ಮಾತಿನೋಳ್ಮಾತಿಲ್ಲದ ಪಾತಕಜನಜತೆ
ಜನ್ಮಕೆ ಮಾಡಬೇಡಿರಪ್ಪ ಪ
ನೀತಿಗಡಕ ಮಹಕೋಟಿ ಕುಹಕರ ಸಂಗ
ಕೊಂಡ ಕಾಣಿರಪ್ಪ ಅ.ಪ
ಬಣಗು ಬಿನುಗರ ತಳ್ಳಿ
ಫಣಿಪನ ಸಹವಾಸ ಕೇಳಿರಪ್ಪ
ಅಣಕವಾಡುತ ಅನ್ಯಜನಸುದ್ದ್ಯೋಳ್ದಿನಗಳೆವ
ಶುನಕ ಜನಮಿಗಳನೊದೆಯಿರಪ್ಪ1
ಚಲನಚಿತ್ತದ ಬಲುಹೊಲೆಮತಿಗಳ
ಸಲಿಗೇಳೇಳು ಜನ್ಮಕೆ ಬೇಡಿರಪ್ಪ
ವಿಲಸಿತ ನಡೆನುಡಿ ತಿಳಿಯದದುರುಳರ
ಗೆಳೆತನ ಕಡೆತನಕ ಬಿಡಿರಪ್ಪ 2
ಧರ್ಮಗೆಟ್ಟು ದುಷ್ಕರ್ಮದುರುಳವ
ದುರ್ಮದ ಬಿಟ್ಟು ದೂರಾಗಿರಪ್ಪ
ನಿರ್ಮಲಸುಖ ನಿಜ ಮರ್ಮನವರಿಯದ
ಧರ್ಮಿಗಳೆದೆಯನು ತುಳಿಯಿರಪ್ಪ 3
ಸತ್ಯಸನ್ಮಾರ್ಗವ ಮರ್ತ ಅಸತ್ಯರ
ನೆತ್ತಿಮೇಲೆ ಹೆಜ್ಜಿಡಿರಪ್ಪ
ನಿತ್ಯಮುಕ್ತಿ ಸುಖ ಗುರ್ತರಿಯದೆ ಯಮ
ಮೃತ್ಯುವಶವ ಗೋಷ್ಠಿ ಬಿಡಿರೆಪ್ಪ 4
ಮರವೆ ಮಾಯಿಗಳ
ಚರಣದಿ ಮುಟ್ಟಿದಿರಪ್ಪ
ಪರಮ ಶ್ರೀರಾಮಪಾದ ಮರೆದ ದುರಾತ್ಮರ
ದರುಶನ ಕನಸಿನೋಳ್ಬೇಡಿರಪ್ಪ 5