ಹಸೆಗೆ ಬಾರೈರಾಮಾ ಪ
ಬಿಸಜಾಪ್ತ ವಂಶಲಲಾಮ ಅ.ಪ
ಮಾನಸ ಪೀಠಕೆ ಜಾನಕಿದೇವಿ ಸಹಿತಾ
ಆನತರಿಗೆ ಸೌಖ್ಯವ ಬೀರುತಲಿ 1
ಬ್ರಹ್ಮಮಹೇಶ್ವರ ಸುಮ್ಮಾನದಿ ಕೈಕೊಡಲು
ಧರ್ಮಸ್ಥಾಪಿಸೆ ಧರಣಿ ಮಂಡಲದಿ 2
ಹನುಮಂತ ಜಾಂಬವ ಇನತನಯಾಂಗದಾದಿ
ಘನಕಪಿವೀರರು ಕಾದುಕೊಂಡಿರುವರು 3
ನೀಮನವಲಿದನುಗ್ರಹಿಸಿ ಬೇಗದಿ4
ಅಂತಃಕರುಣಾಸಿದ್ಧಿಯಂ ತವಕದಿ ಕೊಟ್ಟು
ಅಂತರಾತ್ಮಕ ಗುರುರಾಮ ವಿಠಲನೆ 5