ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರಿಯನೆರಿರೇ ಮುರಾರಿಗೆ ಪ ಹಂಸವಾಹನ ಶಿವರಂಶಗಳನು ಕೂಡಿಕಂಸ ಶಾಸ್ತ್ರವ ತ್ರಿವಂಶ ಬೆಳೆಸಿದಾ 1 ಗೋಪಿ ಪುತ್ರನ ಪಾಡಿ2 ಕರಿಪುದಸರಾಧ್ವರ ಧನುರ್ದನು ತನ್ನಕರದಿ ಮುಟ್ಟುತ ಮೃತ ತರುಳನ ಕಾದಾ 3 ರಾಮನಾಮದಿ ಭೂಪ ಧಾಮದೊಳಗೆ ಪುಟ್ಟಿಕಾಮಿನಿ ಸಹ ಕೂತ ಪ್ರೇಮ ಪುರುಷಗೆ 4 ಕರ ಕರದೊಳು ಸುರಭಿ ಕುಸುಮವೆತ್ತಿಪರಮ ಪುರುಷ ವಿಪತ್ ಪರಿಹರಿಸಿದನು 5 ಕರ ಕತ್ತರಿಸುವೆನೆಂಬೋ-ನ್ಮತ್ತನಾಸ್ತ್ರವ ಕರೆ ಕಿತ್ತು ರಕ್ಷಿಸಿದಾ 6 ಪೇಸಿಯಿಂದಲಿ ಪುಂಸ್ತ್ರೀ ಕೂಸುಗಳನೆ ಮಾಡಿತೋಷಿಸಿದನು ಬದರೀಶ ಮೌನಿಜನು 7 ಇಂಥ ಮಹಿಮೆಗಳಾನಂತ ಮಾಡಿದ ಲಕ್ಷ್ಮೀ-ಕಾಂತಗಬ್ದಾಪತ್ತಿ ಶಾಂತಿ ಮಾಡುವುದೇ 8 ಸುಂದರ ಭೂಷಣಗಳಿಂದ ಶೋಭಿಪ ಬಾಲಇಂದಿರೇಶನ ಕೃಪಾ ಪೊಂದಿ ಸುಖಿಸುತಿರೆಕುಂದಣದಾರತಿ ನಿಂದು ಬೆಳಗಿರೆ 9
--------------
ಇಂದಿರೇಶರು
ಕರುಣವ ಮಾಡೊ ಶರಣರ ಪ್ರೇಮಿಕರುಣವ ಮಾಡೊ ಅರುಣನಿಭನೆ ಗುರು | ಕರುಣವ ಮಾಡೊ ಪ ಸುರ ತರುವಿನ ಅನುಸರಿಸಿದ ಮನುಜಗೆ ಮೃಷ್ಟಾನ್ನದ ಬರವೆಸುರನದಿ ಅನುಸರಿಸಿದ ಮನುಜಗೆ ಘನ ತೃಷಿಯ ಬಾಧೆ 1 ಕಾಮಧೇನು ತನ್ನ ಧಾಮದೊಳಗೆಯಿರೆ ಸೀಮೆ ಆಳುವರಾಸೆರಾಮನ ಪದಯುಗ ತಾಮರಸವನಂಬೆ ಪಾಮರರಂಜಿಕೆಯೆ 2 ವ್ರಜತಾಧಿಪ ವೇಣುಗೋಪಾಲ ವಿಠಲನ್ನ ನಿಜವಾಗಿ ಸ್ಮರಿಸುವರಕುಜನ ದಲ್ಲಣ ಗುರು ವಿಜಯದಾಸರೆ ಸ್ಮರಿಸುವರೆಯಿವರ3
--------------
ವೇಣುಗೋಪಾಲದಾಸರು
ಕಾಯೆ ಕರುಣಾಂಬುಧಿಯೆ ತೋಯಜನಯನೆ ಪ ಕಾಯೆ ಕರುಣಿ ಗಿರಿರಾಯನ ಪಟ್ಟದ ಜಾಯೆ ಭವದಲಿ ನೋಯಗೊಡದಲೆನ್ನ ಅ.ಪ ಅಂಬುಜಾಂಬಕೆ ಅಂಭ್ರಣಿ ಸುಗುಣ ಸನ್ಮಣಿ ಕಂಬುಚಕ್ರಾಂಕಿತಪಾಣಿ ಅಂಬೆ ನಿನ್ನಯ ಪಾದಾಂಬುಜ ನಂಬಿದೆ ಬಿಂಬನ ಎನ ಹೃದಯಾಂಬರದಲಿ ತೋರೆ 1 ಕಾಮಿತಾರ್ಥ ಪ್ರದಾತೆ ಜಗದೊಳಗೆ ಖ್ಯಾತೆ ಕಾಮಿತ ಸಲಿಸೆನ್ನ ಮಾತೆ ಪ್ರೇಮದಿ ನಿನ್ನನು ನೇಮದಿ ಭಜಿಪೆನ್ನ ಧಾಮದೊಳಗೆ ನೀ ಕ್ಷೇಮದಿ ನಿಲಿಸೀ 2 ದೂತಜನಕತಿ ಪ್ರೀತೆ ಈ ಜಗಕೆ ಮಾತೆ ಸೀತೆ ಪಾಲ್ಗಡಲಾ ಸಂಭೂತೆ ದಾತ ಗುರುಜಗನ್ನಾಥ ವಿಠಲಗೆ ಪ್ರೀತ ಸತಿಯೆ ಸುಖವ್ರಾತವ ಸಲಿಸಿ ನೀ 3
--------------
ಗುರುಜಗನ್ನಾಥದಾಸರು
ಪೇಳುವೆ ಮನವೆ ನಿನಗೊಂದು ಕುಳಿತು ಲಾಲಿಪುದು ಮುಕ್ತಿಗೆ ಹಾದಿ ಎಂದು ಪ ಹರಿಯ ಚರಣಾಬ್ಜ್ಬಕೆ ಎರಗು ಬಡ ವರನ ಕಂಡರೆ ಅಕಟಾ ಎಂದು ಮರಗು ಹರಿ ಭಕುತಿಗೆ ನೀನೆ ಕರಗು ಇಹ ಪರದಲ್ಲಿ ಉತ್ತಮ ಯೆಂದೆನಿಸಿ ತಿರುಗು 1 ಅಹಂಕಾರ ಮಮಕಾರ ಬಿಟ್ಟು ಅಂಬು ರುಹಲೋಚನನ ಸುಮತವನ್ನೆ ತೊಟ್ಟು ಕುಹಕ ಮತಿಗಳನ್ನು ಬಿಟ್ಟು ಗುರು ದ್ರೋಹಿಗಳಾದವರ ಹೃದಯವÀ ಮೆಟ್ಟು 2 ಅಲ್ಪ ಬುದ್ಧಿಗಳನ್ನು ಮಾಣು ಒಂದು ಸ್ವಲ್ಪವಾದರು ಜ್ಞಾನದ ಮಾರ್ಗ ಕಾಣು ಬಲ್ಪಂಥದಲಿ ಬಾಹದೇನು ಬಿಡು ಅಲ್ಪಗಳ ಸಂಗ ಎಂದು ಸಾರಿದೆನು 3 ಸ್ವಾಮಿಯ ಪಾದವ ನೋಡು ನಿನ್ನ ಕಾಮ ಕ್ರೋಧಗಳೆಲ್ಲ ಕಳೆದು ಈಡಾಡು ನಾಮ ಕೀರ್ತನೆಗಳನ್ನು ಪಾಡು ತ್ರಿ ಧಾಮದೊಳಗೆ ಒಂದು ಇಂಬನೆ ಬೇಡು 4 ಎಚ್ಚತ್ತು ತಿಳಿದುಕೋ ಸೊಲ್ಲಾ ನಾನು ಮುಚ್ಚುಮೊರಿಲ್ಲದೆ ಪೇಳಿದೆನಲ್ಲಾ ಅಚ್ಚುತ ವಿಜಯವಿಠ್ಠಲನಲ್ಲದಿಲ್ಲ 5
--------------
ವಿಜಯದಾಸ