ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಕಾಲಜ್ಞಾನ) ಮೈಯ್ಯವ ಮರಿಯ ಬ್ಯಾಡಿರೋ | ಮತ್ರ್ಯದೊಳಗ ಕಲಿರಾಯ ನರಸುತನ | ಪ್ರಬಲ ವಾಯಿತು ಕೇಳಿರೋ ಪ ಬೀಳು ಬಿದ್ದಾವೋ ಧರ್ಮದಾ ಭೂಮಿಯು | ಅಧರ್ಮವೇ ಹೆಚ್ಚೀತು | ಹೇಳಲಿನ್ನೇನವಗುಣಿಗಳು ಪ್ರಕಟಿಸಿ | ಕೇಡು ತಂದಾರು ಜಗಕೆ | ಖೂಳರ ಹಿರಿತನವು ಒಳ್ಳೆವರಾ |ಮಾನ ಮನ್ನಣೆ ಹೋದಾವು | ಮನೆಯ ಕೊಂಡುಂಬುವರು 1 ಮರ್ಯಾದೆಗಳ ಬಿಟ್ಟಾರೋ | ಕುಲಕ ಮಾತವ ತಾಹರು | ಹಗೆ ಹಾರೋ | ಹುಸಿನುಡಿದು ಮನೆ ದೈವವನೇ ಮಾರಿ | ಹದಗೆಟ್ಟು ಹೋಗುವರೋ 2 ಒಡಲು ಕಾಮಾಟಿಕೆಯಾ ಎರಡರಿಂದ | ಕೋಣ-ನಂದದಿ ಬಗಿದು | ಪಡಿ ಕೊಟ್ಟು ಸಲಹುವ ಒಡಿಯ ನೆಚ್ಚರ ವಿಲ್ಲಾ | ಮರಹು ಕತ್ತಲೆ ಮುಸುಕಿ | ಪೊಡವಿಲಿ ಭಕುತಿ ಮಾರ್ಗ ಮುಗ್ಗಿತು | ಎಲ್ಯಾರಿದ್ದರ ಹೋಲಿಕೆಯು 3 ಕಡಲ ಶಯನನ ದಾಸನೆಂದರೆ ಬಾಗರು | ನೀಚರಿಗೆರಗುವರು ಕನ್ಯರೈದು ವರುಷಕ ಗಂಡನ | ಸಂಗವ ಬಯಸುವರು | ಇನ್ನೇನು ಏಳು ಬರುಷದ ಬಾಲೇರು | ಗರ್ಭವ ಧರಿಸುವರು | ಅಣ್ಣಾ ತಂಗಿಗೆ ಮದುವೆ ಮುಂದಕ | ಆದಾವೋ ಜಗದೊಳಗ | ಜಾತಿ ಸಂಕರ ವಾಹುದು 4 ಯಾತ್ರೆಯು ನಿಲ್ಲುವವು | ನೀರು ತೋರವೆಲ್ಲಿ 5 ಶಾಸ್ತ್ರಗಳು ಮರೆವುದು | ಸಾರಿದಾ ಬೋಧವಿದು6
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಎಂತು ಮರುಳಾದೆ ನೀ ಯದಿಯ ಬಿಗುವಿನಲಿ ತಿರುಗಿ | ಪಂಥದಲ್ಲಿ ಕೆಡಲಿಬೇಡ ಎರಡು ದಿನ | ಸಂತೆ ನೆರೆದಂತೆ ಮೂಢ ಇಪ್ಪದಿದು | ಸಂತತ ತೊರೆದು ಬಾಡೊ ಪ್ರಾಣಿ ಪ್ರಾಣಿ ಪ ವಿಂಚುಗೂಳನು ತಿಂದು ಮನೆ ಮನೆಗಳು ತಿರುಗಿ | ಸಂಚಿತಾರ್ಥವ ತಿಳಿಯದೆ ಮರುಳಾದ | ಪರ | ಪಂಚವನು ನೀ ಕಳಿಯದೆ ವ್ಯರ್ಥಾಯ | ವಂಚನಿಂದಲಿ ನಡೆದು ಬಾಯಿ ತೆರೆದು | ಹಲ್ಲನು | ಹಂಚಿಕೆ ತೋರಿದಂತೆ ಮೃತ್ಯುವಿನ | ಪಂಚದಲಿ ಸೇರಿದಂತೆ | ಆಗುವುದು | ಕಂಚು ಕೆಳಗೆ ಬಿದ್ದಂತೆ ಪ್ರಾಣಿ 1 ನುಗ್ಗು ನುಸಿಯಾಗದಿರು | ನೂಕು ನಿನ್ನಹಂಕಾರ | ಮುಗ್ಗದಿರು ಈ ಬಲಕಿಗೆ ಸ್ಥಿರವಾಗಿ | ಬಗ್ಗು ನಡೆವಳಿ ನಡೆದು | ವೆಗ್ಗಳದ ನಡೆವಳಿ ನಡೆದು | ವೆಗ್ಗಳದ ಧರ್ಮದಾ ಸುಗ್ಗಿಯಲಿ ದಿನವ ಹಾಕೊ | ಬಿಡು ಬಿಡು ಅಗ್ಗಳಿಕೆತನವೆ | ಸಾಕು ಆವಾಗ ತೆಗ್ಗಿಕೊಂಡಿರಲಿ ಬೇಕು | ಪ್ರಾಣಿ 2 ಇನ್ನಾದರೂ ಕೇಳು | ಪುಣ್ಯವಂತರ ಕೂಡು | ನಿನ್ನವರು ನಿನಗೆ ದಾರೊ | ಕಣ್ಣಾಗೆ ಎಣ್ಣೆ ಬಿದ್ದಂತೆ ಸಾರೊ ಬಾಯಿಂದ | ಬೆನ್ನಿಗೆ ಬಂದ ವಿಚಾರೊ ತುದಿಯಲಿ | ಮಣ್ಣು ಮಣ್ಣನೆ ಕಲಿತು ಹೋಗುವುದು ನಿಶ್ಚಯವು | ಚೆನ್ನಾಗಿ ಎಚ್ಚೆತ್ತುಕೋ ಈ ಮಾತಿಗೆ | ಖಿನ್ನನಾಗುವದೇತಕೊ ಸಾವಿರಕು | ಮುನ್ನಿಲ್ಲವೊ ಮನಸಿತೊ ಪ್ರಾಣಿ 3 ವೇದಶಾಸ್ತ್ರವನರಿಯೆ ಆದಿಪುರಾಣಗಳು | ಅದ್ವೈತ | ವಾದವರ ಕೂಡದಿರು ಇದೆ ಮಿಗಿ ಲಾದರು ಮರಿಯದಿರು ಉತ್ತಮ | ಸಿರಿ ವಿಜಯವಿಠ್ಠಲನ ಶ್ರೀ | ಪಾದವನು ಒಂದೇ ಭಕ್ತಿಯಿಂದಲಾ | ರಾಧಿಸು ಇದಕೆ ಯುಕ್ತಿ ಕಡಿಯದಲೆ | ಮಾಧವನು ಕೊಡುವ ಮುಕ್ತಿ ಪ್ರಾಣಿ4
--------------
ವಿಜಯದಾಸ
ನೀರೊಳು ಮುಳುಗಿದಡೇನು ಫಲ ಪ (ಸಾರವ)ನೋದಿದಡೇನು ಫಲ ಅ.ಪ ಧರ್ಮದಾನದಿಂದೇನು ಫಲ 1 ಹರಿ ಹರಿಯೆಂದರದೇನು ಫಲ 2 ಸ್ತುತಿ ಪೂಜೆಗಳಿಂದೇನು ಫಲ 3 ವ್ರತಗಳ ಮಾಡಲದೇನು ಫಲ 4 ತನುವನು ಪೊರೆದರದೇನು ಫಲ || ಶ್ರೀನಿವಾಸನ ಪಾದವ ಸ್ಮರಿಸದೆ ದಿನವನು ಕಳೆದರದೇನು ಫಲ 5
--------------
ಸದಾನಂದರು
ಬೇಸಾಯ ಮಾಡಬೇಕು ಬೇಸಾಯ ಮಾಡಬೇಕು ಪ ಹೃದಯವೆಂಬ ಕ್ಷೇತ್ರದಲಿ ಬೇಸಾಯ ಮಾಡಬೇಕು ಅ.ಪ ಮಧ್ವಾಚಾರ್ಯರವರ ಗ್ರಂಥಗಳೆಂಬ ಸರೋವರ ತುಂಬಿಹುದು ಬುದ್ಧಿ ಜಲವ ವರಗುರುಗಳೆಂಬ ತೂಬಿನಲಿ ತರಲಿಬೇಕು ಶುದ್ಧ ಧರ್ಮದಾಚರಣೆಗಳೆಂಬ ನೇಗಿಲ ಪಿಡಿಬೇಕು ಪರಿ ನೆಲವನುಳಲಿಬೇಕು 1 ತತ್ವಜಲವು ಹರಿದೋಡದ ಪರಿಯಲಿ ತೆವರಿ ಹಾಕಬೇಕು ಸುತ್ತಲು ದುರ್ಜನ ನರಿಗಳ ತಡಿಯಲು ಬೇಲಿ ಹಾಕಬೇಕು ಉತ್ತಮ ರೀತಿಯ ಭಕುತಿ ಪೈರುಗಳ ನಾಟಿ ಮಾಡಬೇಕು ಮತ್ತೆ ಪೈರುಗಳು ಒಣಗದಂತೆ ಜಲವನು ಹಾಯಿಸುತಿರಬೇಕು 2 ಬೆಳೆಯುವ ವಿಷಯದ ಅನುಭವದಾಸೆಯ ಕಳೆಯು ಕೀಳಬೇಕು ಕೊಳೆವೆಯ ರೋಗಕೆ ಸಜ್ಜನ ಸಂಘದ ಔಷಧಿ ಕೊಡಬೇಕು ಕಲಿಪುರುಷನ ತಲೆಯೆಂಬ ಗೊಬ್ಬರವ ತುಳಿಯುತಲಿರಬೇಕು ಕುಳಿತೆಡೆಯಲಿ ವರಭಕುತ ಪ್ರಸನ್ನನು ಕೊಡುವ ಮುಕುತಿ ದವಸ 3
--------------
ವಿದ್ಯಾಪ್ರಸನ್ನತೀರ್ಥರು
ಭೇದ ಪೇಳುವೆನೆ ತಮೊ ಯೋಗ್ಯ ಪೂರ್ಣ ಬೊಧರ ಮತ ಬಿಡುವನೆ ಮುಕ್ತಿಯೋಗ್ಯ ಪ ಸತ್ಯ ನುಡಿವನೆ ಅಪಕಾರಿ ಪರರ ವಿತ್ತಪಹರಿಸುವನೆ ಬಲು ಉದಾರಿ ಹತ್ಯ ಮಾಡುವನೆ ಉಪಕಾರಿ ನಿತ್ಯ ಚಿತ್ತ ಚಂಚಲಿಸುವನೆ ಧರ್ಮದಾದಿ 1 ಪರನಾರಿ ಸಹೋದರ ಹೀನ ಕಂಡಾ ಉ ತ್ತರಗಳನಾಡುವನೆ ಆವಾಗ ಮೌನ ತರತಮ್ಮ ಪೇಳುವನೆ ಕೋಣ ತನ್ನ ಹರಣವೊಪ್ಪಿಸಿಕೊಂಬುವನೆ ಪ್ರವೀಣಾ 2 ಭ್ರಷ್ಟನೆನೆಸುವನೆ ಧನ್ಯ ಪರರ ಇಷ್ಟಾರ್ಥ ಕೆಡಿಸುವನೆ ಬಲು ಮಾನ್ಯ ಕಷ್ಟ ಬೇಡುವನೆ ರಾಜನ್ಯ ವಿಜಯ ವಿಠ್ಠಲನ್ನ ಪೂಜೆ ಮಾಡುವನೆ ಗುಣಶೂನ್ಯ 3
--------------
ವಿಜಯದಾಸ
ಕಾಯೊ ಗೋವಿಂದ ಕಾಯೊ ಮುಕುಂದಮಾಯದ ತಡಿಯ ತಪ್ಪಿಸೊ ನಿತ್ಯಾನಂದ ಪ.ನಾನಾ ಯೋನಿಯ ಸುತ್ತಿ ನೆಲೆಗಾಣದಂತಾದೆನೀನೊಲಿದಿಂದೀ ಜನ್ಮವ ಪಡೆದೆಜ್ಞಾನ ಹೊಂದಲಿಲ್ಲ ಧರ್ಮದಾಚರಣಿಲ್ಲಏನು ಗತಿಯೊ ಎನಗೆ ಮುಂದೆಸಿರಿನಲ್ಲ1ಮರ್ಕಟಗೆ ಹೊನ್ನಕೊಡ ದೊರೆತಂತಾಯಿತುಮೂರ್ಖವೃತ್ತಿಯಲಿ ಆಯುಷ್ಯ ಹೋಯಿತುನರ್ಕಸಾಧನ ಘನವಾಗಿದೆ ಪುಣ್ಯ ಸಂಪರ್ಕವ ಕಾಣೆನೈ ಕರುಣಿಗಳರಸ 2ಎನ್ನ ತಪ್ಪಿನ ಹೊಳೆ ಒಳಗೊಂಬುದು ಒಂದೆನಿನ್ನ ದಯದ ಶರಧಿಯಲ್ಲದೆಇನ್ನೇನು ಮಾರ್ಗವು ಸಿಲುಕದು ತಂದೆ ಪ್ರಸನ್ನವೆಂಕಟಪತಿಹರಿದೀನಬಂಧು3
--------------
ಪ್ರಸನ್ನವೆಂಕಟದಾಸರು
ಮೋರೆಯ ಕಾಂತಿಗೆ ಹಚ್ಚಿರೋ ಕಿಚ್ಚಾಮರುಳಾಗುತಿರುತಿಹನವ ಹುಚ್ಚಾಪಯೋನಿಯ ಮುಖ ನೋಡೆ ಎಲ್ಲಕೆಹೇಸಿಕೆತಾನೆ ರಕ್ತವ ನಿತ್ಯತವಿಸುತಿಹುದುಏನೇನು ಶುಚಿಯಲ್ಲ ಇಂತು ವಿವೇಕವಿಲ್ಲಏನು ಕಾರಣ ಮೋಹ ಪಡುವರೋ1ನರಕಾಣುವ ಪೂರಿತವದು ಭಗವದುಭರದಿ ದುರ್ಗಂಧವಾಸನೆಬಹುದುಸರಸಿಜೋದ್ಭವನಾಗಲಿ ಶಿವನೆ ತಾನಾದರಾಗಲಿಮರುಳೆ ಪುನಃ ಜನ್ಮಕೆ ತಾರದೆ ಬಿಡುವುದೇ2ಚಕ್ರಿ ಖಂಡವು ಆಸ್ತಿ ಚದುರಸ್ತಿರೊಪಾಗಿಕರ್ಮವೆಂಬುದಕೆ ಸ್ಥಾನವಾಗಿಹುದುನಿರ್ಮಳ ಚಿದಾನಂದ ವಸ್ತುವ ತಿಳಿಗೊಡದಧರ್ಮದಾ ಪಥದಲ್ಲಿ ಕೆಡಹುತಿಹುದು3
--------------
ಚಿದಾನಂದ ಅವಧೂತರು