ದಾಸೋಹಂ ತವ ದಾಸೋಹಂ ಪ
ವಾಸುದೇವ ವಿತತಾಘಸಂಘ ತವ ಅ
ಜೀವಾಂತರ್ಗತ ಜೀವ ನಿಯಾಮಕ
ಜೀವವಿಲಕ್ಷಣ ಜೀವನದ
ಜೀವಾಧಾರಕ ಜೀವರೂಪ ರಾ
ಜೀವ ಭವಜನಕ ಜೀವೇಶ್ವರ ತವ 1
ಕರ್ಮಕರ್ಮಕೃತ ಕರ್ಮಕೃತಾಗಮ
ಕರ್ಮ ಫಲಪ್ರದ ಕರ್ಮಜಿತ
ಕರ್ಮಬಂಧ ಮಹಕರ್ಮ ವಿಮೋಚಕ
ಕರ್ಮನಿಗ್ರಹ ಕರ್ಮಸಾಕ್ಷಿ ತವ 2
ಕಾಲಾಹ್ವಯ ಮಹಕಾಲ ನಿಯಾಮಕ
ಕಾಲಾತೀತ ತ್ರಿಕಾಲಜ್ಞ
ಕಾಲಪ್ರವರ್ತಕ ಕಾಲನಿವರ್ತಕ
ಕಾಲೋತ್ಪಾದಕ ಕಾಲಮೂರ್ತಿ ತವ 3
ಧರ್ಮಯೂಪ ಮಹಧರ್ಮ ವಿವರ್ಧನ
ಧರ್ಮ ವಿಧೋತ್ತಮ ಧರ್ಮನಿಧೇ
ಧರ್ಮ ಸೂಕ್ಷ್ಮ ಮಹಧರ್ಮ ಸಂರಕ್ಷಕ
ಧರ್ಮಸಾಕ್ಷಿ ಯಮಧರ್ಮಪುತ್ರ ತವ 4
ಮಂತ್ರಯಂತ್ರ ಮಹ ಮಂತ್ರ ಬೀಜ ಮಹ
ಮಂತ್ರರಾಜಗುರು ಮಂತ್ರ ಧೃತ (ಜಿತ)
ಮಂತ್ರಮೇಯ ಮಹಮಂತ್ರಗಮ್ಯ ಫಲ
ಮಂತ್ರಮೇಯ ಜಗನ್ನಾಥ ವಿಠಲ ತವ 5