ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಾಕು ಸಡಗರವ ಬಿಟ್ಟು ಹರಿಯ ನೆನೆ ಬೇಗ ನೂಕು ಭವದ ಬೇಸರ ದುಷ್ಕರ್ಮವನೀಗ ಪ. ವೇದವ ಗಿರಿಯ ಧರೆಯನುದ್ಧರಿಸಿದವನ್ಯಾರು ಬಾಧಿಪ ಖಳನುದರ ಸೀಳ್ದಗೆ ಸರಿದೋರು ಪಾದನಖದಿ ಬೊಮ್ಮಾಂಡವನೊಡೆದನ ಸಾರು ಕ್ರೋಧದಿ ನೃಪರನು ಕೊಂದವನ ಮಹಿಮೆಯ ಬೀರು 1 ಸೇತುವೆಗಟ್ಟಿದ ರಾಮನಿಂದಿಷ್ಟವ ಬೇಡು ಭೂತರುಣಿಗೆ ಸುಖವಿತ್ತನ ಪೂಜೆಯ ಮಾಡು ಖ್ಯಾತ ದಿಗಂಬರದೇವನ ಕುಶಲವ ನೋಡು ಭೀತಿಯ ಬಿಡುತಲಿ ಭಜನದಿ ಲೋಲ್ಯಾಡು 2 ಮನೆಮನೆವಾರ್ತೆಯ ಬಿಟ್ಟು ಧೇನಿಸುವುದು ಗಳಿಗೆ ಕನಸಿನೊಳಾದರು ಪೋಗದಿರಧಮರ ಬಳಿಗೆ ಗು- ಣನಿಧಿ ಹಯವದನನ ನಿಲಿಸಿಕೊ ಮನದೊಳಗೆ 3
--------------
ವಾದಿರಾಜ