ಸುಖಖರ ನೀನೆನ್ನುತಾ ಸೂರಿಗಳು ಭಜಿಸುವರೊ ನಿನ್ನ ಪ
ಭವಭಯಗಳನೀಡಾಡುತ ಪಾಪರಹಿತರಾಗಿಹರು ಅ.ಪ
ಭೂತದಯೆ ಪಶ್ಚಾತ್ತಾಪವಿಖ್ಯಾತಿಯಶೋದಾನ
ನೀತಿಮನಃ ಪ್ರೀತಿಧ್ಯಾನ ನಿತ್ಯಾನುಸಂಧಾನ
ಶ್ರೀ ತರುಣಿವರ ಪ್ರಾಣಿ ವ್ರಾತಗಳಿಗೆ ಕರ್ತನು ಯಂ
ದಾತುರವಿಲ್ಲದೆ ಸರ್ವದ ಜಾತಿ ಧರ್ಮಾಚಾರದಲ್ಲಿ 1
ತನ್ನಂತಿತರರ ನೋಡುತ ಮನ್ನಣೆಯಲಿ ಸತತ
ನನ್ನದು ನಾನೆಂಬುದ ಬಿಟ್ಟನ್ಯರ ನಿಂದಿಸದಲೆ ಹರಿ
ನಿನ್ನಾಜ್ಞೆಯೊಳಾದುದೆಲ್ಲ ನಿನಗೆ ಸಮರ್ಪಣೆಗೈಯ್ಯುತಾ 2
ಮತಿಗೆಡದೆ ಎಚ್ಚರಿಕೆಯಿಂ ಸುಮಾರ್ಗದಿ ಸಮ್ಮುದದಿ
ಪ್ರತಿ ದಿನದಲಿ ಶೃತಿ ಸ್ಮøತಿ ಸಂಮತದಿ ಸತ್ಸಂಗದಿ ಸೀತಾ-
ಪತಿ ಗುರುರಾಮ ವಿಠಲ ಯಂದತಿಶಯದಲಿ ಚಿಂತಿಸುತ3