ಕಂಡೆ ಕೇಶವನನ್ನು ದೂರ್ವಾಪುರದ ಪುಂಡರೀಕಾಕ್ಷನನ್ನು ಪ
ಶಂಖವ ಚಕ್ರವ ಗದೆಯ ಪದ್ಮವ ನಿತ್ಯ
ಶಂಕೆಯಿಲ್ಲದೆ ನಾಲ್ಕು ಕರದೊಳು ಪಿಡಿದಾ
ಪಂಕಜ ಲೋಚನ ಪರಮ ಪಾವನನನ್ನು
ವೈರಿ ಮಾಧವನನ್ನು 1
ಕಾಲಿಗುಂದುಗೆ ಗೆಜ್ಜೆ ಮೇಲಾದ ಭಾಪುರಿ
ನೀಲ ಮೇಘಶ್ಯಾಮ ತ್ರಿಗುಣ ರಹಿತನ
ತೊಳೆವ ರತ್ನಾಭರಣದಿಂದ ಪದ್ಮ ದಂಡ
ಚಲುವಿನಿಂದಲೆ ಊರಿ ನಿತ್ತ ಸ್ವಾಮಿಯನು 2
ಭಜಕರ ಸಲಹುವ ಭಕ್ತವತ್ಸಲನ
ಸುಜನರ ಪೊರೆಯುವ ಶ್ರೀಧರನ
ಅಜನನ್ನು ಪಡೆದಿಂಹ ಮುರಲೀಧರನ
ಭಜಕರ ಮಧ್ಯದಿ ಮೆರೆವ ಕೇಶವನ 3