ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಊ) ಲೋಕನೀತಿಯ ಕೃತಿಗಳು ಕೆಟ್ಟಗುಣಗಳು ನರನ ಅಟ್ಟಿಕೆಡಹುತಲಿಹುವು ಭ್ರಷ್ಟನೆನಿಸದೆ ಬಿಡವು ಇವನ ಪ ಸೃಷ್ಟಿಯೊಳಗಿವುಗಳಿಂದೆಷ್ಟುಜನ ಕೆಟ್ಟಿಹರೋ ಕಟ್ಟುತ್ತ ಮುಸಲದಿಂ ಕುಟ್ಟುತಿಹುವೂ ಅ.ಪ ಸರಿಧರೆಯ ಸ್ತ್ರೀಯರಂ ಕಾಯಿಸಲು ನರತಾನು ಹರಿಯಿಂದ ಹತನಾಗಿ ಹೋದಾ ವರವಿಪ್ರನಲಿ ಕ್ರೋಧಮಾಡಿದ ಬಕಾಸುರನ ತರಿದನಲ್ಲವೆ ಭೀಮ ತಾನು 1 ದಾಯವನು ಲೋಭದಿಂ ಕೌರವನು ಪಾಂಡವರಿ ಗೀಯದುದಕವನೇನು ಪಡೆದಾ ರಾಯದಶರಥ ತನ್ನ ಸತಿಸುತರ ಮೋಹವಿರೆ ಆಯುವಿಂ ಗತನಾಗಿ ಹೋದಾ 2 ಜಮದಗ್ನಿಯ ಹೋಮಧೇನುವಂ ಮದದಿಂದೆ ಕಾರ್ತಿವೀರ್ಯಾರ್ಜುನನು ಕೊಳಲು ಅಮಿತಬಲನಾಪರಶುಧಾರಿಯು ತಾನು ಸಮರದೊಳೆ ಸವರುತ್ತ ಅವನ ಕಳೆದ3 ಕೃಷ್ಣನನು ಮತ್ಸರದಿ ಶಿಶುಪಾಲ ಬಯ್ಯಲು ವಿಷ್ಣುಚಕ್ರವು ಕೊಂದಿತವನ ಬಾಣ ತಾನೀರ್ಷೆಯಿಂ ಭವಗವಂತನಿದಿರೇಳೆ ಪ್ರಾಣವುಳಿಯುತ ನಾಲ್ಕು ತೋಳ್ಗಳಾಯ್ತು 4 ವಾಸುದೇವನ ಮೇಲಸೂಯೆಯಿಂ ಪೌಂಡ್ರಕ ವಾಸುದೇವನೊಳು ಅಳಿದ ಕಂಡ್ಯಾ ದೂಷಣೆಯು ಡಂಬಗಳು ನಾಶನವ ಗೈಯುವುವು ಈಶ ಸುಜನರಿಗಾಗಿ ಭಾವಿಸುವ ಜಗದೀ5 ದರ್ಪದಿಂ ದಶಶಿರನು ಮರೆಯುತ್ತಲಿರಲಾಗಿ ಅಪಹಾರಗೈದ ಶ್ರೀರಾಮ ತಲೆಯಾ ರಿಪುಗಳಾ ಮಧು ಕೈಟಭರ ಮಮತೆಯನು ಉಪಮೆಯಲ್ಲಿದು ಮಾಯಿ ಮುರಿದ ನೋಡಾ 6 ನಿರ್ವಿಕಾರನ ನೆನೆದು ಗರ್ವವರ್ಜಿತರಾಗಿ ಸರ್ವವೂ ಹೆಜ್ಜಾಜಿ ಕೇಶವಾ ಯೆಂದು ಪರ್ವತೋದ್ಧರನಲ್ಲಿ ಕರ್ಮಾರ್ಪಣೆಯ ಮಾಡಿ ಒರ್ವನೇ ಜಗದೀಶನೆಂದು ನಮಿಸೀ 7
--------------
ಶಾಮಶರ್ಮರು
ತೋರಮ್ಮಯ್ಯ ಯತಿಕುಲ ಸರ್ವಭೌಮನ್ನ ಪಮೂರವತಾರದ ಪುಣ್ಯರಾಶಿಯನು ತೂರಿಸುಜನರ ಪೊರೆವ ಉದಾರನ ಅ.ಪಅಸುರ ಬಾಲನಂತೆ ಹರಿಯಲಿ ಅಸಮ ಭಕ್ತಿಯಂತೆಅಸುರಾರಿಯ ನರಸಿಂಹರೂಪವನು ಅಸುರತಾತನಿಗೆ ತೋರ್ದನಂತೆ 1ಪರಮಹಂಸನಂತೆ ಪುರಂದರದಾಸರ ಗುರು ಅಂತೆಅರಸನ ರಕ್ಷಿಸಿ ಅರಸನಾಗಿ ಕ್ಷಣ ಉದ್ಗ್ರಂಥಗಳನು ರಚಿಸಿದನಂತೆ 2ಕಡುಬಡತನವಂತೆ ಸುದಾಮನ ಮರಸಿ ಬಿಟ್ಟಿತಂತೆಸಡಗರದಿಂದ ಸನ್ಯಾಸಿಯಾಗಿ ದರ್ಮಸಾಮ್ರಾಜ್ಯವನಾಳಿದನಂತೆ3ಕಾಮಧೇನುವಂತೆ ಕಲಿಯುಗ ಕಲ್ಪವೃಕ್ಷವಂತೆನೇಮದಿಂದ ಸೇವೆಯನು ಮಾಡಿದರೆ ಕಾ'ುತಾರ್ಥಗಳನೀಯ್ವನಂತೆ 4ಸಾಲವಪುರದಂತೆ ಭಕ್ತರಿಗೊಲಿದು ಬಂದನಂತೆಮೂಲಸ್ಥಾನ ಮಂತ್ರಾಲಯವಂತೆ ಭೂಪತಿ'ಠಲನ ತೋರುವನಂತೆ 5
--------------
ಭೂಪತಿ ವಿಠಲರು
ರಾಮನ ನೋಡ ಬನ್ನಿರೆ ಭಾಮೆಯರೆಲ್ಲ ಪ ರಾಮನ ನೀವು ನೋಡ ಬನ್ನಿರೆ ಕಾಮಿತಾರ್ಥವಬೇಡಿಸುಖಿಸಿರೆ ಸ್ವಾಮಿ ನೀನೆ ಗತಿ ಎಂದರೆ ಕಾಮಿತಾರ್ಥವನೀವ ದೊರೆಯನ ಅ.ಪ ಧೂರ್ತ ರಾವಣನ Wಟ್ಟಿಸಿ ಖ್ಯಾತಿಯಿಂದಲಿ ರಥವನೇರಿ ಸೀತೆಸಹಿತ ಬರುವನಂತೆ 1 ಅಯೋಧಾü್ಯಪುರದಿ ನಿಂದು ಮರೆವ ಸಿಂಹಾಸನವನೇರುತ ಹರುಷದಲಿ ತಾ ಕೂಡುವನಂತೆ 2 ಮಾನನಿಧಿ ಪ್ರಾಣನಾಥವಿಠಲ ಸಾನುರಾಗದಿ ಭಜಿಸುವರಸುರ ಧೇನುವಂದದಿ ಸಲಹುವನು ಮಾನಿನಿಯರು ಮನ್ನಿಸುತ ಬೇಗ 3
--------------
ಬಾಗೇಪಲ್ಲಿ ಶೇಷದಾಸರು
ವರದೇಶವಿಠಲರ ಹಾಡು ದಾಸರಾಯರ ದಿವ್ಯ ಚರಣ ಭಜಿಸಿ |ಶ್ರೀಶ ಪ್ರಾಣೇಶ ದಾಸಾರ್ಯ ಗುರುವರ್ಯ ಪ ಪಾದ ಭಜಿಪ ಸದ್ಭಕ್ತರ |ಏಸು ಜನ್ಮದ ಪಾಪರಾಶಿ ಪರಿಹರ ವೋ ||ಶ್ರೀಶನಲಿ ಸದ್ಭಕ್ತಿ ಲೇಸಾಗಿ ಪುಟ್ಟುವದು |ಲೇಶ ಸಂಶಯವಿಲ್ಲ ಆಲಸವು ಸಲ್ಲ 1 ಮರುತ ಮತ ತತ್ವಗಳ ಥೆರೆಗಳಿಂಸೂಸುತ |ಧರಣಿ ದ್ವಿಜರಿಗೆ ರಾಮನಾಮ ಮೃತ ||ನಿರುತ ಭಜಿಸಲು ಜ್ಞಾನ ವೈರಾಗ್ಯ ತರಮಣಿಯ |ಹರಿಭಕುತಿ ಧೇನುವಂ ನೀಡ್ವ ಪಾಲ್ಗಡಲೆನಿಪ 2 ಸುಜ್ಞಾನವೆಂಬಂಥ ಕಿರಣಗಳ ಪಸರಿಸುವ |ಅಜ್ಞಾನ ತಿಮಿರವನು ದೂರೋಡಿಪ |ಸೂಜ್ಞರೆಂಬುವ ತಾವರೆಗಳರಳಿಸುವಂಥ |ಅಜ್ಞ ಕುಮುದಗಳ ಬಾಡಿಸುವ ಭಾಸ್ಕರ ನೆನಿಪ 3 ನಮಿತ ಜನ ಭವತಾಪ ಕಳೆದು ಸದ್ಭಕ್ತಿಯಿಂ |ಬಮಿತ ಆಹ್ಲಾದವನು ಬೀರುವಂಥ ||ಶಮದಮಾದಿಗಳ ಚಂದ್ರಿಕೆಯಿಂದ ಶೋಭಿಸುವ |ವಿಮಲ ಹರಿಜನ ಚಕೋರಕೆ ಚಂದ್ರನೆಂದೆನಿಪ 4 ದಾಸ ಕುಲತಿಲಕ ಪ್ರಾಣೇಶರಾಯರ ಕವನ |ಶ್ರೀಶ ಕಥೆಗಳ ರಾಶಿ ಮೀಸಲಾಗಿರಲು |ಆಸು ಭಕ್ತರಿಗೆ ಸಂತೋಷಗೊಳಿಸಲು ಸರ್ವ |ದೇಶದಲಿ ಮೆರಿಸಿ ಸತ್‍ಕೀರ್ತಿಯನು ಪಡೆದಂಥ 5 ಈ ಗುರುಗಳ ಪಾದಕ್ಕೆರಗಿದ್ದ ಶಿರಧನ್ಯ |ಈ ಗುರುಗಳೀಕ್ಷಿಸಿದ ನೇತ್ರ ಧನ್ಯ ||ಈ ಗುರುಗಳ ವಾಣಿ ಕೇಳಿದ ಕಿವಿಧನ್ಯ |ಈ ಗುರುಗಳನು ಮನದಿ ನೆನೆವ ನರಧನ್ಯ 6 ರಾಗ ದ್ವೇಷಾದಿಗಳ ಗೆದ್ದು ಸದ್ಭಕ್ತಿಯಂ |ಶ್ರೀಗುರು ಪ್ರಾಣೇಶ ಭಜಕರೆನಿಪ |ನಾಗ ಪರ್ಯಂಕ ವರದೇಶ ವಿಠಲನ ಪ್ರಿಯಯೋಗಿ ವರದೇಂದ್ರ ಮುನಿಗಳ ಪಾದಭೃಂಗ 7
--------------
ಶ್ರೀಶಪ್ರಾಣೇಶವಿಠಲರು