ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂಬಿ ನೆನೆಯೋ ಹರಿಯನಾಮ|ವಿಡಿದು ಘನ ಪ್ರೇಮಾ| ಭಾವಿಸೆಲೋ ನಿಷ್ಕಾಮಾ| ಇಂಬಾಗಿ ಹೊರೆವನು ನೇಮಾ ಮಂಗಳ ಧಾಮಾ ಪ ಹೆಸರಿಟ್ಟು ಹೋಲಿಸಿ ಕರೆದಾಜಮಿಳಗ ವರದಾ| ನೋಡೆಲೋ ಹರಿ ಬಿರುದಾ| ವಸುಧಿಲಿ ಭಕುತಿಂದ ಬೆರೆದಾವಗೆ ನೆರದಾ 1 ಸಕಲಧರ್ಮಗಳಿಂದವ ಜಾರಿ ಯನ್ನ ಚರಣವ ಸಾರಿ| ಭಜಿಸೆಂದು ಉದಾರಿ| ಪ್ರಗಟದಿ ಅರ್ಜುನಗ ಸಾರಿದನೋ ಮುರಾರಿ2 ಇನ್ನೊಂದು ಸಾಧನವು ಸಲ್ಲಾ ಇದರಿಂದಧಿಕಿಲ್ಲಾ| ತಂದೆ ಮಹಿಪತಿ ಸೊಲ್ಲಾ| ಮನ್ನಿಸಿ ನಡೆಯಲು ಸುಲಭ ಕೈವಲ್ಯಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮನೆ ಮನೆಯು ಹರಿಯ ಆಲಯವಾಗಬೇಕು ಪ ಜನಗಳು ಸದಾಚಾರ ಶೀಲರಾಗಬೇಕು ಅ.ಪ ಭೂತ ಸರ್ಗದಲಿ ಹೊಸ ನೀತಿಗಳ ಕಲ್ಪನೆಯು ಘಾತಕವು ಲೋಕಹಿತಕೆಂದರಿಯದೆ ಜಾತಿ ಬೇಡೆನ್ನುವರ ರೀತಿನೀತಿಗಳು ಆ ಪಾತರ ರಮಣೀಯವೆಂಬುದ ತೋರಬೇಕು 1 ಅಸ್ತವಾಗಲಿ ಜಾತಿ ಮತ ಭೇದವೆಲ್ಲವು ಸ್ವಸ್ಥವಾಗುವುದೆಂದು ಭಾರತವು ಎನ್ನುವರು ಮಸ್ತಕದಿ ಕರವಿಟ್ಟು ಕುಳಿತುಕೊಳ್ಳುವ ತೆರದಿ 2 ಬಹುಮತವು ಎಮ್ಮದೆಂಬುವ ಮದವು ಬೆಳೆಯುತಿರೆ ಸಹನವೇ ಸಾಧುಜನಗಳಿಗೆ ಶರಣ ಇಹಪರಗಳಲ್ಲಿಯೂ ಪ್ರಸನ್ನ ಹರಿ ಸಲಹುವನು ಕುಹಕ ಮಾರ್ಗವು ಬೇಧ ಸಹಜ ಧರ್ಮಗಳಿಂದ 3
--------------
ವಿದ್ಯಾಪ್ರಸನ್ನತೀರ್ಥರು
ಲೋಕನೀತಿ ಏನು ಮಾಡಿದರೇನು ಹಾನಿಯಾಗದು ಪಾಪ ಶ್ರೀನಿಕೇತನನ ದಿವ್ಯನಾಮ ನೆನೆಮನವೆ ಪ ಕ್ಷಣ ಪದಕಮಲಗಳ ಸ್ಮರಿಸಿ ಮನದೊಳಗೆ ಪ್ರತಿ ಕ್ಷಣಕ್ಷಣದಿ ಹರಿ ಮಹಿಮೆ ಭಜಿಸಿ ಭಕ್ತಿಯಲಿ ತೃಣ ಘನದೊಳಿಹನು ಹರಿ ಎನುತ ಚಿಂತಿಸಿ ಮನದಿ ಪ್ರಣವ ಪ್ರತಿಪಾದ್ಯನಂಘ್ರಿಯ ಭಜಿಸದನಕ 1 ಕಪಟನಾಟಕ ಸೂತ್ರಧಾರಿ ಶ್ರೀ ಹರಿಯ ಗುಣ ಅಪರಿಮಿತ ಮಹಿಮೆಗಳ ಭಜಿಸಿ ಹಿಗ್ಗುತಲಿ ಚಪಲ ಬುದ್ಧಿಗಳಿಂದ ತಪಿಸಿ ಕಂಗೆಡದೆ ಮನ ಅಪರೂಪ ಹರಿನಾಮ ಜಪ ಮಾಡದನಕ 2 ದಾನಧರ್ಮಗಳಿಂದ ಧನ್ಯನಾದೆನು ಎನಲು ಹಾನಿಯಾಗೋದು ಆಯು ಪ್ರತಿ ನಿಮಿಷದಿ ಸ್ನಾನ ಜಪತಪದೊಳಗೆ ಯಾರೆನಗೆ ಸರಿ ಎನದÉ ಮೌನದಿಂದ್ಹರಿ ನಾಮ ಧ್ಯಾನಿಸುವತನಕ 3 ಕ್ಲೇಶ ಆನಂದಗಳು ಈಶನಾಜ್ಞೆ ಇದೆಂದು ವಾಸುದೇವನೆ ಜಗತ್ಪ್ರೇರಕನು ಎಂದು ಶ್ವಾಸ ಬಿಡುವ ಶಕ್ತಿ ಲೇಸು ತನಗಿಲ್ಲ ಸ- ರ್ವೇಶ ನಿನ್ನಧೀನವೆಂದರಿವ ತನಕ4 ಗಾತ್ರ ಶೋಷಣೆಯಾಕೆ ಪಾರ್ಥಸಖನಂಘ್ರಿಗಳ ಕೀರ್ತಿಸುತ ಮನದಿ ರಾತ್ರಿ ಹಗಲು ಕಮಲನಾಭ ವಿಠ್ಠಲನ ಶ್ರೀಮೂರ್ತಿಯನೆ ನೆನೆನೆನೆದು ಸುಖಿಯಾಗೊ ಮನವೆ5
--------------
ನಿಡಗುರುಕಿ ಜೀವೂಬಾಯಿ
ಹಣವೆನಲು ಹಣವಲ್ಲ ಹಣವಿಲ್ಲದವರಿಲ್ಲ ಪ ಗಣಿಸಲು ಮಹಾತ್ಮರೆ ಹಣವಂತರಯ್ಯ ಅ.ಪ ಹಣವು ವಿದ್ಯೆಯು ತಪಸು ಊಂಛ ವೃತ್ತಿಗಳು ಬ್ರಾ- ಹ್ಮಣಗೆ ಕ್ಷತ್ರಿಯರಿಂಗೆ ಶೌರ್ಯಾದಿಗಳ್ ಘನಚಮತ್ಕøತಿ ಯುಕ್ತಿಗಳು ವೈಶ್ಯರಿಗೆ ಶೂದ್ರ ಜನಕೆ ಭೂಪರಿಚರ್ಯ ಕೃಷ್ಯಾದಿಗಳೆ ಹಣವು 1 ಸಟೆ ಕಪಟ ಬಾಯಬಡುಕತನ ತಸ್ಕರ ಅಧರ್ಮಗಳಿಂದಲಿ ಘಾಸಿಯಿಂ ಗಳಿಸಿರುವ ಲೇಶವಾದರು ಪುಣ್ಯ- ರಾಶಿಯನು ಕೆಡಿಸದೇ ಲೇಸು ಮಾಡುವದೇ 2 ಅತ್ಯಾಸೆ ಪಿಶುನತೆಯು ತಾಮಸರಿಗೆ ಸತ್ಯ ಸಂಕಲ್ಪ ಗುರುರಾಮ ವಿಠಲನ ಸ- ರ್ವತ್ರ ಚಿಂತಿಸುವವಗೆ ಕೈತುಂಬ ಹಣವೂ 3
--------------
ಗುರುರಾಮವಿಠಲ