ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನ ಸಲಹುದೋ ರಂಗಾ ಎನ್ನ ಸಲಹು| ನಿನ್ನ ಚರಣ ಕಮಲದೋರಿ| ಗಮನ ರಂಗಾ ಪ ನಷ್ಟ ಪರಮ ಪತಿತ ಗತಿಯ|ಗೆಟ್ಟು ಅಜಮಿಳ ತನ್ನ| ಕಷ್ಟ ಬಡುವ ಕಾಲದಲ್ಲಿ ಸುತನ ಪೆಸರನು| ಮುಟ್ಟಿ ಕರಿಯೇ ತೃಪ್ತನಾಗಿ|ಅಷ್ಟರಿಂದ ಅವಗ ನಿನ್ನ| ಪಟ್ಟಣಕ ನೀ ಅಟ್ಟಿ ಗತಿಯ|ಕೊಟ್ಟು ಸಲುಹಿದೆ ರಂಗಾ 1 ಸಂಧಿಸಿ ಮಧ್ಯರಾತ್ರಿಯೊಳಗ|ಬಂದು ದೂರ್ವಾಸನ್ನವ ಬೇಡ| ಲಂದು ದೃಪದ ನಂದನೆ|ನಿನ್ನೆ ಸ್ಮರಿಸೆ ತ್ವರಿತದಿ| ಬಂದು ನಿಂದು ಬೇಡಿದುದನು|ಛಂದದಿಂದಲಿತ್ತು ದ್ವಿಜರಾಜ| ನಂದ ಬಿಡಿಸಿ ಐವರ ಮಾನ ಕುಂದಂತೆ ಕಾಯ್ದೆ ರಂಗಾ 2 ಐದು ವರುಷ ಹಸುಮಗನಾ|ಬೈದು ಮಲತಾಯಿ ಪೊರಗೆ| ಹಾಕಲಾಗ ಧೃವನು ನಿನ್ನ ಕುರಿತು ಧ್ಯಾನವಾ| ಗೈಯ್ಯಲಾಗಿ ಅಚಲ ಪದಕ|ಒಯ್ದು ಇಟ್ಟು ನೀನು ಅವನ| ಕಾಯ್ದೆ ಮಹಿಪತಿ ನಂದನೊಡೆಯನಾದ ದೇವ ರಂಗಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನೇನು ಬೇಕಯ್ಯ ಶ್ರೀ ಹರಿಯೆ ನಿನಗೇ ನೀನೆ ಗತಿಯೆಂದು ಸರ್ವಸ್ವವೊಪ್ಪಿಸುವೇ ಪ ತರಳನಾಗಿಹ ಧೃವನು ಘೋರ ತಪವಂಗೈಯ ಹರುಷದಿಂ ಬಾಲಕಗೆ ವರ ಪದವಿಯಿತ್ತೇ ಕರುಣಾಳು ಶ್ರೀ ಹರಿಯೇ ನಿಂನ ಮೆಚ್ಚಿಸಲಿಕ್ಕೆ ಉರುತರದ ತಪವು ಬೇಕೇನೊ ನಾನರಿಯೇ 1 ದೊರೆಯು ರುಕುಮುಂಗದನು ಯೇಕಾದಶೀವ್ರತವ ಸರಸದಿಂದಾಚರಿಸೆ ನಿಜಭಕ್ತಗೊಲಿದೇ ಕರುಣಾಳು ಶ್ರೀಹರಿಯ ನಿನ್ನ ಮೆಚ್ಚಿಸಲಿಕ್ಕೆ ಉರುತರದ ವ್ರತವು ಬೇಕೇನೊ ನಾನರಿಯೇ 2 ತರಳ ಪ್ರಲ್ಹಾದ ತಾ ಹರಿನಾಮ ಕೀರ್ತಿಸಲು ದುರುಳ ತಾತನ ಕೊಂದು ಕಂದನನು ಪೊರೆದೆ ಕರುಣಾಳು ಶ್ರೀ ಹರಿಯೆ ನಿಂನÀ ಮೆಚ್ಚಿಸಲಿಕ್ಕೆ ಉರುತರದ ಕೀರ್ತನೆಯು ಬೇಕೋ ನಾ ನಾನರಿಯೇ 3 ಭರದಿ ದುಶ್ಯಾಸನನು ಮಾನವಂ ಕಳಯುತಿರೆ ಸರಳೆಗೇ ನೀನೊಲಿದು ಅಕ್ಷಯವನಿತ್ತೇ ಕರುಣಾಳು ಶ್ರೀಹರಿಯೆ ನಿನ್ನ ಮೆಚ್ಚಿಸಲಿಕ್ಕೆ ಉರುತರದ ಸ್ತೋತ್ರಗಳು ಬೇಕೋ ನಾನರಿಯೇ4 ಧರಣಿಸುತೆ ಜಾನ್ಹಕಿಯೆ ಹುಡುಕಲ್ಕಿ ವಿಕ್ರಮದಿ ಶರಧಿಯನು ದಾಟಿದಗೆ ಭರದಿಂದಲೊಲಿದೇ ಕರುಣಾಳು ಶ್ರೀಹರಿಯ ನಿನ್ನ ಮೆಚ್ಚಿಸಲಿಕ್ಕೆ ಉರುತರದ ದಾಸ್ಯತ್ವ ಬೇಕೋ ನಾನರಿಯೇ 5 ನಿರುತದಾಸರು ನಿನ್ನ ಸೇವೆಯನು ಮಾಡಲ್ಕೆ ಕರುಣದಿಂ ದಾಸರಿಗೆ ಪ್ರತ್ಯಕ್ಷನಾದೇ ಕರುಣಾಳು ಶ್ರೀ ಹರಿಯ ನಿನ್ನ ಮೆಚ್ಚಿಸಲಿಕ್ಕೆ ಉರುತರದ ಸೇವೆ ಬೇಕೇನೊ ನಾನರಿಯೇ 6 ವರ ದುರ್ವಾಪುರದಲ್ಲಿನಿತ್ತು ಮೆರೆಯುವಿಯೆಂದು ಸಿರಿ ಚನ್ನಕೇಶವನೆ ಪರಮಾತ್ಮನಂದೂ ಕರುಣಾಳು ಶ್ರೀ ಹರಿಯೆ ನಿನ್ನ ನಂಬುತಲಿಂದು ಮರೆಹೊಕ್ಕೆ ಕಾಯೋ ಶ್ರೀ ಈಶ ಸರ್ವೇಶಾ 7
--------------
ಕರ್ಕಿ ಕೇಶವದಾಸ