ನಿಲ್ಲು ಬಾರೊ ದಯಾನಿಧೆ ಪ
ನಿಲ್ಲು ಬಾರೋ ಸರಿಯಲ್ಲ ನಿನಗೆ ಲಕ್ಷ್ಮೀ
ವಲ್ಲಭ ಮನ್ಮನದಲಿ ಬಿಡದೆ ಬಂದು ಅ
ಅತಿ ಮೃದುವಾದ ಹೃತ್ಯತ ಪತ್ರಸದನದಿ ಶಾ
ಶ್ವತವಾಗಿ ಭವ್ಯ ಮೂರುತಿ ಭಕ್ತವತ್ಸಲ 1
ತನುಮನಧನದ ಚಿಂತೆಯ ಬಿಟ್ಟು ತ್ವತ್ಪದ
ವನರುಹ ಧೇನಿಪೆ ಮನುಮಥನಯ್ಯ 2
ಆಶೆಪುಟ್ಟಿತು ನಿನ್ನಲ್ಲೀ ಸಮಯದಲಿ ಪಾ
ರಾಶರವರದ ಪೂರೈಸು ಬಯಕೆಯ 3
ನಾನಾವ್ರತಂಗಳ ನಾನನುಕರಿಸಿದೆ ಶ್ರೀನಿಧಿ
ನಿನ್ನಂಘ್ರಿ ಕಾಣಬೇಕೆನುತಲಿ4
ಯಾತರ್ಯೋಚನೆ ಮನಸೋತ ಬಳಿಕ ಪುರು
ಹೂತವಂದಿತ ಜಗನ್ನಾಧವಿಠ್ಠಲರೇಯ 5