ನಾರಾಯಣ ರಕ್ಷಿಸೊ ನಮ್ಮನು ಲಕ್ಷ್ಮೀನಾರಾಯಣ ರಕ್ಷಿಸೋ ಪ
ಭವ ದೂರ ನಿತ್ಯೋದಾರ ಕರುಣದಿ ಅ.ಪ.
ಶ್ರೀಶ ನಿನ್ನರ್ಚಿಸದೆ ಶ್ರೇಯಸ್ಸುಖದಾಶಯನೇ ತೊರೆದೆ
ಕಳತ್ರ ನಿವೇಶ ತನುಜ ಮಾಯಾ
ನಿಖಿಲಸುರೇಶ ಕಮಲ
ಭವ ಭಯ
ಪಾಶ ಹರಪರಮೇಶ ವಂದಿತ||ನಾರಾಯಣ|| 1
ದೇಹಾಭಿಮಾನದಲ್ಲಿ ತೀವಿದಭೂತ ದ್ರೊಹವನಾಚರಿಸುತಲಿ
ಸಿಲುಕಿ ದಾಸೋಹಮೆನ್ನದೆ ದೈವ
ವಿದೇಹ ಜಾವರಿಗೂಹನೋಚಿತದೇಹ ವಿಜಿತವಿದೇಹ
ಖಗವರವಾಹ ಶುಭಪರಿವಾಹ ನಿಖಿಲ ನಿರೀಹ ಲೋಕವಿ
ಮೋಹನಾಚ್ಯುತ ||ನಾರಾಯಣ|| 2
ಧರ್ಮಾಚರಣೆಯನೆರೆತೊರೆದು
ದುರುಳರ ಸಂಗದಿ ಜರಿದು ಸಜ್ಜನರನು ಜರಿದು ದುರ್ಗತಿಗೆ ನಾ
ಗುರಿಯಾದೆನು ಹರಿ ಪರಮ ಪುರುಷ ಪರಮ ಪಾವನ
ಭವ ಸಂಹರಣ
ವಿಶ್ವಂಭರಣ ಪುಲಿಗಿರಿ ವರದ ವಿಠಲ ||ನಾರಾಯಣ|| 3