ಭೇದ ಪೇಳುವೆನೆ ತಮೊ ಯೋಗ್ಯ ಪೂರ್ಣ
ಬೊಧರ ಮತ ಬಿಡುವನೆ ಮುಕ್ತಿಯೋಗ್ಯ ಪ
ಸತ್ಯ ನುಡಿವನೆ ಅಪಕಾರಿ ಪರರ
ವಿತ್ತಪಹರಿಸುವನೆ ಬಲು ಉದಾರಿ
ಹತ್ಯ ಮಾಡುವನೆ ಉಪಕಾರಿ
ನಿತ್ಯ ಚಿತ್ತ ಚಂಚಲಿಸುವನೆ ಧರ್ಮದಾದಿ 1
ಪರನಾರಿ ಸಹೋದರ ಹೀನ ಕಂಡಾ ಉ
ತ್ತರಗಳನಾಡುವನೆ ಆವಾಗ ಮೌನ
ತರತಮ್ಮ ಪೇಳುವನೆ ಕೋಣ ತನ್ನ
ಹರಣವೊಪ್ಪಿಸಿಕೊಂಬುವನೆ ಪ್ರವೀಣಾ 2
ಭ್ರಷ್ಟನೆನೆಸುವನೆ ಧನ್ಯ ಪರರ
ಇಷ್ಟಾರ್ಥ ಕೆಡಿಸುವನೆ ಬಲು ಮಾನ್ಯ
ಕಷ್ಟ ಬೇಡುವನೆ ರಾಜನ್ಯ ವಿಜಯ
ವಿಠ್ಠಲನ್ನ ಪೂಜೆ ಮಾಡುವನೆ ಗುಣಶೂನ್ಯ 3