ತಿಳಿಯೋ ಮನವೇ ನಿಜ ಘನವಾ |
ಕಳಿಯೋ ಹಮ್ಮಿನ ಅವಗುಣವಾ ಪ
ಸದ್ಗುರು ಶರಣವ ನೀ ಬ್ಯಾಗ |
ಸದ್ಗುಣದಲಿಹುದು ಜಗದೊಳಗ |
ತದ್ಗತ ಬೋಧವರೆದು ಈಗ |
ಸದ್ಗತಿ ಕಾಣಿಸುವದು ನಿನಗ 1
ಪಿಡಿಯದೆ ನಾನಾ ಬಯಕೆಯನು |
ತಡೆಯದೆ ಬಿಡು ಕುಜನಾಶ್ರಯನು |
ಇಡು ಗುರು ಪದ ಭಕುತಿಯನು |
ಪಡೆ ದೃಷ್ಟಿಯ ಘನ ಸಮತೆಯನು 2
ಬ್ಯಾರೆ ಬ್ಯಾರೆ ನಗದಾಕಾರಾ |
ತೋರಿದರೇನದು ಬಂಗಾರಾ |
ಈ ರೀತಿ ಮಾಯದ ವ್ಯವಹಾರಾ |
ಈರೇಳು ಜಗ ಚಿನ್ಮಯ ಸಾರಾ 3
ಗೋಡಿಯಿಂದಲಿ ಚಿತ್ರಗಳೆಲ್ಲಾ |
ರೂಢಿಸಿ ದೋರಿತು ಜನರೆಲ್ಲಾ |
ಆಡಲು ಯರಡಕ ಹೊರತಿಲ್ಲಾÀ |
ನೋಡಲಾಯಿತು ತಾನೇಯಲ್ಲಾ 4
ಹಾಲುಕ್ಕಿದ ಸೋರೆಯ ಪರಿಯಾ |
ಜ್ಯಾಳಿಸಬ್ಯಾಡಾ ಯುವ ಬರಿಯಾ |
ಕೇಳಿಕೋ ಮಹಿಪತಿ ಸುತ ಧೋರಿಯಾ |
ಬಾಳು ಗಳೆದು ದುಸ್ತರಿಯಾ 5