ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆ ವೆಂಕಟಗಿರಿನಿಲಯನಂಘ್ರಿ ರಾ ಜೀವಯುಗಳಗಾನಮಿಸುವೆನು ಪ ಸೇವಿಪ ಜನರಿಗಮರ ತರುವೆನಿಸಿ ಧ ರಾವಲಯಾಖ್ಯ ದಿವಿಯೊಳೆಸವ ಅ.ಪ. ನಿಖಿಳ ಜಗತ್ತಿಗೆ ಪಾವನತರವೆಂದೆನಿಸುವುದು ಶ್ರೀ ವಿಧಿಭವ ಶಕ್ರಾದ್ಯರು ಆವನ ಸೇವಕ ಸೇವಕರೆನಿಸುವರು ತಾ ಉತ್ತಮ ಪುರುಷನೆನಿಸಿ ಜಗವ ಸ ದಾವಕಾಲ ಸಂತೈಸುವನು ಜೀವಾಂತರ್ಗತನಾಗಿ ವಿವಿಧ ವೇ ದಾವಳಿಯಿಂದ ತುತಿಸಿ ಕೊಂಬಾ 1 ಪಾತನೊಳಹಿಪ ವಿರೋಧಿಸೆ ತವಸ ತ್ವಾತಿಶಯನ ತೋರೆಂದೆನುತಾ ಜಾತರೂಪ ಶೈಲಾತ್ಮಜನಪ್ಪಿರೆ ವೀತಿ ಹೋತ್ರ ಸಖ ಕಿತ್ತೊಗೆಯೆ ವೀತ ಕರ್ನನಳವಳಿದು ವೇಗ ಧಾತ ಮಹಿಳೆ ತೀರ್ಥದಿ ಭೂ ಲಕ್ಷ್ಮೀಸ ಮೇತನಾಗಿ ಮೋದಿಸುತಿಪ್ಪೆ 2 ಭೂಸುರನೊರ್ವನು ತೊಂಡಮಾನ ಧರ ಣೀಶÀನ ನಿಲಯದೊಳುಳುಹಿ ಸತಿಯ ನೃಪತಿ ಮರೆಯೆ ನಿ ಶ್ವಾಸ ವನೈದಿದಳಾ ಸತಿಯು ಆ ಸಮಯದಿ ದ್ವಿಜವರ್ಯನು ಬೆಸಗೊಳೆ ಕ್ಲೇಶದಿ ಭೂಮಿಪ ಸಂಸ್ತುತಿಸೆ ಕೇಶವ ತಾನಸ್ಥಿಗಳ ತರಿಸಿ ಸು ವಾಸಿನಿ ಶಿಶು ಸಹ ಒಲಿದಿತ್ತಾ 3 ವೃದ್ಧ ಬ್ರಾಹ್ಮಣನು ತುತಿಸೆ ಸಲಿಲದೊಳ ಗದ್ದಿ ಕುಮಾರತ್ವವನಿತ್ತ ಅಧ್ವರವೆಸಗಿದ ಋಷಿಗಳ ಮಂತ್ರದ ಪದ್ದತಿ ತಿದ್ದಿಯಜ್ಞವ ಮಾಡ್ದ ಮಧ್ಯರಾತ್ರಿಯೊಳು ಬೆಸಗೊಂಡ ನೃಪನು ಪದ್ರವ ಕಳೆದಾಯುಧವಿತ್ತು ಮೃದ್ಭಾಂಡವ ರಚಿಸುವನಿಗೊಲಿದವನ ಚೋದ್ಯ ತೋಂಡಮಾನಗೆ ತೋರ್ದ 4 ಸಂಚಿತ ಕುಕರ್ಮಗಳ ಮನೆಯ ಮುರಿದು ಆಗಾಮಿ ಫಲಂಗಳ ಅನುಭವಕೀಯದೆ ಪ್ರಾರಬ್ದಾ ಮೂರ್ತಿ ಚಿಂ ತನೆ ಇತ್ತು ಸ್ವರೂಪಸುಖಾ ಅನುದಿನದಲಿ ವ್ಯಕ್ತಮಾಡಿಸಿ ಕೊ ಟ್ಟನಿಮಿತ್ತಾಪ್ತನೆನಿಸುತಿಪ್ಪ 5 ಏಕಮೇವ ರತ್ನಾಕರ ಮಂದಿರ ಆಕೂತಿಜ ಯಜ್ಞಾಕರನೇ ಲೊಕವಿಲಕ್ಷಣ ಸೂಕರಾತ್ಮ ಪಿ ವಿನುತ ಲಕ್ಷ್ಮೀ ಕಾಂತಾ ಗೋಕುಲ ಮಂದಿರ ಏಕಾಂತಿಗಳ ನಿ ರಾಕರಿಸಿದೆ ಲೋಕೈಕ ಸುಖ ಶೋಕ ರಹಿತ ನಿಜಲೋಕವಿತ್ತು ನಿ ರಾಕುಲ ಸುಖಗಳ ತಾ ಕೊಡುವಾ 6 ದಿನಪನೊಳಗೆ ವೃಜಿನಿ ವಸು ತಾ ಎಂ ದೆನಿಸಿ ಜಯಾಪತಿ ಪ್ರದ್ಯುಮ್ನ ಅನಿರುದ್ಧಾದಿ ಚತುರ್ಮೂತ್ರ್ಯಾತ್ಮಕ ತನಗೆ ತಾನೆ ಪೂಜಕ ಪೂಜ್ಯ ಅನುಪಮ ನಾಮದಿ ಕರೆಸುತಲಿಹ ತ ನ್ನನು ಈ ಪರಿಧೇನಿಸುತಿಪ್ಪ ಮನುಜರಿಗೊಲಿದು ಜಗನ್ನಾಥವಿಠ್ಠಲ ಜನನ ಮರಣಗಳ ಪರಿಹರಿಪಾ 7
--------------
ಜಗನ್ನಾಥದಾಸರು
ನಮಿಸುವೆನು ಭುವನೇಂದ್ರ ಗುರುರಾಯರ ಅಮಿತ ಮಹಿಮಗೆ ಅಹೋರಾತ್ರಿಯಲಿ ಬಿಡದೆ ಪ ಸಿದ್ಧಾರ್ಧಿ ನಾಮ ಸಂವತ್ಸರದ ವೈಶಾಖ ಶುದ್ಧೇತರ ಪಕ್ಷ ಸಪ್ತಮಿಯಲಿ ವಿದ್ವತ್ಸಭಾ ಮಧ್ಯದಲಿ ರಾಮವ್ಯಾಸರ ಪದದ್ವಯವನೈದಿದ ಮಹಾಮಹಿಮರನ ಕಂಡು 1 ರಾಜವಳ್ಳಿ ಎಂಬ ಪುರದಿ ಕರುಣದಿ ಪಾರಿ ವ್ರಾಜಕಾಚಾರ್ಯ ವರವತಂಸ ಪಾದ ರಾಜೀವಯುಗಳ ಧೇನಿಸುತಿಪ್ಪರಿಗೆ ಕಲ್ಪ ಭೂಜದಂದದಿ ಬೇಡಿದಿಷ್ಟಾರ್ಥ ಕೊಡುವರಿಗೆ 2 ಶ್ರೀ ತುಂಗ ಭದ್ರಾ ತರಂಗಿಣೀ ತೀರದಲಿ ಪಾದ ಮೂಲದಲ್ಲಿ ಪ್ರೀತಿ ಪೂರ್ವಕವಾಗಿ ವಾಸವಾದರು ಜಗ ನ್ನಾಥ ವಿಠಲನ ಕಾರುಣ್ಯಪಾತ್ರರ ಕಂಡು 3
--------------
ಜಗನ್ನಾಥದಾಸರು
ನೆರೆನಂಬಿದವನೆ ಧನ್ಯಾ ಈ ಗುರುಪದ ಪ ನೆರೆನಂಬಿದವ ರಘತರಿವ ವೇದವ್ಯಾಸ ಕರ ಪಾದ ಅ.ಪ ವರಮಣಿಯೊಳು ಶಿರಿತನದಿಂದಲ್ಲಿ ಮೆರೆವ ನಾಯ ಕರ ಮಂದಿರದಿ ಜಾತರಾಗಿ ಪರಮ ಮಹಿಮರಾದ ಗುರು ರಘೋತ್ತಮರಿಂದ ಪರವಿದ್ಯೆಯನು ಪೊಂದಿ ಚರಿಸಿ ದಿಗಂತದಿ ವರವೇದ ವ್ಯಾಸರಿಂದ ತುರಿಯಾಶ್ರಮ ಪಡೆದು ಸಚ್ಚಿಷ್ಯರಿಂದÀ ಸಂತತ ಪ್ರವಚನ ಮಾಡುತಲಿ ಆನಂದ ತೀರ್ಥರ ಮತ ಶರಧಿಗೆ ಪೂರ್ಣ ಚಂದಿರನೆನಿ ಪರ ಪದ 1 ಯಾದವಾರ್ಯರಿಗೆ ಅಗಾಧ ಮಹಿಮರು ಈ ಪೂರ್ಣಬೋಧ ಗ್ರಂಥಾರ್ಥ ಗ್ರಂಥಗಳನ್ನು ಟೀಕಾ ಕೃ ಕೌವÀುುದಿಗಳನು ರಚಿಸಿದಂಥಾ ವಾದಿ ಮಾತಂಗ ಮೃಗಾಧಿಪರನ್ನು 2 ಕರೆದು ಶಿಷ್ಯರಿಗೆ ಹರಿ ಪಾದಂಗುಟದಿಂದ ಸುರನದಿಯನು ಸಾಕ್ಷಾ- ತ್ಕರಿಸಿ ತೋರಿಸಿದಂಥ ಗುರು ಕೃಷ್ಣದ್ವೈಪಾಯನ ತೀರ್ಥರಿಗೆ ಘನವಾದ ಮಹಿಮೆಯನಾ ಸುರತರು ಸಮ ಚರಣ 3 ವೃಂದಾವನದೆಡೆ ಒಂದು ಪ್ರದಕ್ಷಿಣಿ ವಂದನೆ ಮಾಡಲು ಮಂದನಾದರು ಪ್ರಾಜ್ಞನೆಂದು ಕರೆಸುವನು ವಂಧ್ಯೆಯಾದರು ಬಹುಕಂದರ ಪಡೆವಳುಸಂದೇಹವ್ಯಾಕಿಲ್ಲಿ ದೂರಮಾಡುತಲಿ ಆ ನಂದವ ಗರಿಯುವರ ಭಕ್ತರ ದುರಿತಾಂಧಕಾರಕ್ಕೆ ರವಿ ಯಂದದಲಿಪ್ಪರ 4 ವರಭೀಮಾತೀರದಿ ಪರಿಶೋಭಿಸುವ ಮಣಿ ಪುರದಿ ಪಂಡಿತ ಭೂಮಿ ಚರಣಾರಾಧಕರನು ಸುಮಂದಿರದಿ ಕುಳಿತು ನಿತ್ಯ ಮೂಲದಲಿ ಮೆರೆವ ಧೇನಿಸುತಿಪ್ಪ ಗುರುವೇದೇಶರ ಶುಭ ಚರಣ ಯುಗಲವ 5
--------------
ಕಾರ್ಪರ ನರಹರಿದಾಸರು