ನವ ಸುವರ್ಣದಾ ಪರಿಯ ಹೊಳೆವ ಕೆಂಜೆಡೆಯಲೀ
ದಿವಿಜ ನದಿಯ ನಿರುತ ಧರಿಸೀ ಮುಂದಲಿಯ ಲೀ
ತವ ಶೀತಾಂಶೂನಾ ಕಳೆಯ ತಿಲಕಾ ಮಾಡಿ ಮೆರೆವಾ
ಭವ ಭಯ ನಿವಾರಿಸಿ ಹೊರೆವಾ 1
ಮದನ ನಳಿದಾ ಭಾಲನಯನಾ
ಸುವಿಧ್ಯದಿ ಮೊರೆಹುಗಲು ವಲುವಾನಂದನಯನಾ
ಫಣಿ ಭೂಷಣ ಮಾರಿ ಮೆರೆ ವಾ
ಭವ ಭಯ ನಿವಾರಿಸಿ ಹೊರೆ ವಾ 2
ಠವ ಠವಿಸುವ ಮುನಿಯ ಮನೋಹರ ಪಂಚ ವದನಾ
ರವಿ ಕೋಟಿ ತೇಜದಿರುವಾಘನ ಕಾರುಣ್ಯ ಸದನಾ
ಭವಾನೀ ಯಡದ ತೋಡಿಯಲಿರಿಸೀ ಕೊಂಡು ಮೆರೆವಾ
ಭವ ಭಯ ನಿವಾರಿಸಿ ಹೊರೆವಾ 3
ಧವಲೀಸುತಿಹ ತನು ರೂಚಯ ಕರ್ಪೂರ ಪರಿಯಾ
ತವಕದಿಂದುಟ್ಟಾ ಉಡುಗಿ ಹರನಾ ಚರ್ಮ ಕರಿಯಾ
ಸವಿಭೂತಿಯ ಸುಧರಿಸಿ ತಪವೇಷದಿ ಮೆರೆ ವಾ
ಭವ ಭಯ ನಿವಾರಿಸಿ ಹೊರೆವಾ 4
ಭುವನತೃಯದಾ ಸುರನರೋರಗ ಪೂಜಿಸುತಿಹಾ
ಪಾದ ದ್ವಿತೀಯಾ
ಅವಿನಾವಾ ದೇವರ ಜನಗಿರಿ ವಾಸವಿ ಮೆರೆ ವಾ
ಭವ ಭಯ ನಿವಾರಿಸಿ ಹೊರೆ ವಾ 5
ತ್ರಿವಿಧ ತಾಪವಾಹರಿಸುವದು ಹರಯಂದ ಭರವಿದೀ
ಭವಯನ್ನ ಲಾಗಾ ಸುಖಗರೆವ ಸಾನಂದ ವರದೀ
ಭವ ಭಯ ನಿವಾರಿಸಿ ಹೊರೆ ವಾ 6
ಸವಾರೀಧರನಾವರಣದಿರುವಾ ಕಪ್ಪುಗೋರಳಾ
ತ್ರಿವಿಷ್ಟಾಪರಿಯಾ ಪದವ ಮುನಿವಾ ತ್ರಿಶೂಲ ಸರಳಾ
ಕವಿಬೋಧಿಸುವಾ ಡುವರ ಸೂತ್ರದ ಕೈಯ್ಯಾ ಮೆರೆ ವಾ
ಭವ ಭಯ ನಿವಾರಿಸಿ ಹೊರೆ ವಾ 7
ಶಿವಷ್ಟಕವನು ಹೃದಯ ಪತ್ರ ಮ್ಯಾಲ ಬರವಾ
ಅವನಿಷ್ಟಾರ್ಥವಾ ಕುಡುತ ದುಷ್ಕøತ ಮೂಲಹರಿವಾ
ಅವಿದ್ಯೋಡಿ ಸುವಾ ಗುರು ಮಹಿಪತಿಯಾಗಿ ಮೆರೆ ವಾ
ಭವ ಭಯ ನಿವಾರಿಸಿ ಹೊರೆ ವಾ 8