ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಅಕ್ರೂರನ ಒಸಗೆ) ರಥವೋಗದಾ ಮುನ್ನ ಗೋಕುಲಕೆ ಮನ್ಮನೋ- ರಥ ಹೋಗಿರುವುದೇನೆಂಬೇ ಪ ಅತಿ ಕೌತುಕವದಾಯ್ತು ಖಳರಾಯನೊಲಿದು ಯದು- ಪತಿಯ ಕರೆತರುವುದೆಂದೆನಗೆ ಪೇಳಿರಲಿಕ್ಕೆ ಅ.ಪ. ಪತಿತರ್ಗೆ ನಾಮ ದುರ್ಲಭವಲಾ ಎನಗೆ ಶ್ರೀ- ಪತಿ ಸೇವೆ ತಾನಾಗಿ ದೊರೆತೂ ಶತಸಹಸ್ರಾನಂತ ಜನುಮಗಳ ಸು- ಕೃತಕೆ ಫಲವಾಯಿತೆಂದರಿತೂ ಗತ ಕಿಲ್ಬಿಷನಾದೆನೆಂಬುದಕಿದೇ ಸಾಕ್ಷಿ ಪಥದೊಳಗೆ ತಾವೆ ಮುಂದುವರಿದೂ ಮಿತಿಯಿಲ್ಲದಲೆ ಮಹಾ ಶಕುನಂಗಳಾಗುತಿವೆ ಪ್ರತಿ ಇಲ್ಲವೀ ಶುಭೋದಯಕೆ ಸೂರ್ಯೋದಯಕೆ 1 ಶ್ರೀ ಪದ್ಮಜಾದಿಗಳು ಸೇವಿಸುವ ಚರಣ ಯಮು- ನಾಪುಳಿನದಲಿ ಮೆರೆವ ಚರಣಾ ಗೋಪೀಯರ ಪೀನ ಕುಚಕುಂಕುಮಾಂಕಿತ ಚರಣಾ ತಾಪತ್ರಯಾವಳಿವ ಚರಣಾ ಗೋಪುರದ ಶಿಲತೃಣಾಂಕುರುಹ ತೋರುವ ಚರಣಾ ಆಪದ್ಬಾಂಧವನ ಚರಣಾ ಣಾ ಪೂರ್ಣಾ ಎನಗಭಯಕೊಡುವಾ ಪಿಡಿಲಾ 2 ನೋಡುವೆನು ನೀರದಶ್ಯಾಮಸುಂದರನ ಕೊಂ- ಡಾಡುವೆನು ಕವಿಗೇಯನೆಂದೂ ಮಾಡುವೆನು ಸಾಷ್ಟಾಂಗದಂಡ ಪ್ರಣಾಮ ಕೊಂ- ಡಾಡುವೆನು ಕೈ ಮುಗಿದು ನಿಂದೂ ಬೇಡುವೆನು ಭುವನೈಕದಾತನೆಂದಲ್ಲಿ ಕೊಂ ಡಾಡುವೆನು ದಾಸ್ಯ ಬೇಕೆಂದೂ ಈಡಿಲ್ಲದಿಂದಿನಾ ಮನಕೆನ್ನ ಬಯಕೆ ಕೈ- ಗೂಡುವುದು ನಿಸ್ಸಂದೇಹ ದೈವ ಸಹಾಯ 3 ಇರುವನೋ ಏಕಾಂತದೊಳಗಿರುವ ಕೇಳದಿರು ಬರುವನೋ ಬಂದವನ ಕಂಡೂ ಕರೆವನೋ ಕಿರಿಯಯ್ಯ ಬಾರೆಂದು ಬಿಗಿದಪ್ಪಿ ಬೆರೆವನೋ ಬೆರಸಿಯದನುಂಡೂ ಒರೆವನೋ ಒಡಲ ಧರ್ಮವನೆಲ್ಲ ವರಗಿನೇ ಜರಿಯನೋ ಜಗದೀಶ ಹಗೆಯವನೆನುತ ಬಗೆಯ 4 ಗೋಧೂಳಿಲಗ್ನಕೆ ಗೋಕುಲಕೆ ಬಂದು ಬೆರ- ಗಾಗಿ ಹೆಜ್ಜೆಗಳ ನೋಡಿ ಭೂದೇವಿಗಾಭರಣವೆನುತ ತೇರಿಳಿದು ಶ್ರೀ ಪಾದರಜದೊಳಗೆ ಪೊರಳಾಡೀ ಗೋದೋಹನದೊಳಿದ್ದ ರಾಮಕೃಷ್ಣರ ಕಂಡು ನಾ ಧನ್ಯ ಧನ್ಯನೆಂದಾಡೀ ಶ್ರೀದವಿಠಲ ಎರಗುವನಿತರೊಳು ಬಿಗಿದಪ್ಪಿ ಸಾದರಿಸಿದನು ಇದೆ ಸದನದಲಿ ಸ್ವಪ್ನದಲಿ 5
--------------
ಶ್ರೀದವಿಠಲರು
ಅನಂತಶಯನ ವಿಠಲಾ | ಕಾಪಾಡೊ ಇವಳಾ ಪ ಸಾರ ಅ.ಪ. ತಾಪತ್ರಯಗಳು ಎಂಬ | ಕೂಪಾರದಲಿ ಬಿದ್ದು ಶಾಪಕೊಳಗಾಗಿ ಹಳ ಕಾಪಾಡಬೇಕೊದ್ರೌಪದಿಯವರದ ಕರು | ಣಾಪಯೋನಿಧಿಹರೆಯೆನೀ ಪೊರೆಯದಿರಲನ್ಯ | ಕಾಪಾಡ್ವರ್ಯಾರೊ 1 ತೈಜಸನೆ ನೀನಾಗಿ | ಸೂಚಿಸಿಹ ಅಂಕಿತವಯೋಜಿಸಿಹೆ ಇವಳೀಗೆ | ಅವ್ಯಾಜ ಕರುಣೀಪ್ರಾಜ್ಯ ಎನ ಸಂಸಾರ | ಗೌಜು ಕಳೆಯಲ್‍ವೆನ್‍ತ್ರ್ಯಜಗದ್ವಾಪನೆ | ವಾಜಿವದನಾಖ್ಯ 2 ಕರ್ಮಾಕರ್ಮಗಳ | ಮರ್ಮಗಳ ತಿಳಿಸುತ್ತಪೇರ್ಮೆಯಲಿ ಪತಿಸೇವೆ | ಕರ್ಮಪ್ರಾಧಾನ್ಯಧರ್ಮವನೆ ತಿಳಿಸುತ್ತ | ಭರ್ಮಗರ್ಭನ ಪಿತನೆಕರ್ಮಬೀಜವ ಕಳೆಯೊ | ಬ್ರಹ್ಮಣ್ಯದೇವಾ3 ಮರುತಾಂತರಾತ್ಮನೆ | ಮೂರೆರಡು ಭೇದಗಳತರತಮಂಗಳನರುಹಿ | ಪೊರೆಯೊ ಇವಳಾಅರುಹುವೆನೊ ಸರ್ವಜ್ಞ | ತರುಳೆಬಹುಭಕ್ತಿಯಂತೆಕರುಣಿಸೆಲೊ ಕೃಪಾಸಾಂದ್ರ | ಕಂಜಜಾನಯ್ಯ 4 ಗಾವಲ್ಗಣೀ ವರದ | ಭಾವದಲಿ ಮೈದೋರಿನೀ ವೊಲಿಯೆ ಬಿನ್ನಪದೆ | ಗೈಯೆ ಶ್ರೀಹರಿಯೆಕೋವಿದೊತ್ತಂಸ ಗುರು | ಗೋವಿಂದ ವಿಠಲನೆಕಾವ ಕರುಣಿ ಎಂದು | ಪ್ರಾರ್ಥಿಸುವೆ ಹರಿಯೆ 5
--------------
ಗುರುಗೋವಿಂದವಿಠಲರು
ನಂದ ಕಂದನೇ ಇವಸುರವೃಂದ ವಂದ್ಯನೇ ಧರೆಯ ಮರೆಗಿಂದು ಬಂದನೇ ಹಿಂದೆವೇದವನೆ ರಕ್ಷಿಸಿದವನೇ ಮಂದರಗಿರಿ ಪೊತ್ತವನೇ ಸುಂದರಿ ಶರಯನೆ ಬಿಡಿಸಿದ ದೇವನೇ ಛಂದದಿ ಮಗು ಕಾಯ್ದವನೇ 1 ನಾನಾ ರೂಪನೇ ಧರಿಸಿ ಧರ್ಮವನೆ ಸ್ಥಾಪನೇ ಮಾಡುವದುಷ್ಟ ಜನ ಲೋಪನೇ ತುನಾಭಿಲಾಷನೇ ನೆಗೆಹಿದ ಪರುಷನೇ ಮಾನಿನೀ ಕೃತ್ಕೂಲುಷನೇ ಮಾನಿನೀ ಹೃತ್ಕಲುಷನೇ ಬುದ್ಧ ಕಲ್ಕೇಶನೇ ದಾನವ ಜಗದಂಕುಶನೇ 2 ಮಾನುವೆನ್ನಲೆ ಗಿರಿಯ ಪೊತ್ತದೇನು ಕಣ್ಣಿಲೇ ಕಾಣದೇ ಜನ ತಾನು ತನ್ನಲೇ ಸ್ವಾನಂದ ಲೀಲೆ ದೋರಲು ಬಾಲೇ ನಿಜಗುಣ ಮಾತೇ ಮಹಿಪತಿಜ ಪ್ರಿಯನ ಬಲೆ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
4 ಲೋಕನೀತಿ294ಅಂದೇನಿಂದೇನಯ್ಯ ಶ್ರೀಅರವಿಂದನಾಭನ ಹಗೆಯವ ಅಸುರಎಂದಿಗೆ ಮತಿ ಕವಲಿಲ್ಲದೆ ಹರಿಪದಹೊಂದಿದಗೆ ಮುಕ್ತಿಯವಸರ ಪ.ಅಂದಿಗೆ ಹರಿಮಹಿಮೆಗಳನ್ನು ಆನಂದದಿಂದ ಕೇಳದವ ದ್ವೇಷಿಇಂದಿಗೆ ಹರಿಕಥೆ ತಾತ್ವಿಕ ಜನರನುನಿಂದಿಸುವವನೆ ನಿಜದ್ವೇಷಿ 1ಸರ್ವಹ ಕೃಷ್ಣಾಕೃತಿಗೆ ವೈರ್ಯಾಗಿ ಬಹುಗರ್ವಿಪ ಕಂಸನು ಅತಿತಾಮಸಉರ್ವಿಲಿ ನರಹರಿ ಚರಣವರ್ಚಿಸದೆಶರ್ವಸರ್ವೋತ್ತಮನೆಂಬವತಾಮಸ2ವಾಸುದೇವನ ಪಾಶದಿ ಬಿಗಿಸುವೆನೆಂದುಆಶಿಸಿ ಕೆಟ್ಟ ಕೌರವ ಕುಮತಿದೋಷ ಧರ್ಮವನೆಲ್ಲ ಸರಿಮಾಡಿ ಶಾಕ್ತನಾಗ್ಯಾಸುರಿ[ಯ] ಪೂಜಿಪ ಹೊಲೆ ಕುಮತಿ 3ರುಕ್ಮಿಣಿ ದೇವಿಯೆ ಲಕ್ಷ್ಮಿಯೆಂದು ತಿಳಿಯದರುಕ್ಮನು ಮದಸೊಕ್ಕಿದ ಪಾಪಿಲೆಕ್ಕವರಿಯದೆ ಜೀವೇಶರು ಸಮರೆಂದುಲೆಕ್ಕಿಸುವವ ನರರೊಳು ಪಾಪಿ 4ಕೃತಕ ಹಕ್ಕಿಯನೇರಿ ತಾ ವಾಸುದೇವನೆಂದುಅತಿಕ್ಲೇಶವುಂಡ ಪೌಂಡ್ರಕ ಕಲಿಯುಸಕಳ ಜಗದೊಡೆಯ ಪ್ರಸನ್ವೆಂಕಟೇಶನಭೃತ್ಯನಾಗದೆಯೆ ನಾನೆಂದವ ಕಲಿಯು 5
--------------
ಪ್ರಸನ್ನವೆಂಕಟದಾಸರು
ಇಂದೆ ಕಂಡೆವು ಗುರುರಾಯನ ನಮ್ಮತÀಂದೆ ಸತ್ಯಾಭಿನವತೀರ್ಥನ ಫಲಿಸಬಂದೊದಗಿತು ನಮ್ಮಸುಕೃತಆನಂದರಸಾಬ್ಧಿ ಉಕ್ಕೇರಿತು ಪ.ಇದೀಗೆ ಕಲ್ಪದ್ರುಮ ಕಾಣಿರೈ ಅಹುದಿದೀಗೆ ಚಿಂತಾಮಣಿ ನೋಡಿರೈ ಮತ್ತಿದಿದೀಗೆಸುರಭಿಬಂದಿತೆನ್ನಿರೈ ತಮ್ಮಮುದದಿಂದ ಯತಿರೂಪವಾಯಿತೈ 1ಬಡವರ ದೊರೆ ನಮ್ಮ ಗುರುರಾಯ ಈಪೊಡವಿಲಿ ಯಾಚಕರಾಶ್ರಯ ಆಪ್ತಹಡೆದ ತಾಯಿತಂದೇರ ಮರೆಸಿದ ಎಮ್ಮೊಡೆಯ ಭಕ್ತಿ ಭಾಸವ ಬೆಳೆಸಿದ 2ಭಕ್ತಿ ಪಥವ ನೋಡಿ ನಡೆವನು ಯತಿಮುಕುಟಮಣಿಗೆ ಸರಿಗಾಣೆನು ಜ್ಞಾನಸುಖದ ಬಳ್ಳಿಯ ಬೆಳೆ ಬೆಳೆಸಿದ ಸಲೆಮುಕ್ತಿ ಮಂದಿರ ವಾತ್ರ್ಯರುಹಿಸಿದಒಂದೊಂದು ಗುಣಗಳ ಮಹಿಮೆಯು ಮತ್ತೆಂದಿಗೆ ಹೊಗಳಲಿ ತೀರವುಹಿಂದಾದ ಪೂತರು ಅಹರು ಯತೀಂದ್ರನ ಸಾಮ್ಯಕೆ ಸರಿಯಾರು 4ಗುರುಭಕ್ತಿನೆಲೆಕಳೆಮರೆಯದೆ ಶ್ರೀಧರಜೆ ರಾಘವಪಾದ ಜರಿಯದೆ ದೇವವರವೇದವ್ಯಾಸನ ಸೇವೆಗೆ ಒಂದರಘಳಿಗ್ಯಲಸ ತಾನೆಂದಿಗೆ 5ಹೊನ್ನ ತೃಣದೊಲು ಸೂರ್ಯಾಡಿದ ವಿದ್ಯೋನ್ನತರ ತವರುಮನೆಯಾದಮನ್ನಿಪ ಸುಜನಚಕೋರವ ಹೊರವಪೂರ್ಣ ಚಂದಿರನಂತಲ್ಲೊಪ್ಪುವ 6ತಪ್ತಲಾಂಛನ ತೀರ್ಥವೀವಾಗಭೃತ್ಯರುಪಟಳಕೊಲಿದು ನಲಿವನಾಗಕಪಟವ ಲೇಶಮಾತ್ರರಿಯನು ಇಂಥಗುಪ್ತ ಮಹಿಮಗೆಣೆಗಾಣೆನು 7ಸಕಳ ಪುರಾಣೋಕ್ತ ದಾನವ ಬಿಡದಖಿಳ ಧರ್ಮವನೆಲ್ಲ ಮಾಡುವನಿಖಿಳತತ್ವವನೊರೆದು ಹೇಳುವ ಈಅಕಳಂಕನೆಂದೂ ನಮ್ಮನುಕಾವ8ಕಷ್ಟ ಮೌನದಿ ವಾರಣಾಸಿಯ ಬಹುಶಿಷ್ಟರ ಸಲಹುತ ಯಾತ್ರೆಯ ಮಾಡಿತುಷ್ಟಿಬಡಿಸಿದಲ್ಲಿವಾಸರಬೇಡಿದಿಷ್ಟಾರ್ಥವನೀವನು ದಾಸರ 9ಪ್ರತಿದಿನ ಗುರುಪಾದುಕೆಯನಿಟ್ಟು ಮೇಲೆನೂತನವಸನಹೊನ್ನಾರ್ಚನೆಗಿಟ್ಟು ಮುಂದೆನುತಿಸಿಹಿಗ್ಗುವ ನವಭಕುತಿಂದ ಈವ್ರತಕಾಗಲಿಲ್ಲ ಒಂದಿನಕುಂದು10ಶ್ರೀಭಾಗವತಶಾಸ್ತ್ರ ಟೀಕನುಹರಿಗಾಭರಣವ ಮಾಡಿಟ್ಟನುಈ ಭೂಮಿಲಿಹ ಶಿಷ್ಯ ಜನರನು ತತ್ವಶೋಭಿತರನು ಮಾಡಿ ಹೊರೆದನು 11ಬಲುಹಿಂದ ಯವನನ ಬಲದಲ್ಲಿ ಕೃಷ್ಣಒಳಪೊಕ್ಕು ಸದೆದ ಪರಿಯಲ್ಲಿಕಲಿನೃಪ ಮ್ಲೇಚ್ಛನ ಬಂಧನ ತಪೋಬಲದಿಂದ ಗುರುರಾಯ ಗೆಲಿದನು 12ಭಕ್ತಿವಿರತಿಜ್ಞಾನಪೂರ್ಣನು ಸೇವಕ ಜನರಿಗೆ ಪ್ರಾಣಪ್ರಿಯನುಪ್ರಕಟಿಸಿದನು ನಿಜಕೀರ್ತಿಯನಿತ್ಯಸಕಲ ಸದ್ಗುಣಗಳ ವಾರ್ತೆಯ 13ಈಪರಿಬಹು ಪಟ್ಟವಾಳುತ ದಿವ್ಯಶ್ರೀಪಾದವ್ರತ ಪೂರ್ಣ ತಾಳುತಸ್ಥಾಪಿಸಿದನು ಮಧ್ವಸಿದ್ಧಾಂತ ದುಷ್ಟಕಾಪುರುಷರ ಮೊತ್ತ ಗೆದ್ದಾತ 14ಹರಿಗುಣ ಜಿಜ್ಞಾಸೆಯಿಂದ ಶ್ರೀಹರಿಮೂರ್ತಿ ಧ್ಯಾನ ಚಿಂತನೆಯಿಂದ ಶ್ರೀಹರಿನಾಮ ಸ್ಮರಣಶ್ರವಣದಿಂದ ಶ್ರೀಹರಿಪ್ರೀತಿಬಡಿಸಿದ ನಲವಿಂದ15ನಿರುತ ಉದಯಸ್ನಾನ ಮೌನವ ಶ್ರೀಗುರುಮಧ್ವಶಾಸ್ತ್ರವ್ಯಾಖ್ಯಾನವ ಮಹಾಗೀರ್ವಾಣ ವಾಕ್ಯದಿಂದ ಪೇಳುವ ಆತ್ಮಗುರುಗಳ ಸ್ಮರಣೆಯ ಮಾಡುವ 16ಗುರುಸತ್ಯನಾಥರ ತಂದನು ನಿಜಗುರುಪದವೇ ಗತಿಯೆಂದನು ತನ್ನಸ್ಮರಣೇಲಿ ಇಹರ ಕಾವನು ಬೇಡಿದರೆ ಅಭೀಷ್ಟಾರ್ಥವನೀವನು 17ಗುರುಸತ್ಯನಾಥಾಬ್ಧಿ ಸಂಜಾತ ಸಜ್ಜನರಹೃತ್ಕುಮುದತಾಪಸಂಹರ್ತಸರಸ ಸುಧಾಂಶು ವಾಕ್ಯಾನ್ವಿತ ಸಿತಕರನಹುದಹುದಯ್ಯ ಧರೆಗೀತ 18ಆವ ಪ್ರಾಣಿಯು ಗುರುಮಹಿಮೆಯ ಸದ್ಭಾವದಿ ನೆನೆಯಲು ಸುಖಿಯಾದದೇವ ಪ್ರಸನ್ವೆಂಕಟಾದ್ರೀಶ ಅವಗಾವಗೆ ಪಾಲಿಪ ಮಧ್ವೇಶ 19
--------------
ಪ್ರಸನ್ನವೆಂಕಟದಾಸರು