ದೂರ ಮಾಡುವರೇ ಶ್ರೀಶ ಪ
ದೂರ ಮಾಡುವರೇದೂರ ಮಾಡುವರೇನೋ ಶ್ರೀಶದಾರಿ ಕಾಣದೆ ಮೊರೆಯನಿಡುವೆಆರು ಕಾಯುವರಿಲ್ಲ ಶ್ರೀಶಸಾರಸಾಕ್ಷ ಸಲಹೆ ಬೇಡುವೇ ಅ.ಪ.
ಸಕ್ತಿ ಇಲ್ಲವೋ | ನಿನ್ನೊಳಾಸಕ್ತಿ ಇಲ್ಲವೋ |ಸಕ್ತಿ ನಿನ್ನಲ್ಲಿಲ್ಲದೇಲೇಮುಕ್ತಿ ಇಲ್ಲವೆಂದು ಶೃತಿಯಉಕ್ತಿ ಕೇಳಿ ಕೇಳಿದಾಗ್ಯೂ ವಿ-ರಕ್ತಿ ಪುಟ್ಟಲಿಲ್ಲ ಎನಗೆ ಭಕ್ತಿಮಾರ್ಗ ದೂರವಾಯ್ತೊ 1
ದುಷ್ಟ ವಿಷಯದೀ | ಮನವುಅಟ್ಟಿ ಪೋಗೋದೋ |ಎಷ್ಟು ಪೇಳಿದಾರೂ ಮನವುನೆಟ್ಟಗಾಗೋ ಪರಿಯ ಕಾಣೆಸೃಷ್ಠಿಗೀಶ ಮನವ ಅಭಿಧಸೊಟ್ಟ ಮನವ ಸರಿಯ ಪಡಿಸಿ | ಶ್ರೇಷ್ಠ ನನ್ನ ಮಾಡದ್ಹಾಂಗೆ 2
ಕೈಯ್ಯ ಬಿಡುವರೇ | ದಯಾಳು ವಿಷಯಧುಯ್ಯಲು ಕಳೆಯದೇ |ಪ್ರೇರ್ಯ ಪ್ರೇರಕನಾಗಿ ನೀನುಮಯ್ಯ ಮರೆಸಿ ಧೈರ್ಯಗೆಡಿಸೆಆರ್ಯರಿದನ ಸಯ್ಯೆಂಬೊರೇನೋಅಯ್ಯ ಕೈಯ್ಯ ಬಿಡದೆ ಕಾಯೋ | ಗುರು ಗೋವಿಂದ ವಿಠಲ 3