ತಿರುಮಲೇಶವಿಠಲಾ | ಪೊರೆಯ ಬೇಕಿವಳಾ ಪ
ನಿರುತ ನಿನ್ನಯ ನಾಮ | ಸ್ಮರಣೆ ಸುಖ ಕೊಡುತಾ ಅ.ಪ.
ಸ್ವಪ್ನದಲಿ ತವರೂಪ | ಕನ್ಯೆತಾ ಕಾಣುತ್ತಾಉನ್ನಂತ ಹರ್ಷದಲಿ | ಭಿನ್ನವಿಸಿ ಇಹಳೋ |ಪನ್ನಗಾರಿಧ್ವಜನೆ | ಮನ್ನಿಸುತ ಮನ್ಮಾತಕನ್ಯೆಗಭಯದನಾಗಿ | ನನ್ನೆಯಿಂ ಸಲಹೋ 1
ಶೂನ್ಯ | ಭೋಧಾತ್ಮ ಶ್ರೀ ಹರಿಯೆಭೇದಪಂಚಕ ವರುಹಿ | ಮಧ್ವಮತ ದೀಕ್ಷಾ |ಸಾಧಿಸುವುದಿವಳಲ್ಲಿ | ಹೇದಯಾಂಬುದೆ ಪೂರ್ಣಭೋದಮುನಿಯ ಸನ್ನುತನೆ | ವೇದಾಂತ ವೇದ್ಯಾ 2
ವ್ರಾತ ಸಮತೆಲಿಯುಂಬಭೂತಿಕರುಣಿಸು ಹರಿಯೆ | ವಾತಾಂತರಾತ್ಮಾ |ಧಾತಾಂಡ ಸೃಜಿಸಿ ಹರಿ | ಓತ ಪ್ರೋತನು ಇರಲುಮಾತನೊಪ್ಪಿಸೆ ನಿನಗೆ | ಏತರವ ನಾನೂ 3
ಹರಿಗುರೂ ಸದ್ಭಕ್ತಿ | ಹಿರಿಯರಾ ಸತ್ಸೇವೆಕರುಣಿಸುತ ಸಾಧನದ | ವರಮಾರ್ಗ ತೋರೋ |ಶರಣಜನ ವಾತ್ಸಲ್ಯ | ಬಿರಿದು ಪೊತ್ತಾಮೇಲೆಕರುಣಾಬ್ಧಿಪೂರ್ಣೆಂದು | ಕರಪಿಡಿಯೊ ಇವಳಾ 4
ಸಾಮಗಾನವಿಲೋಲ | ಭಾಮೆರುಕ್ಷ್ಮಿಣಿಲೋಲಸಾಮಾಜಾವರವರದ | ಭೂಮಗುಣಪೂರ್ಣ |ಕಾಮಾರಿಸನ್ನುತನೆ | ಕಾಮಿತಪ್ರದನಾಗೊಕಾಮನಯ್ಯನೆ ಗುರು | ಗೋವಿಂದ ವಿಠಲಾ 5