹಲದಿ ಮಾಳ್ಪ ಕಾರುಣ್ಯರೂಪದಲಿ 7 ರೇಣು ತೃಣ ಕಾಷ್ಟ ಬಹಿರಂತರದಲ್ಲಿ ಘನ ಮಹತ್ತು ಅಣು ಜೀವ ಚಿದ್ದೇಹದಲ್ಲಿ ಅನವರತ ಅಲ್ಲಿಪ್ಪ ಸರ್ವಮಂಗಳ ಹರಿಯ ಗುಣನಿಕರಗತ ಚಿತ್ರ ಜಗದಸುವೆ ನಿರ್ದೋಷ 8 ರಾಮದೂತನೆ ಹನುಮ ಹರಿ ಧೌತ್ಯಯನಗೀಯೊ ಬಂಟ ಸತತ ಹರಣ ವೃಕೋದರ ವೀರ ಶ್ರೀ ಮನೋಹರನÀಲ್ಲಿ ದಾಸ್ಯ ದೀಕ್ಷೆಯ ದೇಹಿ 9 ಪನ್ನಗ ರುದ್ರ ಸುರಗಣವು ಮೊದಲಾದ ಚರಾಚರ ಭ್ರೂ ಚಲನ ಮಾತ್ರದಿಂದ ಖರೆ ಸೃಷ್ಟಿ ಸ್ಥಿತಿ ಮುಕ್ತಿಯೈದುವರೊ ಘನ ಮಹಿಮ ವರ ವೇದ ಪ್ರತಿಪಾದ್ಯ 10 ಪರಮಮಂಗಳ ಜಯೇಶವಿಠಲನಂಘ್ರಿ ಸರಸಿಜವ ಬಿಡದ ಮಧುಪರಾಜ ಶರಣರಿಗೆ ಸುಜ್ಞಾನ ಶರಧಿಯನು ಪೊಂದಿಸಿದೆ ಕರುಣನಿಧಿ ಆನಂದಮುನಿ ನಿನ್ನ ಕೃಪೆ ಮುಕ್ತಿ 11
--------------
ಜಯೇಶವಿಠಲ