ಒಟ್ಟು 7 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೆಟ್ಟು ಹೋಗಬೇಡ ಮನುಜ ಸಾರಿ ಹೇಳುವೆ ಮನವ ಮುಟ್ಟಿ ಭಜಿಸೋ ಹರಿಯ ಶ್ರೀ ಕೃಷ್ಣ ಕಾಯುತಾನೆ ಪ ಆನೆಯಂತೆ ಹರಿವುದೊಂದು ಹೀನ ಮನವ ಹರಿಯಬಿಟ್ಟು ನೀನು ವಿಷಯವನ್ನು ಬಯಸಿ ನಾನಾನರಕದಲ್ಲಿ ಬಿದ್ದು 1 ದಾನ ಧರ್ಮಗಳನು ಬಿಟ್ಟು ಬರಿಯ ತನುವದಂಡಿಸುತ್ತ ಪುಣ್ಯ ತೀರ್ಥಸ್ನಾನಬಿಟ್ಟು ವಿಷ್ಣು ಮೂರ್ತಿಧ್ಯಾನ ತೊರೆದು 2 ಗಂಟು ಗಡಿಗೆ ಇರಲುನಿನಗೆ ನೆಂಟರಿಷ್ಟರೆಂದು ಬಂದು ಪಂಟಿಯನ್ನು ತೆಗೆವರೆಲ್ಲ ಅಂಟಿ ಬೆನ್ನಬರುವರಿಲ್ಲ 3 ಪಂಡಧರನ ದಂಡು ಬಂದು ದಂಡೆಗೆ ದಂಡೆ ಬಿಗಿದು ಕಟ್ಟಿ ಮಕ್ಕಳು ಬರುವನೋ 4 ನಿನ್ನ ನೀನೆ ತಿಳಿದುಕೊಂಡು ಚೆನ್ನಿಗನ ಕೂಟದಲ್ಲಿ ಚಿನ್ಮಯಾತ್ಮಕ ಲಕ್ಷ್ಮೀಪತಿಯ ಮುನ್ನಭಜಿಸೋ ಜನ್ಮವಿಲ್ಲ 5
--------------
ಕವಿ ಪರಮದೇವದಾಸರು
ದೊರೆವನಲ್ಲವೋ ಹರಿ ದೊರೆವನಲ್ಲವೊ ಪ ಪರಮಯೋಗನಿಷ್ಠೆಯಿಂದ ಇರುಳು ಹಗಲು ಸಮಾಧಿಯಲ್ಲಿ ಇರುವ ಮಹಾಯೋಗಿಗಳಿಗೆ ಅರಿಯೆ ಸಾಧ್ಯವೇ ಅ.ಪ ಸಕಲ ದಾನಧರ್ಮಗಳನು ಸರ್ವಕ್ರತುಗಳನ್ನು ಮಾಡೆ ಶಕುತರಾಗಲರಿಯರೆಂದಿಗು ಶಾಙ್ಗಪಾಣಿಯಂ 1 ರಚ್ಚೆಗಿಕ್ಕಿ ಕಾಣಬಹುದೇ ರಾಜೀವಾಕ್ಷನ 2 ಪಾಮರ ತಾನೆಂದು ಸಕಲ ನೇಮನಿಷ್ಠೆಯಿಂದಲವನ ನಾಮ ಸ್ಮರಿಸೆ ಸುಲಭನಹನು ಗುರುರಾಮವಿಠ್ಠಲನು 3
--------------
ಗುರುರಾಮವಿಠಲ
ಬಂದ-ಬಂದ _ ಇಂದಿರೇಶ ನಂದನಂದನಾ ನಿಖಿಳ ಜನಕ ಕಂಧರಾಶ್ರಯಾ ಪ ಬಂದ ಬಂದ ಭಜಕ ಬಂಧು ಮಂದರಾದ್ರಿಧರ ಅರ- ವಿಂದನಯನ ಸುಂದರಾಂಗ ಸಿಂಧುಶಯನ ನಳಿನನಾಭ ಅ.ಪ. ನೀಲಮೇಘ ಶ್ಯಾಮಸುಂದರಾತನಿಗೆ ಮೇಲುಸಮರು ಇಲ್ಲವೆನಿಸಿದ ಲೀಲೆಯಿಂದ ಜಗವ ಸೃಜಿಸಿ ಪಾಲಿಸುತ್ತ ಮತ್ತೆ ಅಳಿಸಿ ಆಲದೆಲೆಯಮೇಲೆ ಸಿರಿ ಲೋಲನಾಗಿ ಮೆರೆವ ಕೃಷ್ಣ 1 ಐದು ರೂಪದಿಂದ ಕ್ರೀಡಿಪಾ ಪ್ರಕೃತಿ ಬೋಧ್ಯ ಸಿರಿಗುನಾಥ ನಾಯಕಾ ಆದಿಮಧ್ಯ ಅಂತ್ಯ ಶೂನ್ಯ ಮೋದಪೂರ್ಣ ಜ್ಞಾನಕಾಯ ಮೋದ ಮುನಿಯ ಹೃದಯಸದನ ಗೋಧರಾತಪತ್ರ ಶ್ರೀಪ 2 ಆದಾನಾದಿ ಕರ್ತ ಬ್ರಹ್ಮನೂ ದಿವಿಜ ಸಾಧುಸಂಘ ಸೇವೆ ಗೊಂಬನೂ ವೇದವೇದ್ಯ ವೇದ ವಿನುತ ವೇದ ಭಾಗಗೈದು ಪೊರೆದ ಛೇದ ಭೇದರಹಿತ ಗಾತ್ರ ಸಾಧು ಪ್ರಾಪ್ಯ ಬಾದರಾಯಣ 3 ದಾಸಜನಕೆ ಮುಕ್ತಿನೀಡುವ ಮಹಿ- ದಾಸಕಪಿಲ ಪೂರ್ಣ ಕಾಮನೂ ದೋಷ ದೂರ ನಾಶರಹಿತ ವಾಸುದೇವ ಕ್ಲೇಶವಿದೂರ ಈಶವಿಧಿಗಳನ್ನು ಕುಣಿಪ ಕೇಶವಾದ್ಯನಂತ ರೂಪ4 ಮೊತ್ತಜಗಕೆ ಸತ್ತೆನೀಡುವಾ ನಿಖಿಳ ಸತ್ಯ ಜಗದ ಚೇಷ್ಟೆನಡೆಸುವಾ ಮೊತ್ತಶಬ್ದ ಘೋಷವರ್ಣ ಮತ್ತೆ ಪ್ರಣವ ಮಂತ್ರಗಣದಿ ನಿಖಿಳ ಯಜ್ಞ ಭೋಕ್ತನಾಥ ಅಂಗಭೂತ 5 ಜಿಷ್ಣುಸೂತ ಕೃಷ್ಣೆಕಾಯ್ದವಾ ಸ್ವರತ ವಿಷ್ಣು ಪುರುಷಸೂಕ್ತ ಸುಮೇಯಾ ವಿಶ್ವಕರ್ತ ವಿಶ್ವಭೋಕ್ತ ವಿಶ್ವರೂಪ ವಿಶ್ವಭಿನ್ನ ವಿಶ್ವವ್ಯಾಪ್ತ ಶಶ್ವದೇಕ ತೈಜಸ ಪ್ರಾಜ್ಞತುರ್ಯ 6 ಸತ್ಯಧರ್ಮಗಳನು ಕಾಯುವಾ ದುಷ್ಟ ದೈತ್ಯತತಿಯ ದಮನಗೈಯ್ಯುವಾ ಮತ್ಸ್ಯಕೂರ್ಮ ಕೋಲ ಚರಿತ ಭೃತ್ಯಭಾಗ್ಯ ನಾರಸಿಂಹ ಸತ್ಯಶೀಲ ಬಲಿಯವರದ ಕ್ಷಿತಿಪದಮನ ಕ್ಷಾತ್ರವೈರಿ ಪರಶುಧಾರಿ7 ವಿಶ್ವ ಬಿಂಬನು ರಾ ಜೀವಪೀಠನನ್ನು ಪಡೆದನೂ ರಾವಣಾರಿ ಕೃಷ್ಣ ಬುದ್ಧ ಭಾವಿಕಲ್ಕಿ ನಿತ್ಯಮಹಿಮ ಭಾವಜಾರಿ ಪ್ರೀಯ ಸಖನು 8 ಹಯಗ್ರೀವ ದತ್ತ ಋಷಭನೂ ಅಪ್ರ- ಮೇಯ ಹಂಸ ಶಿಂಶುಮಾರನು ಜಯಮುನೀಂದ್ರ ವಾಯುಹೃಸ್ಥ ಜಯೆಯ ರಮಣ ಕೃಷ್ಣವಿಠಲ ದಯದಿ ಪೊರೆಯಲೆಮ್ಮನೀಗ ಜಯವು ಎನುತ ನಲಿದು ನಲಿದು 9
--------------
ಕೃಷ್ಣವಿಠಲದಾಸರು
ಮರಣ ಕಾಲವ ತಿಳಿಸೋ ಮಧುಸೂದನಾ ಪ ಶರಣು ಬಂದವರ ಭಯಹರಣಾ ಅ.ಪ. ಸ್ನಾನಮಾಡಲಿಬೇಕು ಮೌನದಿಂದಿರಬೇಕು ಹರಿಜ್ಞಾನಪೂರ್ವಕ ಹರಿಯ ಧ್ಯಾನಬೇಕುನಾನಾ ವಿಷಯದ ಚಿಂತೆ ಮಾನಸದಿ ಬಿಡಬೇಕುದಾನ ಧರ್ಮಗಳನು ಮಾನಸದಿ ಮಾಡಬೇಕು 1 ಸುತ್ತಲು ಜನರುಗಳ ಹತ್ತಿರ ಕೂಡುತಲಿನಿತ್ಯ ಭಾಗವತಾದಿ ಶಾಸ್ತ್ರಗಳನುಮೃತ್ಯು ಕಾಲದಿ ಪರಿಸೆ ಶ್ರೋತ್ರದಿಂ ಕೇಳಿ ಯಮ-ಭೃತ್ಯರು ಓಡಲಿಬೇಕು ಎತ್ತಿ ಕಾಲುಗಳು 2 ಮಕ್ಕಳು ಮನೆಗಳಲಿ ಚಿಕ್ಕ ಯುವತಿಗಳಲ್ಲಿಮಿಕ್ಕಾದ ಪಶು ಕೃಷಿ ರೊಕ್ಕಗಳಲ್ಲಿಪೊಕ್ಕಿ ಮನಸಿಲಿ ವಿಷಯ ಸಿಕ್ಕಿ ತೊಡಕೆನೊ ಎನ್ನವಕ್ರವಾ ತೋರಿಸುತ ಮೆಲ್ಲ ಕೈ ಬಿಡಿಸಿನ್ನು 3 ಕಮಲ ಮಂದಹಾಸವ ತೋರೋಸಿಂಧು ಉದ್ಧರನೆ ವೃಂದಾವನೀಯೋ 4 ಸಿಂಧುವಿನ ತಟದಿ ಗೋವೃಂದದೊಳಗೆ ಚಂದದಲಿ ಕೊಳಲೂದೋ ಸುಂದರ ಮುಖ ಕಮಲಒಂದೇ ಮನದಲಿ ನೋಡಾನಂದದಲಿ ಮಾಡೋಇಂದಿರೇಶ ನಿನ್ನ ಮುಂದೆ ನಿಂತಿರುವಾನಾರಂದ ಮುನಿ ಗುರುವರ ಮಂದಸ್ಮøತಿ ನೀಡೋ 5
--------------
ಇಂದಿರೇಶರು
ವ್ಯರ್ಥದಲಿ ತೋರುವನೆ ತ್ರೈಲೋಕ್ಯಕರ್ತ ಭಕ್ತನಾದರೆ ಪರಮ ಮುಕ್ತಿ ಸೇರುವುದು ಪ ಉತ್ತಾನ ಭೂಪತಿಯ ಪುತ್ರನಂತಿರಬೇಕು ಸತ್ಯವೊಂದಿರಬೇಕು ಹರಿಶ್ಚಂದ್ರನಂತೆ ಭಕ್ತಿರಸವಿರಬೇಕು ಪ್ರಹ್ಲಾದನಂತೆ ಹಸ್ತವಿರಬೇಕು ಶ್ರೀರಾಮ ಭಕ್ತನಂತೆ 1 ವ್ರತವ ಮಾಡಲು ಬೇಕು ಅಂಬರೀಶನ ಪರಿಯ ಪಥವ ನಡೆಯಲು ಬೇಕು ವಿಹಗನಂತೆ ಶತಮುಖವ ರಚಿಸಿದರೆ ಪುರುಹೂತನಂತಿಹನು ಯತಿಯಾಗಬೇಕು ಗುರುಮಧ್ವಪತಿಯಂತೆ 2 ಗೀತಸೇವನೆ ಬೇಕು ನಾರದರ ತೆರನಂತೆ ಪ್ರೀತನಾಗಲು ಬೇಕು ಪಾರ್ಥನಂತೆ ನೀತಿಶಾಸ್ತ್ರವು ಬೇಕು ಶುಕಶೌನಕರಂತೆ ಖ್ಯಾತಿಯಿರಬೇಕು ರವಿಜಾತನಂತೆ 3 ಶುದ್ದನಾಗಿರಬೇಕು ಉದ್ಧವನ ತೆರನಂತೆ ಬದ್ಧನಾಗಿರಬೇಕು ಅಕ್ರೂರನಂತೆ ಹೊದ್ದಿಕೊಂಡಿರಬೇಕು ಫಣಿರಾಜನಂದದಲಿ ಮುದ್ದಾಗಿಯಿರಬೇಕು ಆ ವಿದುರನಂತೆ 4 ವೇದವೋದಲು ಬೇಕು ವ್ಯಾಸಮುನಿಯಂದದಲಿ ಆದರಿಸಬೇಕು ತಾ ಧರ್ಮನಂದದಲಿ ಪಾದಪೂಜೆಯು ಬೇಕು ಲಂಕಾಧಿಪತಿಯಂತೆ ಭೇದ ನೋಡಲು ಬೇಕು ವಸಿಷ್ಠನಂತೆ 5 ಸ್ಮøತಿಯ ನೋಡಲು ಬೇಕು ಪಾರಾಶರಂದದಲಿ ಮಿತಿಯಿರಲು ಬೇಕು ಆ ಭೀಷ್ಮನಂದದಲಿ ಜೊತೆಯಾಗಿಯಿರಬೇಕು ಪುಂಡರೀಕನ ತೆರದಿ ವ್ರತವಿರಲು ಬೇಕು ರುಕುಮಾಂಗನಂದದಲಿ 6 ದಾನ ಮಾಡಲು ಬೇಕು ಬಲಿಯ ಪ್ರೌಢಿಕೆಯಿಂದ ಧ್ಯಾನವಿರಬೇಕು ಋಷಿ ಗಾಗ್ರ್ಯನಂದದಲಿ ಪ್ರಾಣ ಸಂದೇಹದೊಳು ಕರಿರಾಜನಂದದಲಿ ಕಾಣಬೇಕಾ ಹರಿಯ ಅಜಮಿಳನ ತೆರದಿ 7 ಜಪಗಳನು ತಪಗಳನು ದಾನಧರ್ಮಂಗಳನು ಅಪರೂಪವಾಗಿರ್ದ ಪೂಜೆಗಳನು ಉಪವಾಸವನು ಮಾಡಿ ವ್ರತ ನೇಮ ನಿಷ್ಠೆಗಳ ಕಪಟವಿಲ್ಲದೆ ರಚಿಸಿ ಕಂಡರೈ ನಿನ್ನ 8 ಇವರಂತೆ ನೋಡುವರೆ ಸ್ಥಿರವಿಲ್ಲ ಬುದ್ಧಿಗಳು ಇವರ ದಾಸರ ದಾಸ ದಾಸ ನಾನು ನಿತ್ಯ ಮನದೊಳಗೆ ನಿಲುವಂತೆ ಭಾವಿಸೈ ಕೋನೇರಿ ವರಾಹತಿಮ್ಮಪ್ಪ 9
--------------
ವರಹತಿಮ್ಮಪ್ಪ
ಸತ್ತವರಿಗೆ ನೀನಳುತಲಿರುಮೆನ್ನೂಮತ್ತನಾಗಿ ಮಂದಜೀವಾ ಪಮೃತ್ಯುವೆಂಬರಿಪು ಕುತ್ತಿಕೆಡಹಿದಾಗಮತ್ತಾರಿಗಳುವೆಯೊ ಜೀವಾ ಅ.ಪನೆತ್ತಿಯ ಬಡುಕೊಂಬೆ ಜೀವಾಕತ್ತೆಯಂತೊದರದೆ ಬಿಡದೆ ಕಾಂತೆಯ ಬೆನ್ನಹತ್ತಿ ಹೋಗುತ್ತಿಹೆ ಜೀವಾ 1ಕತ್ತಲೆಯಂತಿಹ ನಿನ್ನ ವಿದ್ಯೆಯನುತೊತ್ತಳದುಳಿವರೆ ಜೀವಾಉತ್ತಮ ಜನ ಸಂಗವ ಮಾಡು ನಿನ್ನನೀನೆತ್ತಿಕೊ ಭವಕೂಪದಿಂದಾ 2ಏಳು ಶ್ರವಣ ಮನನವ ಮಾಡು ನೀನಿಂತುಘೋಳಿಟ್ಟರೆ ಫಲವೇನೂಬೀಳು ಗುರುವಿನ ಚರಣ ಕಮಲಗಳಲ್ಲಿನಾಳೆ ಮುಕ್ತಿ ಸುಖವುಂಟೂ 3ತಾಳು ಶೀತೋಷ್ಣಾದಿ ದೇಹಧರ್ಮಗಳನುಮೂಳ ಸುಮ್ಮನೆ ಕೆಡಬೇಡಾನಾಳೆ ನಾಡಿದ್ದು ಸಾಧಿಸುವೆನೆಂದೆನುತಲೆಹಾಳಾಗಬೇಡೆಲೊ ಜೀವಾ 4ಇತ್ತಲತ್ತ ಹಿಂದೆಮುಂದೆ ಕೆಳಗೆ ಮೇಲೆಉತ್ತಮ ಬೊಮ್ಮವೆಂದೆನುತಾಸತ್ಯವೆಂದು ಶೃತಿಬ್ರಹ್ಮಪುರಸ್ತಾದೆನುತ್ತ ಸಾರುತ್ತಿದೆ ಜೀವಾ 5ಮನೆಮಾರು ಧನ ನಿನ್ನತನು ಮೊದಲಾದವುಇನಿತು ನಿತ್ಯವಲ್ಲ ಜೀವಾಘನ ವಿರತಿಯ ಮಾಡು ಮನದಲ್ಲಿ ಧ್ಯಾನಿಸುವಿನುತ ಚೈತನ್ಯವ ಜೀವಾ 6ಅನುದಿನ ನಿನ್ನ ನಿಜವ ನೀತಿಳಿದರೆಳ್ಳನಿತುಶೋಕಮೋಹವಿಲ್ಲ ಜೀವಾಸನುಮತಿುಂದ ಗೋಪಾಲಾರ್ಯನ ಸೇರಿಚಿನುಮಯನಾಗೆಲೊ ಜೀವಾ 7
--------------
ಗೋಪಾಲಾರ್ಯರು
ತನುವ ನೀರೊಳಗದ್ದಿ ಫಲವೇನುಮನದಲ್ಲಿ ದೃಢಭಕುತಿ ಇಲ್ಲದ ಮನುಜನು ಪ.ಧಾನ - ಧರ್ಮಗಳನು ಮಾಡುವುದೇ ಸ್ನಾನಜಾÕನ - ತತ್ತ್ವಂಗಳ ತಿಳಿಯುವುದೇ ಸ್ನಾನಹೀನಪಾಪಂಗಳ ಬಿಡುವುದೆ ಸ್ನಾನಧ್ಯಾನದಿ ಮಾಧವನ ನಂಬುವುದೆ ಸ್ನಾನ 1ಗುರುಗಳ ಶ್ರೀಪಾದತೀರ್ಥವೆ ಸ್ನಾನಹಿರಿಯರ ದರುಶನ ಮಾಡುವುದೆ ಸ್ನಾನಕರೆದು ಅನ್ನವನು ಇಕ್ಕುವುದೊಂದು ಸ್ನಾನಸಿರಿಹರಿತರಣ ನಂಬುವುದೊಂದು ಸ್ನಾನ 2ದುಷ್ಟರ ಸಂಗವ ಬಿಡುವುದೊಂದು ಸ್ನಾನಕಷ್ಟಪಾಪಂಗಳನು ಹರಿವುದೆ ಸ್ನಾನಸೃಷ್ಟಿಯೊಳಗೆ ಸಿರಿಪುರಂದರವಿಠಲನಮುಟ್ಟಿ ಭಜಿಸಿ ಪುಣ್ಯ ಪಡೆವುದೇ ಸ್ನಾನ 3
--------------
ಪುರಂದರದಾಸರು