ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

17ವಾಯುದೇವರನ್ನು, ವಾಯುದೇವರ ಮಟ್ಟತಾಳ ಭಾರತೀಶ ತ್ರಾಹಿ ಉರಗ ಗರುಡಾದಿ ಪೂಜ್ಯ ಚರಣ ಭಾಸಾ ಧೂರಿಕೃತ ಭಯಾಜ್ಞಾನ ಲೇಶ ಪರಮೋತ್ತಮ ಜ್ಞಾನ ವಿಲಾಸ ಸರಸಿಜಾಂಡಾಂತ ಬಹಿರ್ವಾಸ ಹರಿ ಪೂಜಾದಿ ಗುಣಭರಿತ ಪ್ರಾಣೇಶ 1 ತಾಳ ಅಂಜನಿಗರ್ಭ ಸುಧಾಂಬುಧಿ ಸಂಜಾತ ಮಂಜುಳ ಭಾಷಣ ಕಂಜನೇತ್ರ ಶ್ರೀರಾಮದÀೂತ ವಜ್ರಮುಷ್ಟಿ ಪ್ರಹಾರೇಣ ಹತ ರಾಕ್ಷಸ ಸಂಜೀವ ಪರ್ವತ ಉಜ್ಜೀವಿತ ಕಪಿನುತ ಪುಂಗವ ಭರ್ಜಿತ ರಾವಣ ಮದ ಗರ್ವ ಹೇ ಹನುಮನ್ 2 ತಿಶ್ರಗತಿ ತಾಳ ಇಂದು ಮೌಳಿ ಪಾದದ್ವಂದಾರಾಧಕ ಜರಾ - ಸಂಧಾದಿ ಸುರ ವೈರ ವರ್ಗ ಮಾತಂಗ ವೈರಿ ಇಂದುಮುಖಿ ಯುಗ್ಮಭೈಷ್ಮೀಸತ್ಯ ಕಂದರ್ಪ ಶೃಂಗಾರ ಗುಣ ಸಿಂಧು ಶ್ರೀ ಕೃಷ್ಣದಾಸ ಭೀಮ 3 ಝಂಪೆತಾಳ ಧರ್ಮರತ ಮೌನಿಜ ನಿರ್ಮಮಾದಿ ಗುಣಪೂರ್ಣ ದುರ್ಮತಿ ವಾದಿ ವಾಗ್ಯುದ್ಧ ಕೋಲಾಹಲ ಅ- ಧರ್ಮ ರಚಿತ ದುಶ್ಯಾಸ್ತ್ರ ನಿರ್ಮೂಲೀಕೃತ ಯತಿರಾಜ ಭರ್ಮವರ್ಣ ವಿಜಯ ರಾಮಚಂದ್ರವಿಠಲ ಭಕ್ತ ಆನಂದಮುನೇ 4
--------------
ವಿಜಯ ರಾಮಚಂದ್ರವಿಠಲ
ಕರುಣಾಸಾಗರ ದೀನೋದ್ಧಾರಣ ಎನ್ನನು ಕಾಯ್ವ ಪರಿಯ ಚಿಂತಿಸಿ ರಕ್ಷಿಸೊ ಪರಮ ಪಾವನ ನಾಮಸ್ಮರಣೆಯಲ್ಲದೆ ಕರ್ಮ ಚರಣರಹಿತ ಪಾಪಕರನಾಬ್ಧಿಪತಿತನ ಪ. ವರ್ಣಾಶ್ರಮಾಚಾರ ಕರ್ಮಕೃತ್ಯವ ನೀಗಿ ನಿರ್ಮಲಚಿತ್ತದಿ ನಿನ್ನ ಪೂಜಿಸದೆ ವರ್ಮವಿಡಿದು ವರ ದ್ರೋಹ ಚಿಂತೆಗಳಿಂದ ಧರ್ಮಮಾರ್ಗವ ದೂರದಲಿ ತ್ಯಜಿಸಿ ನಿರ್ಮಲಾಂತ:ಕರಣ ನಿಜಕುಲ ಧರ್ಮರತ ಸಜ್ಜನರ ದೂಷಿಸಿ ದುರ್ಮದಾಂಧರ ಸೇರಿ ಕೂಪದ ಕೂರ್ಮನಂದದಿ ಬರಿದೆ ಗರ್ವಿಪೆ 1 ನೇತ್ರ ದರ್ಶನಕೆ ಸಂಸ್ಮರಕೆ ಜಿಹ್ವೆಯ ಗಾತ್ರ ಸೇವೆಗೆ ನೈರ್ಮಲ್ಯಕೆ ಶಿರವ ಶ್ರೋತ್ರವ ಮಾಹಾತ್ಮ ಶ್ರವಣಕೆ ಪಾದಗಳ ಕ್ಷೇತ್ರಯಾತ್ರೆಗೆ ಕರಗಳ ಪೂಜಾವಿಧಿಗೆ ಇತ್ತ ದೊರೆಯನು ಮರೆತು ಇಂದ್ರಿಯ ವೃತ್ತಿಗಳ ಸ್ವೈರಿಣಿಯ ದರುಶನ ಭುಕ್ತಿ ಚುಂಬನ ಧ್ಯಾನ ದುಷ್ಟ ಕಥಾ ಶ್ರವಣಸಲ್ಲಾಪಕಿತ್ತೆನು 2 ಪತಿತ ಪಾವನ ನೀನು ಪತಿತಾಗ್ರೇಸರ ನಾನು ಅತಿಶಯಿತನು ನೀನು ಅತಿನೀಚನು ನಾನು ಗತಿಹೀನ ಜನಕ ಸದ್ಗತಿಯೆಂಬ ಬಿರುದುಳ್ಳ ಮಿತಚಿತ್ರ ಚರಿತಾತ್ಯದ್ಘುತರೂಪ ಗುಣಪೂರ್ಣ ಪಶುಪತಿ ಸುರೇಶ ಪ್ರ- ಭೃತಿ ದಿವಿಜಗಣ ಸುತ ಪದಾಂಬುಜ ಕ್ಷಿತಿಜಲಾಗ್ನಿ ಮರುನ್ನಭೋಹಂ ಕೃತಿ ಮಹ ಸುಖತತಿನಿಯಮಕ 3 ಕರಿರಾಜ ಧ್ರುವಾಕ್ರೂರನರ ವಿಭೀಷಣ ನಾರದರು ಮೊದಲಾಗಿ ನಿನ್ನನುದಿನವು ಸ್ಮರಿಸಿ ಪೂಜಿಸಿ ಮನವೊಲಿಸಿದವರನ್ನು ಪರಿಪಾಲಿಸಿದನೆಂಬೊ ಗರುವದಿಂದ ನಿರುಪಮಾನಂದೈಕ ಸದ್ಗುಣ ಭರಿತರೆಂಬುದ ಹೆಮ್ಮೆಯಿಂದಲಿ ಮರೆತರೆನ್ನನು ಪರಮಕರುಣಾ ಶರಧಿಯೆಂದ್ಹೆಸರಿರುವುದೇತಕೆ 4 ನಾ ನಿನ್ನ ಮರೆತರು ನೀ ಎನ್ನ ಮರೆದರೆ ಹಾನಿಯಾಗದೆ ನಿನ್ನ ಭಕ್ತ ವತ್ಸಲಕೆ ದಾನವಾಂತಕ ಅಕಿಂಚನಾರೆ ಎಂಬ ಪ್ರಮಾಣ ಉನ್ನತ ವಚನವಾಗದೆ ಮಾನನಿಧಿ ಪವಮಾನ ತತ್ವಮತ ಮಾನಿಜನ ಸಂಸ್ತುತ ಪದಾಂಬುಜ ಶ್ರೀನಿವಾಸ ಕೃಪಾನಿಧೆ ಕಮಲಾ ನಿಲಯ ವೆಂಕಟನಿಜಾಲಯ 5 ವೇದವನು ತಂದು ಭೂಧರನ ಬೆನ್ನಲಿ ನೆಗಹಿ ಈ ಧರೆಯ ಸಲಹೆ ಪ್ರಹ್ಲಾದನನು ಕಾಯ್ದೆ ಮೇದಿನಿಯನಳೆದಿ ಕಾರ್ತದಶಾಸ್ಯ ಕಂ ಸಾದಿಗಳ ತರಿದ ಬೌದ್ಧಾದಿ ಕಲ್ಕಿ ಧಾರಣನೆ ಪತಿತ ಪಾವನನೆಂಬ ಪರಮ ಬಿರುದನು ವಹಿಸಿ ಜತನ ಮಾಡುವಿ ಭಕ್ತತತಿಗಳನು ಬಿಡದೆ ಪತಿತ ಶೇಖರನನ್ಯಗತಿಯಾಗಿರುವ ಎನಗೆ ಗತಿಯ ಪಾಲಿಸು ರಮಾಪತಿಯೆನ್ನುಪೇಕ್ಷಿಸದೆ 6 ನಾರದಕ್ರೂರ ನರ ಹೈರಣ್ಯಕಾದಿಗಳು ಪಾದ ನೀರರುಹಗಳನು ಘೋರತರ ಸಂಸಾರಪಾರವಾರವ ದಾಟಿ ಧೀರರೆನಿಸಿದರೆಲ್ಲಪಾರಸನ್ಮಹಿಮ ತರಣಿ ಉದಿಸಿದ ಮೇಲೆ ತಿಮಿರದೊಂದಿರವ್ಯಾಕೆ ಗರಳ ಭಯವ್ಯಾಕೆ ಸಿರಿಸಹಿತ ಶೇಷಾದ್ರಿ ವರ ನಿನ್ನಪಾದ ಸಂ- ದರುಶನವು ದೊರೆತಮ್ಯಾಲರಿಬಾಧೆಯಾಕೆ ಎನಗೆ 7
--------------
ತುಪಾಕಿ ವೆಂಕಟರಮಣಾಚಾರ್ಯ
ನರ್ತನಗೋಪ ಕೃಷ್ಣ | ವಿಠಲ ಪೊರೆ ಇವನಾ ಪ ಅರ್ತು ನಿನ್ನಂಘ್ರಿಯಲಿ | ದಾಸ್ಯ ಕಾಂಕ್ಷಿಪನಾ ಅ.ಪ. ಪತಿ ಸುಪ್ರೀಯ | ಮಧ್ವಾಂತರಾತ್ಮಸದ್ಧರ್ಮರತಿಯಿತ್ತು | ತಿದ್ದಿ ಸಂಸ್ಕತಿಗಳನುಶ್ರದ್ಧಾಳು ವೆಂದಿನಿಸು | ಸಿದ್ಧಾಂತ ಸಥದೀ 1 ಬೋಧ ಓದಗಿಸಿಕಾಯೋ | ಬಾದರಾಯಣದೇವಮೋದದಿಂ ಪ್ರಾರ್ಥಿಸುವೆ | ಹೇ ದಯಾಪೂರ್ಣ 2 ಧ್ಯಾನುಪಾಸನವಿತ್ತು | ಶ್ರೀನಿವಾಸನಮನದಿಕಾಣುವ ಸುವಿಜ್ಞಾನ | ನಿನಾಗಿ ಕೊಡುತಾಮೌನಿಕುಲ ಸನ್ಮಾನ್ಯ | ಜ್ಞಾನದಾಯಕ ಹರಿಯೆದೀನಜನ ಮಂದಾರ | ನೀನಾಗಿ ಪೊರೆಯೊ 3 ಪಿತೃ ಮಾತೃ ಪರಿವಾರ | ವ್ಯಾಪ್ತ ಹರಿಮೂರ್ತಿಯನುಅರ್ಥಿಯಿಂದಲಿ ಭಜಿಪ | ಮತಿಯ ಪಾಲಿಸುತಾಕರ್ತೃತ್ವ ಭ್ರಾಂತಿಯನು | ಹತಮಾಡಿ ಶ್ರೀಹರಿಯೆಕೀರ್ತಿವಂತನ ಗೈಯ್ಯೋ | ಆರ್ತರುದ್ಧರಣಾ 4 ಮುನ್ನವೇ ತ್ಯೆಜಸನು | ನನ್ನೆಯಿಂ ಸೂಚಿಸಿಹಚೆನ್ನ ಅಂಕಿತವನ್ನೆ | ಇನ್ನು ಸ್ಥಿರಪಡಿಸೀಘನ್ನ ಉಪದೇಶವನು | ಚಿತ್ಗಾನಿಗೆ ಇತ್ತಿಹೆನೋಮನ್ನಿಸೀಕೃತ್ಯ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಶ್ರೀ ವಿಷ್ಣು ತೀರ್ಥರು (ಮಾದನೂರು) ಶ್ರೀ ವಿಷ್ಣು ತೀರ್ಥರೆ ನಮೋ ಪ ತಾಮರಸ ಭ್ರಮರರೆಂದನಿಸೂವಲೌಕಿಕ ಸುವೈದಿಕ ಸುಶಬ್ದ ಜಾತವಸಾರ್ವಭೌಮ ಹರಿಗನ್ವಯಿಪರಂ ಭಜಿಸುತ್ತ ಇಷ್ಟಾರ್ಥವಂ ಪಡೆಯಿರೊ ಅ.ಪ. ಸವಣೂರು ಸನಿಯ ಸಿದ್ಧಾಪುರದ ಸೀಮೆಯಲಿಅವಸಿತರು ಬಾಲ ಆಚಾರ್ಯ ಭಾಗೀರ್ಥಿ ಎಂಬುವರು ಸದ್ಧರ್ಮರತರೆನಿಸಿ ಜಯತೀರ್ಥರಂ ಸೇವಿಸಲು ಬಹು ಭಕುತಿಲಿ |ಅವರನುಗ್ರಹ ಜಾತ ವರಶಿಶುವಿಗವರ ನಾಮವನಿಟ್ಟು |ಕಾಲದೊಳಗುಪನಯ ನವಂ ಮಾಡಿ ಸರ್ವ ವೇದ ವೇಂದಾಗ ಪಾರಂಗತರು ಐಜಿ ಆಚಾರ್ಯರಲಿ ಬಿಡಲು 1 ಕುಶಲತೆಯು ಮತ್ತೆ ಸೌಶೀಲ್ಯ ಗುಣನಿಧಿ ಎನಿಪಶಿಷ್ಯನಿಗೆ ಸಚ್ಛಾಸ್ತ್ರ ಪಾರಂಗತನು ಎನಿಸಿಒಸೆದು ದ್ವಿತಿಯಾಶ್ರಮಕೆ ಚೋದಿಸಿ ಕಳುಹಲವ ಗೃಹಧರ್ಮ ಸ್ವೀಕರಿಸುತ |ಎಸೆವ ಕೀರ್ತಿಲಿ ಮೆರೆದು ಶಿಷ್ಯರಿಗೆ ಶಾಸ್ತ್ರ ಬೋ-ಧಿಸುತಲಿರಲು ಸತ್ಸಂತಾನವಂತರಾಗುತಎಸೆವ ಹಂಸತೂಲಿಕ ತಲ್ಪದೊಳು ಪವಡಿಸಿರೆ ಅಪರಾಹ್ನ ರೋಗಾರ್ತರು 2 ಪತಿ ಪುರಂದರ ಸುದಾಸಾರ್ಯ ನುಡಿದುದನುಅಂತೆ ಮಂಚ ಬಾರದು ಮಡದಿ ಬಾರಳು ಎಂಬಪಿಂತಿನ್ವಚನವ ಕೇಳಿ ಚಿಂತಿಸುತ್ತಿರೆ ತಮಗೆ ಜಾತಿ ಸ್ಮøತಿ ಒದಗುತಿರಲು 3 ಘನವಾದ ಐಶ್ವರ್ಯ ಸತಿಸುತರು ಬಂಧುಗಳತೃಣಕೆ ಸಮ ತಿಳಿಯುತ್ತ ಜಯ ಗುರೂ ಹೃದ್ಗತವಅನು ಸರಿಸೆ ಅಜ್ಞಾತ ಬಗೆಯಲಿರುತಿಹನೆಂದು ವೈರಾಗ್ಯವನೆ ಪೊಂದುತ ||ಮನೆಯಿಂದ ಹೊರ ಹೊರಟು ಅನತಿ ದೂರವಸಾಗೆಘನ ಸರ್ಪ ರೂಪದಿಂ ತೋರಿ ಕೊಳೆ ಜಯತೀರ್ಥ ಮುನಿವರ್ಯ ಹೃದ್ಗತವ ತಿಳಿದು ವಸುಮತಿ ವ್ಯರ್ಥ ಸಂಚರಣೆ ಸಂತ್ಯಜಿಸುತ 4 ಶೃತಿ ಸ್ಮøತಿಗೆ ಸಮ್ಮತವು ದಶಮತಿಯ ಸಮಯವೆನುತತಿ ಹಿತದಿ ಪ್ರವಚನೆಗೆ ಪ್ರೇರಿಸಿಹ ಗುರುಮತವ ಸತ್ಕರಿಸಿ ಕಾರುಣ್ಯ ಕೊಂಡಾಡಿ ಸಾಧಿಸಲು ತೃತಿಯಾಶ್ರಮವನು ||ಹಿತದಿ ಕೈಕೊಂಡು ಮಲವ ತಾನಪಹರಿಪಸರಿತೃತಟದಲಿ ಇರುವ ಮನುವಳ್ಳಿ ಪಳ್ಳಿಯಲಿ ನೆಲಿಸುತಲಿ ವಿಹಿತ ಕರ್ಮಾಚರಿಸಿ ಸಿರಿಮತ್ಸು ಮಧ್ವ ವಿಜಯವ ಪಠಿಸುತಿಹರು 5 ಸಂಚಿತ ಸಿರಿ ವಿಷ್ಣುತೀರ್ಥರೆಂಬಂಕಿತದಿ ಮೆರೆಯುತಿಹರು 6 ಭಾಗವತ ಸಾರದುದ್ಧಾರವನುಮುಂತಾದ ಮುಕುತಿ ಸತ್ಪಂಥಗಳ ಬೋಧಿಪಗ್ರಂಥಗಳ ರಚಿಸಿ ಸುಜನೋದ್ಧಾರವನೆ ಗೈದು ಶೋಭಿಸುವರವನಿಯಲ್ಲಿ 7 ಲಕ್ಷುಮಿಯು ನರೆಯಣರನುಗ್ರಹವನೇ ಪಡೆದುದಕ್ಷಿಣದಿ ಬದರಿಕಾಶ್ರಮವೆನುತಿರೆ ಮೆರೆವತ್ರಕ್ಷ್ಯ ಮೋದೇಶ್ವರ ಪುರದಲಿ ನೆಲಿಸಿ ನೂರೆಂಟು ಸಲ ಸುಧೆ ಪ್ರವಚಿಸುತಲಿ ||ಕುಕ್ಷಿಯೊಳಗುಳ್ಳ ಸು ಕ್ಷೇತ್ರಗಳ ಸಂಚರಿಸಿ ಲಕ್ಷಿಸುತ || ಯೋಗ್ಯ ಜನಕುಪದೇಶ ಚರಿಸಲುಸ್ವಕ್ಷೇತ್ರಕೇ ಮರಳಿ ಕುಶಸರಿತು ತೀರದಲಿ ಪರ್ಣ ಶಾಲೆಯಲಿ ವಸಿಸಿ 8 ಕಾಲ ತಾ ತಿಳೀಯುತ್ತ ಶಿಷ್ಯಜನಕರಿವಿತ್ತು ಶಾಲಿವಾನ ಸಹಸ್ರ ಷಟ್ಯತೊತ್ತರವಷ್ಟಸಪ್ತತಿಯು ಮಾಘಾಸಿತ ಪಕ್ಷ ತ್ರಯೋದಶಿ ಸುಮೂಹೂರ್ತದಿ ||ಸುರರು ಭೂಸುರರೆಲ್ಲ ಜಯಘೋಷ ಗೈಯ್ಯುತಿರೆವರ ಮಹಾತ್ಮರು ಆಗ ಹೊಗಲು ವೃಂದಾವನವಪರಿಜನರು ಮುಳುಗಿದರು ದುಃಖ ಆನಂದ ಸಾಗರದಲದನೇನೆಂಬನು 9 ಅವತಾರಮಾರಭ್ಯ ಐದು ದಶ ವರ್ಷಗಳುಅವನಿಜನ ದೃಗ್ವಿಷಯರೀ ಮಹಾತ್ಮರು ತಾವುಅವಧೂತ ವೇಷದಿಂ ಭವನ ಪಾವನವೆನಿಸಿ ಪಿಂತೆ ಶುಕಮುನಿಯಂದದಿ ||ಪವನ ಮತ ಶರನಿಧಿಗೆ ಶಶಿಯು ಇಪ್ಪತ್ತೆಂಟುಪವಿತರ ಸುಲಕ್ಷಣ ಸುತನುವಿಂದುರೆ ಮೆರೆದುಅವನಿಸುರ ಶಿಕ್ಷಣ ಸದುಪದೇಶನುಷ್ಠಾನದಿಂ ಗೈದ ಕೀರ್ತಿಯುತರು 10 ಇವರ ನಾಮಸ್ಮರಣೆ ಕಲಿಮಲದ ಅಪಹರಣೆಇವರ ಸೇವೆಯ ಫಲವು ಸರ್ವಾಮಯ ಹರವುಇವರುನುಗ್ರಹವಿರಲು ವಾದಿನಿಗ್ರಹವಹುದು ಇದಕೆ ಸಂಶಯ ಸಲ್ಲದು ||ಇವರಿಹರು ಸುರತರುವಿನಂದದಲಿ ಶರಣರಿಗೆಇವರೆ ಚಿಂತಾಮಣಿಯು ಸರ್ವ ಭಯ ಹರಿಸುವರು ಇವರ ಗುಣಕೊಂಡಾಡಿ ಇವರೊಲಿಮೆ ಅರ್ಜಿಸಲು ಸರ್ವಕಾಮವು ಲಭ್ಯವು 11 ಸರ್ವಕ್ಷೇತ್ರಾಧಿಕದಿ ಭೂವರಹ ನಿಲ್ಲಿರುವಸರ್ವಭಯ ನಾಶನಕೆ ನರಹರಿಯು ಅರಿರೂಪಸರ್ವಭಕ್ತರ ಭೀಷ್ಟ ವರ್ಷಣಕೆ ಗೋಪಾಲಕೃಷ್ಣರೂಪದಿ ಇರುವನು ||ಇವರ ವೃಂದಾವನದೊಳೀ ಪರೀ ಹರಿರೂಪಪವನ ರೂಪಗಳಿಹವು ಶಿರದೊಳಗೆ ಜಯ ಮುನಿಯುಸರ್ವಋಷಿ ದೇವತೆಗಳಿಹರು ವೃಕ್ಷರೂಪದಿ ಈ ಪವಿತರ ಕ್ಷೇತ್ರದಿ 12 ಭಾಗವತ ನಿಷ್ಠಾತರೆ ||ನಮೊ ನಮೋ ಭಕ್ತಜನ ಕಾಮಧುಕ್ ಭವ್ಯಾತ್ಮನಮೋ ಶ್ರೀ ಮದಾನಂದ ಮುನಿಚರಣ ಮಧುಪರೆನಮೊ ಗುರೂ ಗೋವಿಂದ ವಿಠಲ ಪಾದಾಶ್ರಿತರೆ ನಮೊ ವಿಷ್ಣುತೀರ್ಥ ಪಾಹಿ ||
--------------
ಗುರುಗೋವಿಂದವಿಠಲರು