ಮಾವಿನಕೆರೆ 8
ರಂಗಗಿರಿಯನೇರಿಬರುವಾ ತಂಗಿ ಬರುವೆಯಾ ಪ
ಅಂಗನೆಯರು ಕುಣಿದು ಮಣಿವ ಸಂಗದೊಳಿರುವಾ ಅ.ಪ
ಅವನ ಪಾದದ ನಡಗೆ ಚಂದ | ಧವಳಹಂಸ ಮನಕಾನಂದಾ
ಅವನ ನಲಿವು ನವಿಲಿಗಂದ | ಅವನ ಉಲಿವು ಕೋಗಿಲೆಯಂದಾ 1
ಅವನ ಕರದ ವೇಣುಗಾನ ಭುವನಕೆಲ್ಲ ಅಮೃತಪಾನ
ಅವನ ನಗೆಯ ತೋರ್ಪ ಭವವ ಕಳೆವ ಪುಣ್ಯಸದನ 2
ವಾರಿವಾಹ ವರ್ಣದವನು ಹಾರಪದಕ ಧರಿಸಿದವನು
ಚಾರುಸುಂದರ ಪೀತಾಂಬರನು 3
ಹಿಂದೆ ನೀನು ನೋಡಲಿಲ್ಲ ಮುಂದೆ ನಾನು ಕರೆವುದಿಲ್ಲ
ಇಂದು ಬಂದೆಬರುವನಲ್ಲ ಸಂದೇಹ ಎಳ್ಳಷ್ಟೂ ಇಲ್ಲ 4
ಬೊಮ್ಮನಪ್ಪನವನೆ ನೀರೆ ನಮ್ಮ ಮಾಂಗಿರಿಗೊಪ್ಪುವ ತಾರೆ
ಹೊಮ್ಮಿದಾ ಸಂಪ್ರೀತಿಯ ಬೀರೆ ಸುಮ್ಮನೆ ನನ್ನೊಡನೆ ಬಾರೆ 5