ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾರೆಂದು ಹಸೆಗೆ ಕರೆವೆÀನು ಕ್ಷೀರಾಬ್ಧಿಶಯನನೆ ಸಾರಸನಯನನೇ ಪ. ಕ್ಷೀರಾಬ್ಧಿಜಾವರ ಮೇರುಗಂಭೀರನೆ ನೀರಜಭವಪಿತ ಮಾರಹರಾರ್ಚಿತ ಚಾರುನೀರದಗಾತ್ರ ಪರಮ ಪವಿತ್ರ ಅ.ಪ ಧರಣೀಸುರರ ಮೊರೆಗಳನಾಲಿಸಿ ಧರೆಯೊಳಗವತರಿಸಿ ನರರೂಪಧರಿಸಿ ಧರಣಿಪ ದಶರಥತರಳನೆಂದೆನಿಸಿ ಧರೆಯ ಭಾರವನಿಳಿಸಿ ಕರುಣಿಸು ಮನವೆರಸಿ 1 ಅಸುರೆ ತಾಟಕಿಯ ಅಸುವನಳಿದು ದುಷ್ಟ ನಿಶಿಚರರನು ಸದೆದು ಅನುಜನೊಡಗೊಂಡು ಕುಶಿಕನಂದನನ ಕ್ರತುವನು ತಾ ಕಾಯ್ದು ಅಸಮ ಶೂರನೆನಿಸಿ ಅಮರರ ಮನತಣಿಸಿ 2 ಶಿಲೆಯ ಶಾಪವಕಳೆದು ಲಲನೆಯ ಪೂಜೆಗೊಲಿದು ಬಲುಹಿನಿಂದಲೆ ಬಂದು ಹರಧನು ಮುರಿದು ಲಲನೆ ಜಾನಕಿಯ ನಲವಿನಿಂ ಕೈಪಿಡಿದು ಬಲುಗರ್ವಿತ ಭಾರ್ಗವ ಮದಮುರಿದೆ ಸಲಹೆನ್ನ 3 ಈಶವಿನುತ ಶ್ರೀ ಶೇಷಾಚಲ ನಿಲಯನೆ ದಾಸರಮನದೊಳು ವಾಸವಾಗಿಹನೇ ವಾಸವಾದ್ಯಮರ ಪೋಷಕನೆನಿಸಿಹನೆ ಭಾಸುರವದನನೆ ಶ್ರೀಸತೀಸದನನೆ ನೀಂ ನಲಿದು 4
--------------
ನಂಜನಗೂಡು ತಿರುಮಲಾಂಬಾ
ಮಂಗಲವಾ ಪಾಡುವೆನಾ ಮಂಗಲಾಂಗ ಗುರುದೇವಗೆ ಸಂಗರಹಿತ ಸಂಪೂರ್ಣಗೆ ಕಂಗೊಳಿಸುವ ಪರಮಾತ್ಮಗೆ ಪ ಬೋಧಿಸುತಲಿ ಪ್ರೇಮದಿಂದ ಸಾಧನೆ ಸಾಧ್ಯಗಳ ಮರ್ಮ ಛೇದಿಸುತಲಿ ಭವಜಾಲವ ಮೋದವೀವ ಘನ ಮಹಿಮಗೆ 1 ಬಲು ಶಾಸ್ತ್ರದ ತೊಡಕಿಲ್ಲದೆ ಸುಲಭದಿಂದ ಬೋಧಿಸುವಾ ತಿಳಿ ಆತ್ಮನೇ ನೀನೆನ್ನುತ ಘನ ಶಾಂತಿಯ ನೀಡಿದವಗೆ 2 ನಾರಾಯಣ ಗುರುದೇವನ ಪರಮ ಪ್ರೀತಿ ಪಾತ್ರನೀತ ಧರೆಯೊಳಗವತರಿಸಿದ ಶ್ರೀ ಗುರುಶಂಕರದೇವನಿಗೆ 3
--------------
ಶಂಕರಭಟ್ಟ ಅಗ್ನಿಹೋತ್ರಿ