ಕೇಳಮ್ಮ ತಂಗಿ ಕೇಳಮ್ಮ ಪ
ಕೇಳಿ ಪುರಾಣದಿ ಪೇಳಿದ ಕೃಷ್ಣನ
ಲೀಲೆಯ ಪಾಡುತ ``ಬಾಳಮ್ಮ'' ಅ.ಪ
ನಿಷ್ಟೆಯಿಂದಲಿ ಬಲು ಶಿಷ್ಟಳಾಗುತ
ದುಷ್ಟರಿಂದ ದೂ``ರಾಗಮ್ಮ'' 1
ಹರಿದಾಸರಪದ ಹರುಷದಿ ಹಾಡುತ
ಗುರು ಹಿರಿಯರ ಮನ ``ಕೊಪ್ಪಮ್ಮ'' 2
ಕಾಲ ಕಳೆಯದೆ
ಶೀಲಮತಿ ನೀ “ನಾಗಮ್ಮ'' 3
ವಿದ್ಯೆಯ ಕಲಿತು ಬದ್ಧಿವಂತ | ಳಾ |
ಗಿದ್ದರೆ ಸುಖ ಶತ “ಸಿದ್ಧಮ್ಮ'' 4
ವಂದಿಸಿ ತುಲಸಿ ವೃಂದಾವನ ಪೂಜಿಸು
ಮುಂದೆ ನಿನಗೆ ``ಆನಂದಮ್ಮ'' 5
ಹೀನರ ಬೆರೆಯದೆ ಮೌನವ್ರತದಲಿ |
ಜ್ಞಾನಿ ಜನರ ನೀ ``ನರಸಮ್ಮ'' 6
ಮೂಢ ಜನರ ಒಡನಾಡದೆ ಭಕ್ತಿಲಿ
ಮಾಡುವ ಸಜ್ಜನರ ``ಸಂಗಮ್ಮ'' 7
ಧರ್ಮದಿಂದ ಸತ್ಕರ್ಮ ಮಾಡುತ
ನಿರ್ಮಲಗೊಳಿಸಿ ಸಂತ ``ರಂಗಮ್ಮ'' 8
ಪವನ ಪಿತನ ಕಥಾಶ್ರವಣವೆ ಪುಣ್ಯವು
ಭವ ವಿದು ಕತ್ತಲು ``ಕಾಳಮ್ಮಾ'' 9
ಸದನಕೆ ಬಂದಿಹ ಬುಧರಾವರಿಸಲು
ಮಂದಬಲು ನಿನಗದ ``ರಿಂದಮ್ಮ'' 10
ಎಂದೆಂದಿಗು ಪರನಿಂದೆಯ ಮಾಡದೆ
ಮಂದಿರದಿರುವದೆ ``ಚಂದಮ್ಮ'' 11
ಸಾರಿದ ಜನರಘದೂರಗೈದು ಹರಿ
ತೋರುವ ನುಜಗುರು ``ಈರಮ್ಮ'' 12
ಅತ್ತಿಯ ಮನಿಗೆ ಹೆತ್ತವರಿಗೆ
ಉತ್ತಮ ಕೀರ್ತಿ ``ತಾರಮ್ಮ'' 13
ಗೋವಿಪ್ರಾಳಿ ಸೇವಿಸುತಿರುವದೆ
ಕೋವಿದರಿಗೆ ಬಲು ``ಜೀವಮ್ಮ'' 14
ಭಾವದೊಳಗೆ ಪರದೇವನೆ ಪತಿಯೆಂದು
ಪಡಿ ``ಭೋಗಮ್ಮ'' 15
ಭೇದಜ್ಞಾನ ಸಂಪಾದಿಸು ಕ್ಷಮಿಸುವ
ಶ್ರೀಧರ ನಿನ್ನಾಪ ``ರಾಧಮ್ಮ'' 16
ಕೋಪದಿ ಪರರಿಗೆ ತಾಪವ ಬಡಿಸಲು
ಲೇಪವಾಗುವದು ``ಪಾಪಮ್ಮ'' 17
ಇಂಗಡಲಾತ್ಮಜನಂಘ್ರಿ ಸರೋಜಕೆ
ಸತಿ ``ತುಂಗಮ್ಮ'' 18
ದಾಸಜನರ ಸಹವಾಸದೊಳಿರುವದೆ
ಕಾಶಿಗಿಂತ ವಿ``ಶೇಷಮ್ಮ'' 19
ಕಲಿಯುಗದಲಿ ಸಿರಿನಿಲಯನ ನೆನೆದರೆ
ಸುಲಭ ಮುಕ್ತಿ ತಿಳಿ ``ಕಂದಮ್ಮ'' 20
ಪತಿಯು ಸದ್ಗತಿಗೆ ಗತಿ ಎಂದರಿತಹ
ಮತಿಯುತ ಸತಿಯೆ ``ಯವನಮ್ಮ'' 21
ಮಧ್ವಸಿದ್ಧಾಂತದ ಪದ್ಧತಿ ತಪ್ಪದೆ
ಇದ್ದರೆ ಹರಿಗತಿ ``ಮುದ್ದಮ್ಮ'' 22
ಸೋಗಿಗೆ ನೀ ಮರುಳಾಗಿ ನಡೆದರೆ
ಯೋಗಿ ಜನರ ಮನ ``ಕಲ್ಲಮ್ಮ'' 23
ಶೀಲೆ ಗುಣದಿ ಪಾಂಚಾಲೆಯು ಎಲ್ಲ
ಬಾಲೆಯರೊಳು ``ಮೇಲಮ್ಮ'' 24
ನೇಮದಿ ನಡೆದರೆ ಪ್ರೇಮದಿ ಸಲಹುವ
ಶಾಮಸುಂದರನು ``ಸತ್ಯಮ್ಮ'' 25