ಜಯದೇವ ಜಯದೇವ ಜಯ ಶಂಕರ ಮೂರ್ತಿ
ಜಯ ಜಯವೆಂದು ಬೆಳಗುವೆ ಮನದಲಿ ಭಾವಾರ್ತಿ ಪ
ಸಾಧನ ಕೆಂಜೆಡೆಯೊಳಗೆ ಜ್ಞಾನಗಂಗೆಯ ನಿಲಿಸಿ
ಸಾದರದಲಿ ಚಿಜ್ಯೋತಿಯ ಚಂದ್ರನ ಕಳೆಧರಿಸಿ
ನಾದಬಿಂದು ಕಳಾನಯನ ತ್ರಯವೆರಿಸಿ
ಮೋದಿಪೆ ಅಪರೋಕ್ಷನುಭವ ಮುಖದೆಳೆ ನಗೆಬಳಿಸಿ 1
ಧವಲಾಂಗದಿ ಸಲೆ ಶುದ್ಧ ಸತ್ವದ ಶೋಧಿಸಲಿ
ತವಕದಿ ಶಮದಮವೆಂಬಾ ಬಾಹುದ್ವಯದಲಿ
ಅವಯವದಲಿ ನಿಜಭಕ್ತಿ ಶೇಷಾಭರಣದಲಿ
ಶಿವತಾನೆಂದು ಬೆಳಗುವೆ ಸಹಜಾನಂದದಲಿ 2
ವಿವೇಕ ವೈರಾಗ್ಯದಾ ಕರಚರ್ಮಾಂಬರಣಾ
ಅವನಿಲಿಸುರನರಪೂಜಿತ ಪಾವನಶ್ರೀ ಚರಣಾ
ಕುವಲಯ ಲೋಚನ ಶಾಂತಿಯ ಪಾರ್ವತಿ ಸಹಕರುಣಾ
ಭವತಾರಕ ಗುರುಮಹಿಪತಿ ಪ್ರಭುದೀನೋದ್ದಾರಣಾ 3