ನೀನೆ ಅನಾಥನಾಗಿರಲು ಅನ್ಯರಿಗೆ
ಏನು ದಾನವ ನೀ ಮಾಡುವಿಯೊ ಪ
ಜ್ಞಾನಪೂರ್ಣ ನೀನೆಂದು ಅರಿತು ನಿನ್ನ
ಜ್ಞಾನಲೇಶವನು ಯಾಚಿಸುವೆ ಅ.ಪ
ಯಾರು ನಿನ್ನ ತಂದೆ ಯಾರು ನಿನ್ನ ತಾಯಿ
ತೋರೆಲೊ ಈರೇಳು ಭುವನದಲಿ
ಊರೊಳು ವಾಸಕೆ ಗೃಹವನು ಕಾಣದೆ
ವಾರಿಧಿಯೊಳು ನೀನಡಗಿದೆಯೊ ರಂಗ 1
ಎಡಬಿಡದಿಹ ನಿನ್ನ ಮಡದಿಯ ಬಯಸದೆ
ಪಡೆದೆಯೊ ನಾಭಿಯೊಳ್ನಾಲ್ಮುಗನ
ಅಡಿಯಾಕಾಶವ ಕಾಣದ ಇಂತಹ
ದುಡುಕಿನ ಲೋಕೋತ್ತರ ಪುರುಷ 2
ಪೆತ್ತುದನೆಲ್ಲವ ತುತ್ತು ಮಾಡುವುದು
ಎತ್ತರ ನಡತೆಯೊ ನಾ ಕಾಣೆ
ಪುತ್ಥಲಿ ಗೊಂಬೆಗಳಂದದಿ ಎಲ್ಲರ
ಸುತ್ತಿಸುತಿಹೆ ಪುರುಷೋತ್ತಮನೆ 3
ಚಂಚಲಳಾದÀ ಮಡದಿಯು ನಿನ್ನನÀು
ವಂಚಿಪಳೆನ್ನುವ ಭಯದಿಂದ
ಹೊಂಚು ಕಾಯಲು ನಿನ್ನ ಹೃದಯದಲ್ಲಿ ಪೊತ್ತು
ಸಂಚರಿಸುವೆ ವಿಲಕ್ಷಣ ಪುರುಷ 4
ಅಣುವಿನೊಳಗೆ ಅಣು ಮಹತಿನೊಳಗೆ ಮಹ
ತೆನಿಪ ವಿರೋಧ ಧರ್ಮಕೆ ಧರ್ಮಿ
ಎನ್ನಿಪ ನಿನ್ನಯ ಗುಣವರಿಯಲು ಸಂತತ
ಸುಜನ ಪ್ರಸನ್ನ 5