ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈತನೀಗಚಿದ್ವಿಲಾಸನು ಪ ಈತನೀಗ ಸರ್ವಭೂತ ಜಾತಚೇತನರ್ಗೆ ಸೌಖ್ಯ ದಾತವೇದ ಶಾಸ್ತ್ರ ವಿಖ್ಯಾತ ಲೋಕೈಕನಾಥ ಅ.ಪ. ಬ್ರಹ್ಮರೂಪನಿಂದ ಜಗವ ನಿರ್ಮಿಸುತ್ತತಾನೆ ಸರ್ವ ಕರ್ಮಫಲಗಳನ್ನೆ ಕೊಟ್ಟು ಶರ್ಮಪಡಿಸುವ ಚರ್ಮವಸ್ತ್ರವುಟ್ಟು ರೌದ್ರ ಕರ್ಮಿಯಾಗಿ ಕಡೆಗೆ ಕಾಲ ಧರ್ಮವನ್ನು ತೋರಿ ಜಲದೊಳೊಮ್ಮೆ ಮಲಗಿ ತೇಲುತಿರುವ 1 ರಮೆಯನಾಳ್ವ ಭಾಗ್ಯವಂತ ಕ್ಷಮೆಯನಾಳ್ವರಾಜ್ಯಕರ್ತ ಕಮಲಭವನ ಪಡೆದ ಹಿರಿಯನಮರರೊಡೆಯ ಸುಮಶರನಪೆತ್ತ ಚೆಲುವ ನಮಲಗಂಗೆಯಿತ್ತು ನಲಿವ ವಾಸುದೇವ 2 ಉರಗಶಯನ ಗರುಡಗಮನ ಪರಮಪದವನುಳಿದುಶೇಷ ಗಿರಿಯೊಳಿರ್ದುಬಂದ ವ್ಯಾಘ್ರಗಿರಿಯ ಶಿಖರಕೆ ಭರದಿ ನಿತ್ಯಮುಕ್ತರೊಡನೆ ಕರದಿ ಶಂಖಚಕ್ರಪಿಡಿದು ಕರುಣದಿಂದ ಚರಣ ಸೇವಕರನು ಪೊರೆವ ವರದವಿಠಲ 3
--------------
ಸರಗೂರು ವೆಂಕಟವರದಾರ್ಯರು
ಈತನೀತನೆ ರಮಾನಿವಾಸನು ಕೇಳಿ ಜನರು ಈತನೀಗ ಚಿದ್ವಿಲಾಸನು ಪ ಈತನೀಗ ಸರ್ವಭೂತ ಜಾತಚೇತನರ್ಗೆ ಸೌಖ್ಯ ದಾತವೇದಶಾಸ್ತ್ರ ವಿಖ್ಯಾತ ಲೋಕೈಕನಾಥ ಅ.ಪ ಬ್ರಹ್ಮರೂಪನಿಂದ ಜಗವ ನಿರ್ಮಿಸುತ್ತತಾನೆ ಸರ್ವ ಕರ್ಮಫಲಗಳನ್ನೆಕೊಟ್ಟು ಶಮನಪಡಿಸುವ ಚರ್ಮವಸ್ತ್ರವುಟ್ಟು ರೌದ್ರ ಕರ್ಮಿಯಾಗಿ ಕಡೆಗೆ ಕಾಲ ಧರ್ಮವನ್ನು ತೋರಿ ಜಲದೊಳೊಮ್ಮೆ ಮಲಗಿತೇಲುತಿರುವ 1 ರಮೆಯನಾಳ್ವ ಭಾಗ್ಯವಂತ ಕ್ಷಮೆಯನಾಳ್ವ ರಾಜ್ಯ ಕರ್ತ ಕಮಲಭವನ ಪಡೆದ ಹಿರಿಯನಮರರೊಡೆಯ ಸುಮಶರನ ಪೆತ್ತ ಚೆಲುವನಮಲ ಗಂಗೆಯಿತ್ತು ನಲಿವ ನಮರ ವೈರಿಗಳನು ಕೊಲುವ ಕಮಲನಾಭ ವಾಸುದೇವ2 ಉರಗಶಯನ ಗರುಡಗಮನ ಪರಮಪದನುಳದು ಶೇಷ ಗಿರಿಯೊಳಿರ್ದು ಬಂದ ವ್ಯಾಘ್ರಗಿರಿಯ ಶಿಖರಕೆ ಭರದಿನಿತ್ಯಮುಕ್ತರೊಡನೆ ಕರದಿ ಶಂಕ ಚಕ್ರ ಪಿಡಿದು ಕರುಣದಿಂದ ಚರಣ ಸೇವಕರನು ಪೊರೆವ ವರದ ವಿಠಲ 3
--------------
ವೆಂಕಟವರದಾರ್ಯರು
ಊ. ವಿಶಿಷ್ಟ ಹಾಡುಗಳು ಅಂಗಡಿ ಗೋವಿಂದನ್ಹಣ ವಿಂಗಡಿಸಿರೊ ಸಂಗಡಿಕ್ಕ ಬೇಡ ನೀವು ಭಂಗಬಡುವಿರಿ ಪ ಮುಂಗಡದ ಬಡ್ಡಿಯನು ಮುಂದೆ ಕಳುಹಿಸಿ ಅಂಗಡಿ ಗೋವಿಂದನ್ಹಣ ವಿಂಗಡಿಸಿರೊ ಅ.ಪ ಕೋಲುಗಾರನೊಬ್ಬನಲ್ಲಿ ಹೊರಟನಂತೆ ಬೇಳುವ ಶಂಖದ ಧ್ವನಿಯ ತೋರ್ಪನಂತೆ ಹೀಲಿಯ ಕುಂಚವು ಕಯ್ಯೊಳಿಪ್ಪುದಂತೆ ಮೇಲೆ ಮೂರು ನಾಮ ಧರಿಸಿ ಬಪ್ಪನಂತೆ 1 ಮೂರುಗಡುಬ ಸುಳ್ಳನಾಡಿ ಮೀರಿ ಹೋಯಿತೀ ಸಾರಿ ಬಂದ ದೂತರಿಂಗೆ ಲಂಚ ನಡೆಯದು ಭಾರಿಯಿಕ್ಕಿ ಕೈಗೆ ಚಿಪ್ಪಳೇರಿಸುವರು ಸಾರಿ ಕಂಡು ಬದುಕುವರೆ ದಾರಿವೊಳ್ಳೆದು 2 ಮೊದಲ ಪತ್ರದ್ಹಣವ ಕೊಟ್ಟು ಬದಲು ಪತ್ರವ ಸದರ ಬಡ್ಡಿಯಿಂದ ಬರೆದು ಚದುರತನದಲಿ ಇದಿರು ಬಿದ್ದು ಕೈಯ ಮುಗಿದುವೊದಗಿನಿಂದಲೆ ಗದರಬೇಡ ಬನ್ನಿ ಚಿನ್ನ ವರದನಲ್ಲಿಗೆ 3 ದುಡ್ಡು ಕೊಟ್ಟು ಮಡ್ಡಿಯನ್ನು ತೆಗೆದು ಉಂಬೆವು ಅಡ್ಡಕೊಂಡು ಅತಿರಸವ ತೆಗೆದುಕೊಂಬೆವು ದೊಡ್ಡ ದೋಸೆ ವ್ಯವಹಾರವ ಮಾಡಿಕೊಂಬೆವು ಕಡ್ಡಾಯದ ಸರಕನೆಲ್ಲ ಕಂಡು ಬಿಡುವೆವು 4 ಗಂಧಿಕಾರನಂಗಡಿ ಗೋವಿಂದನಲ್ಲಿ ಚಂದದ ಔಷಧವನ್ನು ತಿಂಬೆವಲ್ಲಿ ಬಂದ ಭವದ ರೋಗ ಕೊಂದೆವಲ್ಲಿ ಆತ ಮಿಂದ ತೀರ್ಥವನ್ನು ಊರಿಗೆಂದೆವಲ್ಲಿ 5 ಸಾಲವನ್ನು ತಿದ್ದಿ ಮುದದ ಸಾಲವನ್ನು ನಾಲಿಗೆಯ ಪತ್ರದಿಂದ ತಂದೆವಿನ್ನು ನೀಲದ ಮಣಿಯನೊಂದ ಕದ್ದುದನ್ನು ಆಲಿಯೊಳಗಿಟ್ಟುಕೊಂಡು ಬಂದುದನ್ನು 6 ಅಂಗಡಿ ಗೋವಿಂದ ಬಹಳ ಅಂಗವುಳ್ಳವ ಮಂಗಳವ ಮಾರುವಲ್ಲಿ ಶೃಂಗಾರವುಳ್ಳವ ಬಂಗಾರ ವ್ಯಾಪಾರದಲ್ಲಿ ತುಂಗ ವಿಕ್ರಮ ಮುಂಗುಡಿಯ ಜನಕೆ ಅಂತರಂಗ ಕೊಡುವವ 7 ದಾಸರಿಗೆ ಧರ್ಮವನ್ನು ಕೊಡುವನಲ್ಲದೆ ಕಾಸು ಹೊರತು ಮೀಸಲನ್ನ ನೀಡಲರಿಯನು ಶೇಷಗಿರಿಯವಾಸನೆಂದು ಹಾಸಿಕೊಂಬನು ಬೇಸರನ್ನು ಕಂಡು ಸಂತೋಷವೀವನು 8 ಸ್ವಾಮಿಯೆಂಬ ತೀರ್ಥದೊಳಗೆ ಮಿಂದೆವಲ್ಲಿ ಭೂಮಿ ವರಾಹತಿಮ್ಮಪ್ಪನ ಧ್ಯಾನದಿಂದಲಿ ಕಾಮಿತ ವ್ಯಾಪಾರವನ್ನು ತಂದೆವಿಲ್ಲಿ ಆ ಮಹಾ ಚಂದ್ರಾರ್ಕವಾಗಿ ಬಾಳುವಲ್ಲಿ 9
--------------
ವರಹತಿಮ್ಮಪ್ಪ
ಪಾಲಿಸೋಯನ್ನ ಪರಾತ್ಪರಾ ಹರಿ ಪ ಪಾಲಿಸೊ ಬುಧಹಿತ ಫಾಲನಯನನುತ ಲೀಲಾನಟನಫಣಿ ಶೈಲ ನಿಳಯ-ಹರಿ ಅ.ಪ. ವೇದಾಪಹಾರಿಯಕಂಡು ಜಲಚರ ರೂಪಿನಿಂದಾ ಖಳನ ಸಂಹರಗೈದು ಜಲಜಸಂಭವನಿಗೆ ಒಲಿದ ಮತ್ಸ್ಯಾವತಾರ 1 ಕರುಣಾವಿಹೀನದಿ ಬಲು ನೊಂದು ಕಂಗೆಡುತಲಿರೆ ಸಿಂಧುಮಥನಗೈದು ಕೂರ್ಮ 2 ದುರುಳ ಹಿರಣ್ಯಾಕ್ಷನೆಂಬುವ-ದೈತ್ಯ-ಧರಣಿಯನ ಪಹಾರಗೈಯಲು ಬೇಗ ಪರಮೇಷ್ಟಿಗೊಲಿದು ಸೂಕರನ ರೂಪವ ತಾಳಿ ಧರಣೀಚೋರನ ಕೊಂದ ಸರಸೀರುಹಾಂಬಕ 3 ಗೈಸಿದ ಬಲು ದುರುಳ ಹಿರಣ್ಯಕನುರವ ನಖದಿಂದ ಸೀಳಿ ಕರುಳಮಾಲೆಯನಿಟ್ಟ ಧುರಧೀರ ನರಹರಿ4 ಅಳೆದು ಈರಡಿಮೂಡಿಲೋಕವ ಮತ್ತೆ ಉಳಿದೊಂದು ಪಾದದಿ ಬಲಿಯ ತಲೆಯನು ಮೆಟ್ಟಿ ನಲಿದು ಗಂಗೆಯಪೆತ್ತ ಚಲುವ ವಾಮನ ರೂಪ 5 ಚಕ್ರದೊಡನೆದುಷ್ಟಭೂಪರಅತಿ ಅಕ್ರಮವನು ಕಂಡು ವಿಕ್ರಮಾನ್ವಿತ ನೃಪ ಚಕ್ರವ ಮುರಿದ ಮುನಿಚಕ್ರರಕ್ಷಕ ರಾಮ 6 ತ್ರಿದಿವೇಶರದೊಡ್ಡ ದೂರಕೇಳುತ ಮನುಜಾಕಾರವ ಧರಿಸಿ ದೈತ್ಯ ವೀರರ ಮಡುಹಿದ ಶ್ರೀ ರಾಮ ಮೂರುತಿ 7 ನೇಗಿಲುಗಳನು ಹಸ್ತದಿಪಿಡಿದು ಬಲವಂತರಾದ ದೈತ್ಯಕುಲವತರಿದು ದಿವಿಜ ಕುಲವ ಸಂರಕ್ಷಿಸಿದ ಜಲಧರ ನಿಭಚೇಲ 8 ಭಾರ ತಾಳದೆ-ಧರಣೀ-ಸೃಷ್ಟೀಶನಲ್ಲಿದೂರಿಡೆ ವೈರಿ ಪುಟ್ಟಿಸಿ ಭೂಭಾರ ಮಟ್ಟುಮಾಡಿದ ಕೃಷ್ಣ9 ವ್ಯಾಪಿಸೆಲೋಕವು ಆಗ ಲಲಿತತೇಜಿಯನೇರಿ ಕಲುಷಾತ್ಮಕರಕೊಂದು ವಿಲಸಿತ ಧರ್ಮವನ್ನು ಸಲಹಿದ ಕಲ್ಕಿರೂಪ 10 ಮುನಿಗೈದಲುಬೇಗ ವರವ್ಯಾಘ್ರಗಿರೀಶನೆ ಶರಣೆಂದಮುನಿಪಗೆ ವರವಿತ್ತು ಸಲಹಿದ ವರದ ವಿಠಲ ಹರಿ11
--------------
ಸರಗೂರು ವೆಂಕಟವರದಾರ್ಯರು
ಸಂಚಿತ ಕರ್ಮವಂತೆ ಕಂತೆ ಮುಂಗಡ ಪ ಬರೆದ ಬರೆಹ ತೊಡೆದ ಮೇಲೆ ಕರೆದರಾಗ ಹೋಗಬೇಕುನೆರೆದು ಸುತ್ತಮುತ್ತ ಕುಳಿತ ಪರಮ ಬಂಧುವರ್ಗವೆಲ್ಲಇರಿಸಬೇಡಿ ಸುಡುಸುಡೆಂಬರು ಸುಟ್ಟಬಳಿಕಭರದಿ ಬಂದು ಮನೆಯೊಳೆಂಬರು ಪಾಪಿ ಸತ್ತತರುಣಿ ಕೆಟ್ಟಳೆಂದುಕೊಂಬರು ಆತ್ಮ1 ಸತಿಯು ಸುತರು ಪುತ್ರಿ ಮಿತ್ರರತಿಶಯದೊಳು ತಂದೆ ತಾಯಿಅತಿ ವಿನೋದಗೈಯುವ ಭಾವ ಜತನವೆಂಬೊ ಅತ್ತೆ ಮಾವಜೊತೆಗೆ ಹುಟ್ಟಿದಣ್ಣ ತಮ್ಮ ಈ ದೇಹ ತಾನುಸತ್ತ ಗಳಿಗೆ ಮುಟ್ಟಲಮ್ಮರು ಬರಿದೆ ನಾವುವ್ಯಥೆಗೆ ಸಿಕ್ಕಿದೆವೆಂಬರು ಆತ್ಮ 2 ಕಟ್ಟಿದರ್ಧ ಕರೆವ ಎಮ್ಮೆ ಕೊಂಡುಕೊಂಡ ಸಾಲಕದನುಪೋಟು ಮಾಡಿ ಮಕ್ಕಳೊಡನೆ ಅಷ್ಟು ಹೇಳಿ ಸಾವತನಕದುಷ್ಟ ಜನರು ಸುಮ್ಮನಿರುವರೆ ಕೈಯಲೊದಗಿದಷ್ಟು ಧರ್ಮವನ್ನು ಮರೆವರೆ ಆದಿಕೇಶವನ್ನಮುಟ್ಟಿ ಭಜಿಸಿ ಕಡೆಗೆ ಬಿಡುವರೆ ಆತ್ಮ 3
--------------
ಕನಕದಾಸ
ಶ್ರೀಭಾರತೀಶನಮೋ ನಮೋ ಬಿನ್ನಪವ ಕೇಳು |ನಾಭಿನಂದನಚರಣಸರಸೀರುಹಭೃಂಗನಮೋ ನಮೋ ಪಸಂಕರ್ಷಣನತನಯಜಡಜಂಗಮದಿ ವ್ಯಾಪ್ತ |ಶಂಕರಾದಿ ಸಮಸ್ತ ಸುರವಂದಿತ ||ಕಿಂಕರರವನೋ ನಾನು ದಯದಿ ಕರಪಿಡಿದುಭವ|ಪಂಕದೊಳಗಿಹನ ಕಡೆ ತೆಗೆಯೊ ಭಯ ಕಳಿಯೊ 1ನೀನಲ್ಲದಾರ ಸಲಹುವರ ಕಾಣೆನೋಜೀಯ|ಭಾನುನಂದನ ರಕ್ಷದುರುಳಶಿಕ್ಷ ||ಹೀನಮತಗಳ ಸೋಲಿಸಿದ ದಕ್ಷ ಸುರಪಕ್ಷ |ದೀನಜನಮಂದಾರಪವನ ಸುಕುಮಾರಾ 2ಪ್ರಾಣೇಶ ವಿಠಲನಿಚ್ಛಾನುಸಾರ ಧರೆಯೊಳು |ನೀನವತರಿಸಿ ಜಾತಿ ಧರ್ಮವನ್ನು ||ಜ್ಞಾನಿಗಳ ಸಮ್ಮತಾಹಂತೆ ಆಚರಿಸಿದೆಯೊ |ಮಾನಿ ಮೋಕ್ಷದನೆ ಆರೊಂದು ಸುರವಂದ್ಯ 3
--------------
ಪ್ರಾಣೇಶದಾಸರು