ಪರತತ್ವ ವಿಠಲನೇ | ಪೊರೆಯ ಬೇಕಿವಳಾ ಪ
ದುರಿತ ರಾಶಿಯ ತರಿದು | ಕರಪಿಡಿಯ ಬೇಕೋ ಅ.ಪ.
ಕಾಲ ಕಾಲ ರೂಪಾತ್ಮಾ 1
ಗುರು ಕರುಣವಿಲ್ಲದಲೆ | ಹರಿಯೊಲಿಯನೆಂದೆಂಬಪರಮರಾಹಸ್ಯವನು | ಅರುಹಿ ಪ್ರೀತಿಯಲೀಕರುಣಿಸೋ ತವನಾಮ | ಸ್ಮರಣೆ ಸುಖ ಸಖ್ಯವನುಮರುತಾಂತರಾತ್ಮ ಹರಿ | ದುರಿತವನದಾವಾ 2
ಹರಿದಾಸ್ಯವತಿ ಕಷ್ಟ | ವಿರುವುದೆಂದರಿತಾಗ್ಯುಪರಿ ಪ್ರಶ್ನೆ ಭಕ್ತಿಯಲಿ | ಮೊರೆಯನಿಡುತಿರುವಾ |ತರಳೆ ಗಂಕಿತ ವಿತ್ತೆ | ವರ ಸ್ವಪ್ನ ಸೂಚ್ಯದಲಿಹರಿಯೆ ನಿನ್ನಾದೇಶ | ವಿರುವುದೆಂದರಿತು 3
ಪರಿ ಪರಿಯಗೈಯ್ಯುವಲಿಹರಿಯೆ ತವ ಸಂಸ್ಮರಣೆ | ಮರೆಯದಂತಿರಿಸೋ 4
ಜೀವೇಶ ಸನ್ನುತನೆ | ಜೀವರಂತರ್ಯಾಮಿಗೋವತ್ಸದನಿ ಗಾವು | ಧಾನಿಸೂವಂತೇ |ಕೈವಲ್ಯ ಪ್ರದ ಗುರೂ | ಗೋವಿಂದ ವಿಠ್ಠಲನೆಭಾವುಕಳ ಮಾಡಿವಳ | ನೀವೊಲಿಯ ಬೇಕೋ 5