ನೀರಜಾಕ್ಷನಿನ್ನೂರಿಗೆ ಪೋಗುವ ದಾರಿಯ ತೋರಯ್ಯ ಪ
ತೊಳಲುವೆ ದಾರಿಯ ಕಾಣದೆ ಅ.ಪ.
ಜನ್ಮಾಂತರಕೃತ ಕರ್ಮಗಳೆಂಬುವ ಹೆಮ್ಮರಗಳು ಬೆಳೆದು
ಧರ್ಮನಿರೋಧವಿ ಕರ್ಮದ ಬಳ್ಳಿಯು ಬಿಂಮನೆ ಬಿಗಿವಡೆದು
ಲಮ್ಮಗೊಡವುಹರಿ 1
ಮೀರಿಬರಲುಘನ ಚೋರರು ಕಾದಿಹರಾರುಮಂದಿ ಮುಳಿದು
ಸಾರಿ ಬಾಯಾರಿಸುತಿರ್ಪವು 2
ದಾಂಟುವೊಡರಿದು
ಧನಕನಕಾದಿಗಳೆನಿಪ ಪಿಶಾಚಗಳನವರತವು ಬಿಡವು
ಪೋಲುತ ನಮ್ಮನು ಬಾಧಿಸುತಿರುವರು3
ಕ್ಷುದ್ರವಿಷಯಗಳು ಛಿದ್ರವಹುಡುಕುವ ವಧ್ರುಗದೇಹದೊಳು?
ಕದ್ರುಸುತರವೋಲುಪದ್ರವಗೈವವಭದ್ರದ ಭೀತಿಗಳೂ
ಜರೆಯೆಂಬುದ್ರಿಕ್ತಾಂಗನೆ4
ನರಿಗಳ ಪರಿಯಲಿ ನರಳುವರೆಲ್ಲರು ನರಕಗಳನುಭವಿಸಿ
ವರದ ವಿಠಲನಿಜ ಚರಣವೆ ನಂಬಿದೆ 5