ಎನ್ನ ಪಾಲಿಸುವುದಾನಂತ ಶಯನ |
ಚನ್ನ ಗರುಡವಾಹನಾ |
ಮುನಿಗೊಲಿದನಂತ ಗುಣಾರ್ಣವಾ ಪ
ದೇವಾ ನಂಬಿದವರ ನೋವ ಕಳೆದು ಬಿಡದೆ |
ಕಾವ ಬೇಡಿದ ವರವ ನೀವ ಮೂರು |
ಭುವನ ಜೀವ ವಿಮಲರಾ |
ಜೀವ ನಯನ ವಸುದೇವ ದೇವಕಿತನು |
ಭವನೆ ಭವದೂರ ದುರ್ಜನ ಸಂಹಾರ |
ದೇವತಾ ವರ ಸಂಜೀವಾ ಪ್ರಭಾವಾ1
ಸೂರ್ಯಕೋಟಿ ಪ್ರಕಾಶಾ | ಚಾರ್ಯನಾ ನಾಯಕಾಧೀಶಾ |
ಧೈರ್ಯವುಳ್ಳ ಸರ್ವೇಶಾ | ಕಾರ್ಯರೊಳು ವಿಶೇಷಾ |
ಕಾರ್ಯವಂತನೆ ಈಶಾ | ತುರ್ಯಮಹಿಮಾ ಸುರ
ಮರ್ಯಾದಿಯಲಿ ಬಲು | ವೀರ್ಯದಲಿ ಮತಿ |
ಧಾರ್ಯನ ಮಾಡೋದು | ನಿರ್ಯಾಣ ಸಮಯಕ್ಕೆ 2
ಬಂದು ಮತ್ಸ್ಯಾದಿ ತೀರ್ಥ | ಬಂದು ಬಲು ಸಮರ್ಥ |
ಇಂದು ಕರುಣಿಸು ಕರ್ತಾ |
ಬೆಂದು ಪೋಗಲಾರ್ಥ | ಮುಂದುಣಿಸು ಸುಧಾರ್ಥ |
ತಂದು ನೀನೆ ಮುಕ್ತ್ತಾರ್ಥ | ಬಂದು ವೈತಿರುವಾ
ನಂದು ರೂಪವನೆ | ಸಿಂಧುಶಯನ ಆ
ನಂದ ವಿಜಯವಿಠ್ಠಲೆನ್ನ ಪಾಲಿಸೋ3