ಏನಯ್ಯ ಧೊರೆಯೆ-ನಿನಗಾನಂದವೆ ಧೊರೆಯೇ ಪ
ನುಡಿನೀನೊಲಿದಾಲಿಪುದುಅ.ಪ.
ಜಾತಿಧರ್ಮವಿಲ್ಲಾ-ಶಾಸ್ತ್ರದರೀತಿನಡತೆಯಿಲ್ಲ
ಮಾತಿದುಪುಸಿಯಲ್ಲಾ-ಮಾನದ-ಭೀತಿಯುಮೊದಲಿಲ್ಲಾ
ನೀತಿಯನರಿಯದ-ಕೋತಿಗಳಂದವ
ಜಾತಿಯ ಜನರೊಳು ಮಾತಿನವಾಶಿಯಿಲ್ಲ 1
ದುರ್ಜನರು ಬೆರೆದು-ದೋಷವಿ
ವರ್ಜಿತರನ್ನು ಜರಿದು ಲಜ್ಜೆಯನೆರೆತೊರೆದು
ಗರ್ವದಿ ಗರ್ಜಿಸಿ ಮೊರೆದು
ಈ ಜಗದೊಳಗಿಹ ಸಜ್ಜನರಿಗೆ ಕುಲಕಜ್ಜಳರವ ಮತಿ ಗುಜ್ಜುಗಿಸುತ್ತಿಹ 2
ಗಂಡನ ಬಿಟ್ಟಿಹರು-ಗರತಿಯ-ಕಂಡು ನಗುತ್ತಿಹರು
ಮಿಂಡರ ಬೆರೆದಿಹರು-ಮೇಲತಿ-ದಿಂಡೆಯರಾಗಿಹರು
ಚಂಡಿಸುತಿರ್ಪರೋ 3
ಕೇಳುಹಂದೆಯಾಳು-ಕ್ಲೇಶವ ಪೇಳಲು ಮತಿತಾಳು
ಕೀಳು ಜನರ ಬಾಳು ಕಿವಿಯಲ್ಲಿ ಕೇಳಬಹುದೆ ಪೇಳು
ಜನರೂಳಿಗ ಬಲುಘನ 4
ಧರೆಯೊಳಧಿಕವಾದ ಶ್ರೀ ಪುಲಿ-ಗಿರಿಯೊಳು ನೆಲೆಯಾದ
ಸಿರಿವರ ನಿಜಪಾದ-ಸೇವೆಯ-ಕರುಣಿಸು ಬಹುಮೋದ
ಶರಣಾಭರಣ ನಿಜ ಕರುಣವ ತೋರಿಸು
ವರದ ವಿಠಲಧೊರೆ ವರದದಯಾನಿಧೆ 5