ಸ್ಕಂದಗುರು ಸ್ಕಂದಗುರು ಸುರ-
ವೃಂದ ಮುನಿಜನರು ವಂದಿಪರುಪ.
ಮಂದರಧರ ಗೋವಿಂದನ ಶರಣರ
ಸಂದೋಹಕಾವ ವೃಂದಾರಕತರುಅ.ಪ.
ತಾಮಸರು ದ್ವೇಷ ಬೇಡುವರು
ಕಾಮಿತ ಕೇಳ್ವರು ರಾಜಸರು
ಸ್ವಾಮಿ ಶ್ರೀಹರಿಯ ಭಕ್ತಿಜ್ಞಾನವ
ಪ್ರೇಮದಿ ಕೇಳ್ವರು ಸಾತ್ವಿಕರು1
ವಿಘ್ನಹರನು ನಿನ್ನಗ್ರಜನು ವಿಬು-
ಧಾಗ್ರಣಿಯೆನಿಸುವೆಯೊ ನೀನು
ಉಗ್ರ ತ್ರಿಯಂಬಕತಾತನು ಖ್ಯಾತನು
ದುರ್ಗಾದೇವಿಯೆ ಜನನಿ ನಿರುಪಮಳು2
ತಾರಕಾಂತಕ ನಿಶ್ಯೋಕ ಲಕ್ಷ್ಮೀ-
ನಾರಾಯಣನಿಗೆ ಸಖ
ಭೂರಿನಿಗಮಾರ್ಥಸಾರ ಕೋವಿದನೆ
ಧೀರನೆ ವೀರ ಮಹಾರಣಶೂರನೆ3