ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಷ್ಟಹರಿಸೊ ಪರಮೇಷ್ಟಿಪಿತನೆ ನೀ ಕೈ ಬಿಟ್ಟರೆ ಸೃಷ್ಟಿಯೊಳು ಪಾರುಗಾಣುವುದೆಂತೂ ಪ ಇಷ್ಟದಿಂದಲೋ ಅನಿಷ್ಟದಿಂದಲೋ ನಾನೇ ಹುಟ್ಟಿಬಂದೆನೆ ದೇವ-ನಿನ್ನಿಷ್ಟದಿಂದಲ್ಲವೇ ಅ.ಪ ಬಿಂಬನೆನಿಸಿದೆ ಎನಗೆ ಪ್ರತಿಬಿಂಬ ನಾ ನಿನಗೆ ಬಿಂಬ ಪ್ರತಿಬಿಂಬಕೆ ಉಪಾಧಿಯು ನಿತ್ಯ- ವೆಂಬನ್ವಯಕೆ ಗುಣತ್ರಯಬದ್ಧವೇ ಕಾರಣ- ವೆಂಬ ಗುಣಜೀವಸ್ವರೂಪೋಪಾಧಿಯು ಬೆಂಬಲನೀನಿದ್ದೂ ಗುಣಕಾರ್ಯಕನುವಾಗಿ ಇಂಬುಕೊಡುವೆ ಫಲಭೋಗಿಸಲೀವೇ ಎಂಬನುಡಿ ಶ್ರುತಿಶಾಸ್ತ್ರಸಿದ್ಧವು ನಂಬಿಹುದು ಜಗವೆಲ್ಲ ಸತ್ಯವು ಶಂಬರಾಂತಕ ಪಿತನೆ ಎನ್ನ ಹೃದ- ಯಾಂಬರದಿ ನಿನ್ನ ಬಿಂಬ ತೋರೈ 1 ಕಾಲಕರ್ಮಾದ್ಯಷ್ಟಗುಣಗಳೆಲ್ಲವು ನಿಜ- ವೆಲ್ಲಜಡಗಳು ಮತ್ತು ಅಚೇತನಂಗಳೈ ಶೀಲ ಮೂರುತಿ ನೀ ಪರಮ ಚೇತನನಾಗಿ ಎಲ್ಲ ಕಾಲದಿ ನಿನ್ನ ನಿಯಮನಂಗಳೈ ಕಾಲಕರ್ಮಗುಣಂಗಳೇನಿಹುದೆಲ್ಲ ಫಲಪ್ರದಾನವ ಮಾಡೆ ಶಕ್ತಿ ಜಡಕೆಂತಿಹುದಯ್ಯ ಕಾಲನಾಮಕ ನೀನೆ ಸರ್ವ ಕಾಲದಲಿ ಸ್ವಾತಂತ್ರ್ಯ ನಿನ್ನದೋ ಇಲ್ಲ ಘನ ಸಮರಿಲ್ಲ ಸರ್ವಕರ್ಮ ಫಲವೆಲ್ಲ ನೀನೆ ದಾತೃವೋ 2 ಮರ್ಮವರಿಯೆನೊ ದೇವ ಧರ್ಮಭ್ರಷ್ಟನಾದೆ ಕರ್ಮಫಲಾನುಭವಮಾಡಿ ಬೆಂಡಾದೆನು ಕರ್ಮ ತಾ ಶಿಕ್ಷಿಸಲರಿಯದು ನ್ಯಾಯ ಧರ್ಮಾಧಿಪತಿ ಭೀಕರ ಫಲಕೊಟ್ಟು ಶಿಕ್ಷಿಪಂತೆ ಧರ್ಮಮೂರುತಿ ಶುದ್ಧನಿಷಿದ್ಧಕರ್ಮಂಗಳಿಗೆ ಪೂರ್ಣಫಲವಿತ್ತು ಸಮನೆಂದೆನಿಸಿರುವೆ ಕರ್ಮಮೋಚಕ ನೀನೆ ಸಕಲ ಕರ್ಮಪ್ರದನೆಂದೆನಿಸಿ ಪೂರ್ವ- ಕರ್ಮಫಲ ಭೋಗಿಸಲು ಜನ್ಮವನಿತ್ತು ಕರ್ಮಪ್ರವಹದೊಳಿಡುವೇ 3 ವಿಮುಖನಾಗಿಹೆ ಶ್ರುತಿಸ್ಮøತಿಶಾಸ್ತ್ರಧರ್ಮಕೆ ಪ್ರಮುಖನಾಗಿಹೆ ದುಷ್ಕರ್ಮ ಮಾರ್ಗದಲ್ಲಿ ಕರ್ಮಕಲಾಪದ ಧರ್ಮ ಮರ್ಮವನರಿಯೆ ಹೆಮ್ಮೆಯಿಂದಲಿ ನಾನಾ ಕರ್ಮಕೂಪದಲಿರುವೆ ಪೆರ್ಮೆಗೋಸುಗ ಅಧರ್ಮವೆಷ್ಟೋ ಮಾಡ್ದೆ ಒಮ್ಮೆಗಾದರು ಸದ್ಧರ್ಮಾಚರಿಸಲಿಲ್ಲ ಕರ್ಮ ಅಕರ್ಮ ವಿಕರ್ಮ ಪರಿಚಯವಿಲ್ಲ ಜನ್ಮಕೆ ಧರ್ಮಪುತ್ರನೆ ದ್ವಂದ್ವಕರ್ಮಸಮರ್ಪಿಸಲು ಸನ್ಮತಿಯ ಕೊಟ್ಟಿನ್ನು 4 ಬೆಟ್ಟದೊಡೆಯನೆ ಶ್ರೀ ವೇಂಕಟೇಶ ನೀ ತುಷ್ಟಿಯಾದರೆ ನಿನ್ನಿಷ್ಟದಂತೆ ಫಲವು ಸೃಷ್ಟಿಯೊಳು ಪುಟ್ಟಿಸಿ ದುಷ್ಟಕರ್ಮದ ಪಾಶ ಕಟ್ಟಿನೊಳಿಟ್ಟೆನ್ನ ಕಷ್ಟಪಡಿಸುವರೇ ಸೃಷ್ಟೀಶ ಉರಗಾದ್ರಿವಾಸ ವಿಠಲ ಎನ್ನ ನೀನಿಟ್ಟಿರುವಷ್ಟುಕಾಲ ಧಿಟ್ಟಭಕುತಿಯ ಕೊಟ್ಟು ದಿಟ್ಟ ರಕ್ಷಿಸು ಇಷ್ಟಮೂರುತಿಯೆ ಇಷ್ಟದಾಯಕನೆಂದು ನಾನಿಷ್ಟು ನುಡಿದೆನೋ ನಿನ್ನ ಎನ್ನ ಮನೋಭೀಷ್ಟೆ ಸಲಿಸೆ ನಿನ್ನಿಷ್ಟವಯ್ಯ5
--------------
ಉರಗಾದ್ರಿವಾಸವಿಠಲದಾಸರು
ದಾಸೋಹಂ ತವ ದಾಸೋಹಂ ಪ ವಾಸುದೇವ ವಿತತಾಘಸಂಘ ತವ ಅ ಜೀವಾಂತರ್ಗತ ಜೀವ ನಿಯಾಮಕ ಜೀವವಿಲಕ್ಷಣ ಜೀವನದ ಜೀವಾಧಾರಕ ಜೀವರೂಪ ರಾ ಜೀವ ಭವಜನಕ ಜೀವೇಶ್ವರ ತವ 1 ಕರ್ಮಕರ್ಮಕೃತ ಕರ್ಮಕೃತಾಗಮ ಕರ್ಮ ಫಲಪ್ರದ ಕರ್ಮಜಿತ ಕರ್ಮಬಂಧ ಮಹಕರ್ಮ ವಿಮೋಚಕ ಕರ್ಮನಿಗ್ರಹ ಕರ್ಮಸಾಕ್ಷಿ ತವ 2 ಕಾಲಾಹ್ವಯ ಮಹಕಾಲ ನಿಯಾಮಕ ಕಾಲಾತೀತ ತ್ರಿಕಾಲಜ್ಞ ಕಾಲಪ್ರವರ್ತಕ ಕಾಲನಿವರ್ತಕ ಕಾಲೋತ್ಪಾದಕ ಕಾಲಮೂರ್ತಿ ತವ 3 ಧರ್ಮಯೂಪ ಮಹಧರ್ಮ ವಿವರ್ಧನ ಧರ್ಮ ವಿಧೋತ್ತಮ ಧರ್ಮನಿಧೇ ಧರ್ಮ ಸೂಕ್ಷ್ಮ ಮಹಧರ್ಮ ಸಂರಕ್ಷಕ ಧರ್ಮಸಾಕ್ಷಿ ಯಮಧರ್ಮಪುತ್ರ ತವ 4 ಮಂತ್ರಯಂತ್ರ ಮಹ ಮಂತ್ರ ಬೀಜ ಮಹ ಮಂತ್ರರಾಜಗುರು ಮಂತ್ರ ಧೃತ (ಜಿತ) ಮಂತ್ರಮೇಯ ಮಹಮಂತ್ರಗಮ್ಯ ಫಲ ಮಂತ್ರಮೇಯ ಜಗನ್ನಾಥ ವಿಠಲ ತವ 5
--------------
ಜಗನ್ನಾಥದಾಸರು
ಹಿಗ್ಗದಿರು ಹಿಗ್ಗದಿರು ಮನುಜಪಶುವೆ | ಮುಗ್ಗಿತಗ್ಗುವುದು ಮುಂದರಿಯದಲೆ ಮರುಳಾದೆ ಪ ಆಯುದಲಿ ದ್ರೋಣಸುತ ಕೃಪ ವಿಭೀಷಣನೇನೊ | ಶ್ರೇಯದಲಿ ದಶರಥ ನಹುಷನೇನೊ || ಈಯುದ್ದಕೆ ಮಯಾರ ಧ್ವಜ ಶಿಬಿ ಬಲಿಯೇನೊ | ಮಾಯಾ ಬಿಡುವಲ್ಲಿ ಜಡ ಭರಿತ ನೀನೇನೊ 1 ಶೂರತ್ವದಲಿ ಭೀಷ್ಮ ಅಭಿಮನ್ಯು ನೀನೇನೊ | ಘೋರ ತಪಸಿನಲಿ ವಿಶ್ವಾಮಿತ್ರನೇನೊ || ವಿರುಕುತಿಯಲಿ ಸುರಸೈನ್ಯ ನಾಯಕನೇನೊ | ಹಾರುವ ಬಿಂಕದಲಿ ಗರುಡ ನೀನೇನೊ 2 ಬಲದಲ್ಲಿ ಬಲರಾಮ ಶಲ್ಯ ಕೀಚಕನೇನೊ | ತಿಳಿವಳಿಕೆಯಲಿ ವಿದುರ ಸಂಜಯನೇನೊ || ಒಲಿದು ಪಾಡುವಲಿ ನಾರದ ತುಂಬುರನೇನೊ | ಛಲ ಮಾಡುವಲ್ಲಿ ಧ್ರುವರಾಯ ನೀನೇನೊ 3 ಭಕುತಿಯಲಿ ಪ್ರಹ್ಲಾದ ಪುಂಡರೀಕನೇನೊ | ಭುಕುತಿಯಲಿ ಅಗಸ್ತ್ಯ ಬಕ ನೀನೇನೊ || ಉಕುತಿಯಲಿ ಸೂತ ಸಹದೇವ ಶೌನಕನೇನೊ | ಶಕುತಿಯಲಿ ವಾಲಿ ಯಮರಾಯ ನೀನೇನೊ 4 ಶುಕ ಜನಕ ಸನಕಾದಿಗಳೇನೊ | ಕರ್ಣ ನೀನೇನೊ || ಭೋಗ ಬಡುವಲ್ಲಿ ಮಹಾಭಾಗ ಇಂದ್ರನೇನೊ | ವೇಗದಲಿ ಪುರುಷ-ಮೃಗನು ನೀನೇನೊ 5 ಸಖತನ ಮಾಡುವಲ್ಲಿ ಶ್ವೇತವಾಹನನೇನೊ | ನಿಖಿಳ ಕಥೆ ಕೇಳುವಲ್ಲಿ ಪರೀಕ್ಷಿತನೇನೊ || ಅಖಿಳರನು ಗೆಲುವಲ್ಲಿ ಕಾರ್ತವೀರ್ಯನೇನೊ | ಸುಖದಲ್ಲಿ ಇಪ್ಪದಕೆ ಪವನ ನೀನೇನೊ 6 ವಿತ್ತದಲಿ ನೀನು ವೈಶ್ರವಣನೇನೊ | ಮತ್ತೆ ಕ್ಷಮೆಯಲಿ ಹರಿಶ್ಚಂದ್ರನೇನೊ | ಭೃತ್ಯತನ ಪಡೆವಲ್ಲಿ ಅಕ್ರೂರ ನೀನೇನೊ | ಸುತ್ತವಲಿ ಪ್ರಿಯವ್ರತ ರಾಯನೇನೊ 7 ವ್ರತದಲ್ಲಿ ಅಂಬರೀಷ ರುಕುಮಾಂಗದನೇನೊ | ಸ್ತುತಿಯಲ್ಲಿ ಮುಚುಕುಂದರಾಯನೇನೊ || ಅತಿ ಚೆಲುವತನದಲ್ಲಿ ಮನ್ಮಥ ನಕುಲನೇನೊ | ಕ್ರತು ಮಾಡುವಲ್ಲಿ ಧರ್ಮಪುತ್ರ ನೀನೇನೊ8 ಶಾಪಗಳ ಕೊಡುವಲ್ಲಿ ಬ್ರಹ್ಮಪುತ್ರನೇನೊ | ತಾಪ ತೋರುವಲ್ಲಿ ರವಿ ಅನಳನೇನೊ | ಕೋಪ ಮಾಡುವಲ್ಲಿ ಗಿರಿಜಾರಮಣನೇನೊ | ತಾಪಸಿರ ನಡುವೆ ವಸಿಷ್ಠ ನೀನೇನೊ9 ಉನ್ನತದಲಿ ನೀನು ಮೇರು ಪರ್ವತನೇನೊ | ಘನ ಮದದಲಿ ಧೃತರಾಷ್ಟ್ರನೇನೊ || ಇನ್ನು ಮತಿಯನ್ನು ಕೊಡುವಲಿ ಗಜಮೊಗನೇನೊ | ಮುನ್ನೆ ಕವನದಲ್ಲಿ ಶುಕ್ರದೇವನೇನೊ 10 ಹಮ್ಮಿನಲಿ ಬಾಳದಿರು ಹಿತವಾಗದೊ ನಿನಗೆ | ಆ ಮಹಿಮರ ಸರಿ ನೀನಲ್ಲವೊ || ಸಿರಿ ವಿಜಯವಿಠ್ಠಲರೇಯನ್ನ | ನೆಮ್ಮಬೇಕಾದರೆ ಸೋಹಂ ನಿರಾಕರಿಸು11
--------------
ವಿಜಯದಾಸ