ಸಾಕು ಸಾಕು ಸ್ವಾಮಿ ಸಂಸಾರವು ಪ
ಸಾಕಿದರೊಳು ಲೇಶ ಸೌಖ್ಯವು ಕಾಣೆನು
ಬೇಕು ನಿನ್ನ ಪಾದಭಜನೆ ನಿರಂತರ ಅ.ಪ
ಚತುರಶೀತಿ ಲಕ್ಷಯೋನಿಗಳಲಿ ಪು-
ಟ್ಟುತ ಬೆಳೆಯುತ ಮೃತಿ ಪೊಂದುವ ಕಷ್ಟವು 1
ಮಾಂಸರಕ್ತ ಪೂರಿತ ಕೂಪದಿ ನವ-
ಮಾಸ ಮಾತೃಗರ್ಭಯಾತನೆಯಿನ್ನು 2
ಬಾಲರ ಕೂಡುತ ಬಾಲ್ಯದಲ್ಲಿ ಚೆಂಡು
ಗೋಲಿ ಗಜ್ಜುಗಗಳಾಡಿದ ಆಟವು 3
ಗರ್ವದಿಂದ ಮೈಮರೆತು ತಿರುಗುವುದು 4
ಸೇರಿ ಇರುವ ಕೌಮಾರಾವಸ್ಥೆಯು 5
ಕಿವಿಗಳು ಕೇಳದು ಕಣ್ಕಾಣದು ಬಾಂ-
ಧವರಧೀನದಲಿ ಬಾಳುವ ಕಷ್ಟವು 6
ಮರಣವಾದ ಮೇಲೆ ನರಕವು ಸ್ವರ್ಗವು
ಧರಣಿಯಲಿ ಪುಟ್ಟುವುದೋ ತಿಳಿಯದು 7
ಎಂತಾದರು ನಿನ್ನವರೊಳಿಡು ಸದಾ
ಪಂಥವೆ ದೀನರ ಮೇಲೆ ದಯಾನಿಧೆ 8
ಭಾಗ್ಯವಲ್ಲಿ ಹನುಮಂತನೊಡೆಯ ಶರ-
ಣಾಗವÀತ್ಸಲ ಗುರುರಾಮವಿಠಲ9