ಮನೆಯಲಿ ಸುಖವಾಸಿ ಪ
ಕೈಯೊಳರ್ಥವು ಮೊದಲಿಲ್ಲ ಹಾಗಾದರು
ಮೈಯೊಳಗೇ ನೇನು ಗುಣ ಕಾಂಬುದಿಲ್ಲ
ಧೈರ್ಯಲಕ್ಷ್ಮಿಯ ತುದಿಗಿಲ್ಲ ಪರರ
ಕೈಯ ಬೇಡಲು ಕಾಣೆ ಕೊಡುವವರಿಲ್ಲ 1
ಹೊಳೆ ಕೆರೆ ಬಾವಿಯಿದ್ದಲ್ಲಿ ಭಾಗೀರಥಿ
ನೆಲೆಸಿ ಕೊಂಡಿಹಳಿಲ್ಲಿ
ಮುಳುಗಿ ಮಿಂದರೆ ಭಕ್ತಿಯಲ್ಲಿ ಕಾಶಿ
ಯೊಳಗೆ ಗಂಗೆಯ ಮಿಂದ ಫಲ ಬಹುದಿಲ್ಲಿ 2
ಜ್ಞಾನವಿಲ್ಲದೆ ಮೋಕ್ಷವಿಲ್ಲ ಮುಕ್ತಿ
ಮಾನಿನಿಯನು ಕೂಡಿ ಸುಖಿಸಲು ಬಲ್ಲ
ಜ್ಞಾನಿಗಳಿಗೆ ತೋರ್ಪುದೆಲ್ಲ ಹರಿ
ಸೂನು ಕೋಣೆಯ ಲಕ್ಷ್ಮೀರಮಣ ತಾನೆಲ್ಲ 3